ಟಾಪ್ ರೈಟ್

Contributed by: kiran.b@timesofindia.com|Vijaya Karnataka•
actress director sangeetha shringeri a perfect plan is essential for film release
ಸಂಗೀತಾ ಸಿನಿ ಫಾರ್ಮುಲಾ

-ಮೇಕಿಂಗ್ ಟು ರಿಲೀಸ್
ಇಂಟ್ರೊ

ಸಿನಿಮಾದಲ್ಲಿನಟಿಸಲು ಅನುಭವಿ ಕಲಾವಿದರು ಹಾಗೂ ಜನರಿಗೆ ತಲುಪಿಸಲು ಪರ್ಫೆಕ್ಟ್ ಪ್ಲ್ಯಾನ್ ಬಹಳ ಮುಖ್ಯ ಎಂದು ನಟಿ ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಮಲ್ವೀರ

ನಟಿ ಸಂಗೀತಾ ಶೃಂಗೇರಿ ರಿಯಾಲಿಟಿ ಶೋ ಗೆದ್ದ ಬಳಿಕ ಸಿನಿಮಾ ಆಯ್ಕೆಯಲ್ಲಿಜಾಗರೂಕರಾಗಿದ್ದಾರೆ. ಸದ್ಯಕ್ಕೆ ತಮ್ಮ ನಟನೆಯ ಹಾಗೂ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಚಿತ್ರದ ಶೂಟಿಂಗ್ ಅನುಭವದ ಜತೆಗೆ ಹೊಸ ಸಿನಿಮಾ ಆಯ್ಕೆಯಲ್ಲಿಕಥೆ, ಪಾತ್ರದ ಜತೆಗೆ ಚಿತ್ರತಂಡ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆಯೂ ಯೋಚಿಸುವುದಾಗಿ ತಿಳಿಸಿದ್ದಾರೆ.

ರಂಗ ಕಲಾವಿದರೊಂದಿಗೆ ನಟನೆ

‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ಯಲ್ಲಿನಟಿಸಿದ ಅನುಭವ ಅದ್ಭುತವಾಗಿತ್ತು. ಒಂದಿಡೀ ಸಿನಿಮಾದಲ್ಲಿಬರೀ ರಂಗಭೂಮಿ ಕಲಾವಿದರ ಜತೆಗೆ ನಾನು ಕೆಲಸ ಮಾಡಿದ್ದು ಇದೇ ಮೊದಲು. ಅದರಲ್ಲೂಕರಾವಳಿ ಭಾಗದ ಅಪ್ಪಟ ರಂಗಭೂಮಿ ಕಲಾವಿದರೊಂದಿಗೆ ನಾನು ನಟಿಸಿದ ಮೊದಲ ಸಿನಿಮಾವಿದು. ನನ್ನ ಈ ಹಿಂದಿನ ಎಲ್ಲಾಚಿತ್ರಗಳಲ್ಲಿಬಹುತೇಕರು ಸಿನಿಮಾ ಕಲಾವಿದರೇ ಇದ್ದರು. ಇಡೀ ತಾರಾಗಣ, ತಂತ್ರಜ್ಞರ ತಂಡದವರೂ ರಂಗಭೂಮಿ ಹಿನ್ನಲೆಯವರಿದ್ದರು. ಇವರ ನಟನೆ ಜತೆಗೆ ವ್ಯಕ್ತಿತ್ವದಲ್ಲಿನಾನು ಗಮನಿಸಿದ ವಿಶೇಷವೆಂದರೆ ಎಲ್ಲರೂ ಸರಳ ಸ್ವಭಾವದವರು. ರಂಗಭೂಮಿಯಿಂದ ಬಂದು ಸಿನಿಮಾದಲ್ಲಿದೊಡ್ಡ ಹೆಸರು ಮಾಡಿರುವ ನಟಿ ಮಾನಸಿ ಸುಧೀರ್ ಇದರಲ್ಲಿನನ್ನ ತಾಯಿ ಪಾತ್ರದಲ್ಲಿದ್ದು, ತಂದೆಯಾಗಿ ದೀಪಕ್ ರೈ ನಟಿಸಿದ್ದಾರೆ. ಇವರೆಲ್ಲರು ಕರಾವಳಿ ಥಿಯೇಟರ್ ನಲ್ಲಿಬಹಳ ಹೆಸರು ಮಾಡಿದವರು. ನಟನೆ ಇವರಿಗೆ ಒಲಿದಿದೆ. ಇವರು ಸ್ಪಾಟ್ ನಲ್ಲೇ ನಟನೆಯನ್ನು ಎಷ್ಟು ಇಂಪ್ರೂವೈಸ್ ಮಾಡುತ್ತಿದ್ದರು ಎಂದರೆ ಸಿನಿಮಾನೇ ಗೊತ್ತಿರದ ಒಬ್ಬ ನಿರ್ದೇಶಕ ಇವರನ್ನು ಕಾಸ್ಟ್ ಮಾಡಿಕೊಂಡರೆ ಶೂಟಿಂಗ್ ಗೆ ಬಂದರೂ ಸಾಕು ಅರಾಮವಾಗಿ ಸಿನಿಮಾ ಮುಗಿಸಬಹುದು. ಅಷ್ಟು ಅರ್ಥೈಸಿಕೊಂಡು ನಟಿಸುತ್ತಾರೆ. ಇವರಿಂದ ನನಗೆ ತುಂಬಾ ವಿಷಯ ಕಲಿಯಲು ಸಿಕ್ಕಿತು’ ಎಂದು ಸಂಗೀತಾ ಶೃಂಗೇರಿ ವಿವರಿಸಿದ್ದಾರೆ.

