ಮಂಗಳೂರು: ಬೆಂಗಳೂರಿನಲ್ಲಿಇತ್ತೀಚೆಗೆ ನಡೆದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟದ ವುಶು ಸ್ಪರ್ಧೆಯಲ್ಲಿದಕ್ಷಿಣ ಕನ್ನಡ ವುಶು ಅಸೋಸಿಯೇಶನ್ ಪ್ರತಿನಿಧಿಸಿದ ಟೀಮ್ ಇಮ್ಮಾರ್ಟಲ್ಸ್ ತಂಡವು ಒಟ್ಟು 16ಪದಕಗಳನ್ನು ಗೆದ್ದುಕೊಂಡಿದೆ.ತಂಡದ ಕ್ರೀಡಾಪಟುಗಳು 3 ಚಿನ್ನ, 6 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಮಿವುಲ್ಲಾ, ಆಶ್ನಾ ಹಾಗೂ ಹರ್ಷಲ್ ಚಿನ್ನದ ಪದಕ ಪಡೆದಿದ್ದಾರೆ. ಫಾಜಿಲ್ , ಮುಸ್ಲಿಹಾ, ಆಯಾಂಶ್ , ಭವ್ಯೇಶ್ , ಸಾನ್ವಿ ಹಾಗೂ ರುಹೈಮಾ ಬೆಳ್ಳಿ ಪದಕ ಗೆದ್ದಿದ್ದಾರೆ. ಫಹಾಮ್ , ಅನ್ಹಾ, ವ್ರಶಮ್ , ಅನೀಶ್ , ಧ್ರುವಿನ್ , ಮಿಫಾ ಹಾಗೂ ಶಿಫಾ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ತಂಡದ ತರಬೇತುದಾರರಾಗಿ ಸಾನ್ಸಿಯಾ ಕಾರ್ಯನಿರ್ವಹಿಸಿದ್ದರು. ಮಿನಿ ಒಲಿಂಪಿಕ್ ಕ್ರೀಡಾಕೂಟದ ವುಶು ಸ್ಪರ್ಧೆಯಲ್ಲಿಆರ್ . ಡೇನಿಯಲ್ , ಜಯಶ್ರೀ ಡಿ. ಹಾಗೂ ರೋಹನ್ ಎಸ್ . ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು ಎಂದು ದಕ್ಷಿಣ ಕನ್ನಡ ವುಶು ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಮಾಸ್ಟರ್ ರೋಹನ್ ಎಸ್ . ಪ್ರಕಟಣೆಯಲ್ಲಿತಿಳಿಸಿದ್ದಾರೆ.