2 ಲಕ್ಷ ರೂ.ಗೂ ಅಧಿಕ ನೀರಿನ ಬಿಲ್

Contributed by: kollegalamalige@gmail.com|Vijaya Karnataka•
2
-ನಗರಸಭೆ ಅಧಿಕಾರಿಗಳ ಎಡವಟ್ಟಿಗೆ ಗ್ರಾಹಕ ಅಲೆದಾಟ

ವಿಕ ಸುದ್ದಿಲೋಕ ಕೊಳ್ಳೇಗಾಲ
ಪಟ್ಟಣದ ದಕ್ಷಿಣ ಬಡಾವಣೆ ನಿವಾಸಿ, ನಿವೃತ್ತ ಡಿಡಿಪಿಐ ಪಿ. ಮಂಜುನಾಥ್ ಅವರಿಗೆ ಸೇರಿದ ಸತ್ಯನಾರಾಯಣಸ್ವಾಮಿ ದೇವಸ್ಥಾನಕ್ಕೆ ನಗರಸಭೆಯು 8 ತಿಂಗಳ ಕುಡಿಯುವ ನೀರಿನ ಬಳಕೆಗೆ ಒಟ್ಟು 2,63,932 ರೂ. ಬಿಲ್ ನೀಡಿ ಆತಂಕ ಮೂಡಿಸಿದೆ.

ನಗರಸಭೆ ವ್ಯಾಪ್ತಿಯಲ್ಲಿ24*7 ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಂಡಿದ್ದು, ಮೀಟರ್ ಗಳನ್ನು ಅಳವಡಿಸಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿಯೋಜನೆ ಮುಕ್ತಾಯಗೊಳ್ಳದ ಕಾರಣ ದರ ನಿಗದಿಯಾಗಿರಲಿಲ್ಲ. ಪ್ರಾಯೋಗಿಕವಾಗಿ ಮಾಸಿಕ ಗರಿಷ್ಠ 150 ರೂ. ಅಥವಾ ಕಡಿಮೆ ಇದ್ದರೆ ಅದಕ್ಕೆ ತಕ್ಕಂತೆ ಬಿಲ್ ನೀಡಲಾಗುತ್ತಿತ್ತು.

ಆದರೆ, ಇತ್ತೀಚೆಗೆ ನಗರಸಭೆಯು, ಸೆಪ್ಟೆಂಬರ್ ವರೆಗೆ 4,697 ಕಿ.ಲೀ ನೀರಿಗೆ 2,55,372 ರೂ. ಹಾಗೂ ಅಕ್ಟೋಬರ್ ನಲ್ಲಿ172 ಕಿ.ಲೀ ನೀರಿಗೆ 8,560 ರೂ. ಸೇರಿಸಿ ಒಟ್ಟು 4,869 ಕಿ.ಲೀ ಬಳಕೆಗೆ 2,63,932 ರೂ. ಪಾವತಿಸುವಂತೆ ನ. 17ರಂದು ಬಿಲ್ ನೀಡಿದೆ. ಇದರಿಂದ ಕಂಗಾಲಾಗಿರುವ ಗ್ರಾಹಕ ಮಂಜುನಾಥ್ , ಹಿಂದಿನ ಎಲ್ಲಾ ರಸೀದಿಗಳನ್ನು ಹಿಡಿದುಕೊಂಡು ಕಚೇರಿಗೆ ಅಲೆದಾಡುತ್ತಿದ್ದರೂ ಅಧಿಕಾರಿಗಳಿಂದ ತುರ್ತು ಸ್ಪಂದನೆ ಸಿಗುತ್ತಿಲ್ಲಎಂದು ಆರೋಪಿಸಿದ್ದಾರೆ.

====

ಜೂ. 11ರ ನಿರ್ಣಯದಂತೆ ಮಾಸಿಕ ಗರಿಷ್ಠ 150 ರೂ. ಅಥವಾ ರೀಡಿಂಗ್ ಆಧರಿಸಿ ದರ ಪಾವತಿಸಬೇಕಿದೆ. ತಾಂತ್ರಿಕ ದೋಷದಿಂದ ಸತ್ಯನಾರಾಯಣಸ್ವಾಮಿ ದೇಗುಲಕ್ಕೆ 2 ಲಕ್ಷ ರೂ.ಗೂ ಅಧಿಕ ಬಿಲ್ ಬಂದಿರಬಹುದು. ಇದನ್ನು ಶೀಘ್ರವೇ ಸರಿಪಡಿಸುತ್ತೇವೆ.

ಲಕ್ಷ್ಮಿ , ಜೆಇ, ನಗರಸಭೆ ಕುಡಿಯುವ ನೀರು ವಿಭಾಗ

====

18ಕೆಜಿಎಲ್ -2

ಕೊಳ್ಳೇಗಾಲ ನಗರಸಭಾ ಆಡಳಿತ ಸತ್ಯನಾರಾಯಣಸ್ವಾಮಿ ದೇವಸ್ಥಾನಕ್ಕೆ ನೀರು ಬಳಕೆ ಸಂಬಂಧ ಲಕ್ಷಾಂತರ ರೂ. ಬಿಲ್ ನೀಡಿರುವ ಪ್ರತಿ.

--

ದೇವಸ್ಥಾನದ ಫೋಟೋ ಇದೆ.