ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಿ

Contributed by: shankardp123@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಯಳಂದೂರು

ಈಗ ಬ್ಯಾಂಕಿಗ್ ವ್ಯವಸ್ಥೆ ಡಿಜಿಟಲೀಕರಣಗೊಂಡಿದೆ. ಆದರೆ ಇದರಲ್ಲಿಅನೇಕ ವಂಚನೆಗಳೂ ನಡೆಯುತ್ತವೆ. ಗ್ರಾಹಕರು ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ ಸಲಹೆ ನೀಡಿದರು.
ತಾಲೂಕಿನ ಕೆಸ್ತೂರು ಗ್ರಾಮದ ಮಾರಮ್ಮ ದೇಗುಲದ ಮುಂಭಾಗ ಗುರುವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಶ್ರಯದಲ್ಲಿನಡೆದ ಸಮಗ್ರ ಆರ್ಥಿಕ ಸೇರ್ಪಡೆ ಅಭಿಯಾನ ಕಾರ್ಯಕ್ರಮದಲ್ಲಿಮಾತನಾಡಿದರು.

‘‘ಡಿಜಿಟಲ್ ಬ್ಯಾಂಕಿಗ್ ನಲ್ಲಿಖಾತೆ ವಿವರ, ಸಂಖೆಯ, ಲಾಗಿನ್ ಐಡಿ, ಪಾಸ್ ವರ್ಡ್ , ಪಿನ್ , ಯುಪಿಐ ಪಿನ್ , ಒಟಿಪಿ, ಡಿಬಿಟ್ , ಕ್ರೆಡಿಟ್ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಕೆವೈಸಿ ನವೀಕರಣವಾಗಿಲ್ಲಎಂಬ ನೆಪದಲ್ಲಿಮೋಸ ನಡೆಯುವ ಅಪಾಯವಿದೆ. ಹಾಗಾಗಿ ಇಂತಹ ಕರೆÜ, ಮೆಸೇಜ್ ಬಂದರೆ ಏನನ್ನೂ ಮಾಡದೆ ಕೂಡಲೇ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು. ಅಪರಿಚಿತ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಾರದು, ಇ-ಮೇಲ್ ನ್ನು ಬ್ಯಾಂಕ್ ಖಾತೆ ಪ್ರವೇಶಕ್ಕೆ ಪ್ರತ್ಯೇಕವಾಗಿ ಮಾಡಿಕೊಂಡರೆ ಉತ್ತಮವಾಗಿರುತ್ತದೆ. ವಿದೇಶಿ ರವಾನೆ, ಕಮಿಷನ್ , ಸ್ವೀಕೃತಿ, ಅಥವಾ ಲಾಟರಿ ಗೆಲುವಿಗಾಗಿ, ಆರ್ ಬಿಐನಲ್ಲಿನಿಮ್ಮ ಪರವಾಗಿ ಹಣವನ್ನು ಠೇವಣಿ ಮಾಡವ ಸಲಹೆಗಳಿಂದ ಮೋಸ ಹೋಗಬಾರದು,’’ ಎಂದು ಸೂಚನೆ ನೀಡಿದರು.

‘‘ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀನ್ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ಇದನ್ನು ಮಾಡಿಸಿಕೊಳ್ಳಿ,’’ ಎಂದು ಸಲಹೆ ನೀಡಿದರು.

ಕೆಜಿಬಿ ವ್ಯವಸ್ಥಾಪಕ ಭಾಷ, ಪಿಡಿಒ ಮಹದೇವಸ್ವಾಮಿ, ಎನ್ ಆರ್ ಎಲ್ ಎಂ ರವಿ, ಶಿವಶಂಕರ್ , ಶ್ರೀಕಾಂತ್ , ಸುಬ್ಬರಾವ್ ಸೇರಿದಂತೆ ಅನೇಕರು ಇದ್ದರು.

ಸಿ ಎಚ್ ಏನ್ 19 ವೈ ಎಲ್ ಡಿ 4

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿನಡೆದ ಸಮಗ್ರ ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ ಮಾತನಾಡಿದರು. ಪಿಡಿಒ ಮಹದೇವಸ್ವಾಮಿ ಸೇರಿದಂತೆ ಇತರರು ಇದ್ದರು.