*ನಿರ್ಲಕ್ಷ್ಯದಿಂದ ಬತ್ತಿದ ಜೀವನಾಡಿಗಳು*32 ಬಾವಿಗಳ ಊರಿಗೆ ನಾಲ್ಕು ದಿನಕ್ಕೊಮ್ಮೆ ನೀರು!
*ಶತಮಾನಗಳ ಹಿಂದೆ ದೂರದೃಷ್ಟಿಯಿಂದ ನಿರ್ಮಿಸಿದ್ದ ಬಾವಿಗಳು
*ಐತಿಹಾಸಿಕ ಜಲಸಂಪತ್ತಿನ ಸಂರಕ್ಷಣೆಗೆ ಜನರ ಆಗ್ರಹ
ಬಾವಿಗಳ ಊರಿಗೆ ಬರ!
ರಾಜಶೇಖರಸ್ವಾಮಿ ಮಾನ್ವಿ
್ಟa್ಜashಛಿka್ಟsಡಿಞyಞhಞಃಜಞaಜ್ಝಿ.್ಚಟಞ
ಒಂದು ಕಾಲದಲ್ಲಿಗ್ರಾಮದ ಜನರ ದಾಹ ನೀಗಿಸುತ್ತಿದ್ದ ಬಾವಿಗಳು, ಬೇಸಿಗೆಯಲ್ಲೂನೀರಿನ ಸೆಲೆಯಾಗಿದ್ದ ಜಲಮೂಲಗಳು ಇಂದು ನಿರ್ಲಕ್ಷ್ಯಕ್ಕೆ ಗುರಿಯಾಗಿವೆ. 32 ಬಾವಿಗಳ ಐತಿಹಾಸಿಕ ಪರಂಪರೆ ಹೊಂದಿರುವ ಪಟ್ಟಣದ ಜನರು ಈಗ ಕುಡಿಯುವ ನೀರಿಗಾಗಿ ನಾಲ್ಕು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ!
ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿಪುರಸಭೆಯಿಂದ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಹಿಂದೆ ಜನರ ಕುಡಿಯುವ ನೀರಿನ ಅಗತ್ಯ ಪೂರೈಸಲು ನಾನಾ ಸಮುದಾಯಗಳು ಹಾಗೂ ಅಂದಿನ ಆಡಳಿತಗಾರರು ಪಟ್ಟಣದ ವಿವಿಧೆಡೆ 32 ಬಾವಿ ನಿರ್ಮಿಸಿದ್ದರು. ಇವು ಕೇವಲ ನೀರಿನ ಮೂಲಗಳಾಗಿರದೆ, ಪಟ್ಟಣದ ಸಾಮಾಜಿಕ, ಧಾರ್ಮಿಕ ಹಾಗೂ ಐತಿಹಾಸಿಕ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು.
ಇತಿಹಾಸ:
ಕ್ರಿ.ಶ. 17ರಿಂದ 19ನೇ ಶತಮಾನದ ಅವಧಿಯಲ್ಲಿನಿರ್ಮಾಣಗೊಂಡ ಹಿರೇಬಾವಿ, ಜಾಡರಬಾವಿ, ಜನ್ನಪ್ಪನ ಬಾವಿ, ತಮ್ಮಣ್ಣನ ಬಾವಿ, ಕಚೇರಿ ಬಾವಿ, ಉಪ್ಪಳದವರ ಬಾವಿ, ಕಲ್ಮಠದ ಬಾವಿ, ನಗರೇಶ್ವರ ಬಾವಿ ಸೇರಿ 32 ಬಾವಿಗಳು ಪಟ್ಟಣದ ಜಲಪರಂಪರೆಗೆ ಸಾಕ್ಷಿಯಾಗಿವೆ. ನಾನಾ ಒಂಬತ್ತು ಶಾಸನಗಳಲ್ಲಿಯೂ ಈ ಬಾವಿಗಳ ಉಲ್ಲೇಖವಿದೆ. ಆದರೆ, ನಿರ್ವಹಣೆಯ ಕೊರತೆಯಿಂದ ಬಹುತೇಕ ಬಾವಿಗಳು ಬಳಕೆಗೆ ಯೋಗ್ಯವಾಗಿಲ್ಲ. ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗಿದೆ.
