ಬದುಕಿಗೆ ಆಧ್ಯಾತ್ಮಿಕ ಅಗತ್ಯ

Contributed by: mudholvk@gmail.com|Vijaya Karnataka•
the pricelessness of spirituality in stressful life
ಬದುಕಿಗೆ ಆಧ್ಯಾತ್ಮಿಕ ಅಗತ್ಯ

ವಿಕ ಸುದ್ದಿಲೋಕ ಮುಧೋಳ
‘‘ಇಂದಿನ ಒತ್ತಡದ ಬದುಕಿಗೆ ಆಧ್ಯಾತ್ಮಿಕ ಚಿಂತನೆಗಳು ಅಗತ್ಯ. ಈ ಹಿನ್ನೆಲೆಯಲ್ಲಿವೇದಾಂತ ಪರಿಷತ್ ಕೆಲಸ ಮಾಡುತ್ತಿದೆ,’’ ಎಂದು ಅಂಕಲಿಯ ವೀರಭದ್ರೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಮುಗಳಖೋಡದಲ್ಲಿಗುರುಪಾದೇಶ್ವರರ ಪುಣ್ಯಸ್ಮರಣೆ ಹಾಗೂ 41ನೇ ವೇದಾಂತ ಪರಿಷತ್ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘‘ ನಮ್ಮ ದೇಶದಲ್ಲಿಮಠಗಳ ಪರಂಪರೆಯಿಂದ ಹಲವು ಉತ್ತಮ ಕಾರ್ಯಗಳಾಗಿವೆ. ಮಠದಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿಎಲ್ಲರೂ ಭಾಗವಹಿಸುವ ಅವಕಾಶ ದೊರೆಯುತ್ತದೆ. ಜತೆಗೆ ಧಾರ್ಮಿಕ ಕಾರ್ಯಕ್ರಮಗಳಿಂದ ಮಠಗಳು ಮನಸ್ಸಿಗೆ ನೆಮ್ಮದಿ ತರುವ ತಾಣವಾಗುತ್ತವೆ,’’ ಎಂದರು.

ಗುರುಪಾದೇಶ್ವರ ಮಠದ ಪೀಠಾಧಿಪತಿ ರಾಮಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ಪ್ರಣವಾನಂದ ಶ್ರೀಗಳು, ಕೀರ್ತನಕಾರ ಗುರುನಾಥ ಶಾಸ್ತ್ರಿಗಳು, ಬಸಯ್ಯ ಶ್ರೀಗಳು, ಕುಳಲಿಯ ಶಂಕರಾನಂದ ಶ್ರೀಗಳು, ದುಂಡಪ್ಪ ಶರಣರು, ಶಿವಯ್ಯ ಶಾಸ್ತ್ರಿ ಇದ್ದರು.

ಫೋಟೊ 17 ಎಂಡಿಎಲ್ 2

ಮುಧೋಳ ತಾಲೂಕಿನ ಮುಗಳಖೋಡದ ಗುರುಪಾದೇಶ್ವರ ಮಠದಲ್ಲಿ41ನೇ ವೇದಾಂತ ಪರಿಷತ್ ಗೆ ಅಂಕಲಿ ವೀರಭದ್ರೇಶ್ವರ ಶ್ರೀ ಚಾಲನೆ ನೀಡಿದರು.