ಸಿರವಾರ- ಡಿ.20ರವರೆಗೆ ಕೆಳಭಾಗಕ್ಕೆ ನೀರು ಹರಿಸಲು ಒತ್ತಾಯ

Contributed by: mgsirwar226@gmail.com|Vijaya Karnataka•
20
ಡಿ.20ರವರೆಗೆ ಕೆಳಭಾಗಕ್ಕೆ ನೀರು ಹರಿಸಲು ಒತ್ತಾಯ

ವಿಕ ಸುದ್ದಿಲೋಕ ಸಿರವಾರ
ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ಡಿಸೆಂಬರ್ 20ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ರೈತರು ಬುಧವಾರ ಪಟ್ಟಣದ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಳೆ ಅಭಾವದ ಹಿನ್ನೆಲೆಯಲ್ಲಿಒಂದೇ ಬೆಳೆಗೆ ಸಮರ್ಪಕ ನೀರು ಒದಗಿಸಬೇಕು ಹಾಗೂ ಬೆಳೆ ರಕ್ಷಣೆಗೆ ಅಗತ್ಯವಿರುವ ನೀರನ್ನು ನಿಗದಿತ ಅವಧಿಯವರೆಗೆ ಹರಿಸಬೇಕು. ಡಿ.18ರಂದು ಬೆಂಗಳೂರಿನ ವಿಕಾಸಸೌಧದಲ್ಲಿನಡೆಯುವ ಐಸಿಸಿ ಸಭೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಲಾಯಿತು. ಒಂದು ವೇಳೆ ನೀರು ಹರಿಸದಿದ್ದಲ್ಲಿನಿರ್ದಿಷ್ಟ ಅವಧಿಯವರೆಗೆ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಜೆ.ಶರಣಪ್ಪಗೌಡ, ಶಂಕರಗೌಡ ಹರವಿ, ಅರಕೇರಿ ಮಲ್ಲಪ್ಪ ಸಾಹುಕಾರ್ , ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪುರುಷೋತ್ತಮ ರೆಡ್ಡಿ, ಕಲ್ಲೂರು ಬಸವರಾಜ ನಾಯಕ, ಅಮರೇಶ ಚಾಗಭಾವಿ, ಎಂ.ಪ್ರಕಾಶಪ್ಪ, ಬೈನಾರ್ ರಾಮಯ್ಯ, ಶಿವಗೇಣಿ ಸಿರವಾರ, ಚನ್ನಬಸವ ಕುಂಬಾರ್ , ಹುಲಿಗೇಪ್ಪ ಕರಿಬಿಲ್ಕರ್ , ಕಡದಿನ್ನಿ ಭೀರಪ್ಪ, ಗುರುದೇವ ನಾಯಕ ಜಕ್ಕಲದಿನ್ನಿ ಸೇರಿ ಅನೇಕ ರೈತರು ಭಾಗವಹಿಸಿದ್ದರು.

* ಫೋಟೊ ಬೇಡ- ತಲೆ ಕಾಣುತ್ತವೆ.