ಕಲುಷಿತದ ಆತಂಕ:
ಪಟ್ಟಣದ ಪ್ರಮುಖ ಜಲಮೂಲವಾದ ಹಿರೇಬಾವಿ, ಬೇಸಿಗೆಯಲ್ಲಿಯೂ ಬತ್ತದೆ ನೀರು ಒದಗಿಸುತ್ತಿದೆ. ಆದರೆ, ಗಣೇಶ ಮೂರ್ತಿಗಳ ವಿಸರ್ಜನೆಗೆ ಈ ಬಾವಿಯನ್ನೇ ಬಳಸುತ್ತಿರುವುದರಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ನೀರು ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಹಸಿರು ಪಾಚಿ, ದುರ್ವಾಸನೆ ಹಾಗೂ ಸೊಳ್ಳೆಗಳ ಉತ್ಪತ್ತಿಯಿಂದ ಸುತ್ತಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ‘‘ಮಣ್ಣಿನ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ನೀಡಬೇಕು. ಅಲ್ಲದೆ, ಗಣೇಶ ಮೂರ್ತಿಗಳ ವಿಸರ್ಜನೆಗೆ ಪುರಸಭೆ ಪ್ರತ್ಯೇಕ ಕೆರೆ ವ್ಯವಸ್ಥೆ ಕಲ್ಪಿಸಬೇಕು,’’ ಎಂಬುದು ಸ್ಥಳೀಯರ ಒತ್ತಾಯ.
---
ಬಾಕ್ಸ್
ಬಾವಿಯ ನೋಟ
32
ಐತಿಹಾಸಿಕ ಬಾವಿಗಳು
50,000
ಪಟ್ಟಣದ ಅಂದಾಜು ಜನಸಂಖ್ಯೆ
4 ದಿನ
ನೀರಿನ ಪೂರೈಕೆಯ ಅಂತರ
9
ಬಾವಿಗಳ ಉಲ್ಲೇಖವಿರುವ ಶಾಸನಗಳು
---
ಹಿರೇಬಾವಿಯ ನಿರ್ವಹಣೆ ಇಲ್ಲದೆ ನೀರು ಹಸಿರು ಪಾಚಿಯಿಂದ ಕೂಡಿದೆ. ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಸುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು.
- ನಾಗರಾಜ ನಾಗಲಿಕಾರ್ ಗಬ್ಬೂರು ನಿವಾಸಿ
---
ಹಿರೇಬಾವಿಯ ಸ್ವಚ್ಛತೆಗೆ ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಪರಶುರಾಮ ದೇವಮಾನೆ ಪುರಸಭೆ ಮುಖ್ಯಾಧಿಕಾರಿ, ಮಾನ್ವಿ
---
17ರಿಂದ 19ನೇ ಶತಮಾನದಲ್ಲಿನಿರ್ಮಿಸಿದ 32 ಬಾವಿಗಳ ಕುರಿತು ಶಾಸನಗಳಲ್ಲಿಉಲ್ಲೇಖವಿದೆ. ಪುರಾತತ್ತ$್ವ ಇಲಾಖೆಯಿಂದ ಜೀರ್ಣೋದ್ಧಾರ ಕೈಗೊಂಡರೆ ಇತಿಹಾಸದ ಸಂರಕ್ಷಣೆಗೆ ಅನುಕೂಲವಾಗಲಿದೆ.
- ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಇತಿಹಾಸ ಸಂಶೋಧಕರು ಹಾಗೂ ಉಪನ್ಯಾಸಕರು, ಮಾನ್ವಿ