ಚಿತ್ರ ಬಿಡುಗಡೆಗೆ ಯೋಜನೆ ಮುಖ್ಯ

ಪದ್ಮನಾಭ ಆ್ಯಂಡ್ ಫ್ಯಾಮಿಲಿ ಬಳಿಕ ಯಾವುದೇ ಸಿನಿಮಾ ಒಪ್ಪಿಲ್ಲಎಂದು ಹೇಳಿರುವ ಸಂಗೀತಾ, ‘ಕೆಲವು ಚಿತ್ರಗಳು ಮಾತುಕತೆ ಹಂತದಲ್ಲಿವೆ. ಕೆಲವರು ಅದ್ಭುತ ಕಥೆ ಸಿದ್ಧಪಡಿಸಿ ತರುತ್ತಾರೆ, ಆದರೆ ಅವರ ಬಳಿ ಉತ್ತಮ ನಿರ್ಮಾಪಕರು ಇರುವುದಿಲ್ಲ. ಒಂದು ತಂಡ ಹೇಗಿರಬೇಕು ಎಂದರೆ ಚಿತ್ರವನ್ನು ಆರಂಭಿಸಿದಾಗ ಇರುವ ಬೆಂಬಲ ಹಾಗೂ ಜೋಶ್ ಸಿನಿಮಾ ಮುಗಿಯುವವರೆಗೂ ಇರಬೇಕು. ಈಗಿನ ಬಹುತೇಕ ಸಿನಿಮಾ ಮೇಕರ್ಸ್ ಶೂಟಿಂಗ್ ವರೆಗೆ ಮಾತ್ರ ಖರ್ಚುಗಳನ್ನು ಲೆಕ್ಕ ಹಾಕಿರುತ್ತಾರೆ, ಆದರೆ ರಿಲೀಸ್ ಯೋಜನೆಯನ್ನು ಮರೆತೇ ಬಿಟ್ಟಿರುತ್ತಾರೆ. ಬಿಡುಗಡೆಯ ಹಂತದಲ್ಲಿಪ್ರಚಾರಕ್ಕೆ ಖರ್ಚು ಮಾಡದಿದ್ದರೆ ಎಷ್ಟೇ ಒಳ್ಳೆಯ ಕಥೆಯ ಬೆಸ್ಟ್ ಸಿನಿಮಾ ಮಾಡಿದರೂ ಅದನ್ನು ಈಗಿನ ಜನರೇಶನ್ ಗೆ ತಲುಪಿಸುವುದು ಕಷ್ಟ. ಆರಂಭದಿಂದ ಬಿಡುಗಡೆಯವರೆಗೆ ಸೂಕ್ತ ಪ್ಲ್ಯಾನ್ ಮಾಡಿಕೊಂಡು ಬರುವ ಚಿತ್ರತಂಡದೊಂದಿಗೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ. ಪ್ರಚಾರಕ್ಕೆ ನನ್ನ ಬಳಿಯೇ ಸೆಲೆಬ್ರಿಟಿಗಳನ್ನು ಆಹ್ವಾನಿಸಲು ಹೇಳಿದ ಉದಾಹರಣೆಗಳಿವೆ. ಈಗಿನ ಸುಧಾರಿತ ತಂತ್ರಜ್ಞಾನ ಬಳಸಿ ಹೇಗೆ ಒಂದು ಸಿನಿಮಾವನ್ನು ಪ್ರಚಾರ ಮಾಡುಬಹುದು ಎನ್ನುವುದರ ಅರಿವಿರಬೇಕು. ಇದರಿಂದ ಸಿನಿಮಾವನ್ನು ನಾವು ಅಂದುಕೊಂಡಂತೆ ಜನರಿಗೆ ತಲುಪಿಸುವ ಪ್ರಯತ್ನ ಮಾಡಬಹುದು’ ಎಂದಿದ್ದಾರೆ.