ಜ್ಞಾನದ ಜತೆಗೆ ಕೌಶಲ್ಯ ಮುಖ್ಯ

Contributed by: kollegalamalige@gmail.com|Vijaya Karnataka•
Vijay Karnataka
ಮೈಸೂರು ವಿವಿ ಕುಲಪತಿ ಪ್ರೋ.ಎನ್ .ಕೆ.ಲೋಕನಾಥ್

ಕೊಳ್ಳೇಗಾಲ ಪಟ್ಟಣದ ಮಾನಸ ವಿದ್ಯಾಸಂಸ್ಥೆಯ ಮಾನಸೋತ್ಸವದಲ್ಲಿ ಗುರುವಂದನಾ ಕಾರ್ಯಕ್ರಮ
ವಿಕ ಸುದ್ದಿಲೋಕ ಕೊಳ್ಳೇಗಾಲ

ಪಟ್ಟಣದ ಮಾನಸ ವಿದ್ಯಾಸಂಸ್ಥೆ ಆವರಣದಲ್ಲಿಮಾನಸೋತ್ಸವ-2026ರ 2ನೇ ದಿನವಾದ ಶನಿವಾರ ಗುರುವಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೋ.ಎನ್ .ಕೆ.ಲೋಕನಾಥ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಬರೀ ಶಿಕ್ಷಣ ಮಾತ್ರವಲ್ಲ. ಸಾಂಸ್ಕೃತಿಕವಾಗಿಯೂ ವಿದ್ಯಾರ್ಥಿಗಳನ್ನು ತೊಡಗಿಸಬೇಕು. ಬದುಕಿನಲ್ಲಿಶಿಕ್ಷಣ ಬಹಳ ಮುಖ್ಯ. ಶಿಕ್ಷಣದಿಂದ ಮಾತ್ರ ಸಕಲವನ್ನು ಸಾಧಿಸಲು ಸಾಧ್ಯ ಎಂದರು.

ಶಿಕ್ಷಣದ ಮೂಲ ಉದ್ದೇಶ ಉತ್ತಮ ನಾಗರಿಕರಾಗಬೇಕು. ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯ. ಜ್ಞಾನದ ಜತೆಗೆ ಕೌಶಲ್ಯ ಮುಖ್ಯ. ಕೌಶಲ್ಯದೊಂದಿಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕುಟುಂಬ, ಗ್ರಾಮ ಹಾಗೂ ಸಮಾಜದ ಸಕರಾತ್ಮಕ ಬದಲಾವಣೆಯ ಬುನಾದಿ ಶಿಕ್ಷಣ. ಪ್ರತಿಯೊಂದು ವಿಷಯಗಳಲ್ಲಿಯೂ ಸಾಮರ್ಥ್ಯವಿದೆ. ಜೀವನದಲ್ಲಿಶ್ರದ್ಧೆ, ಶ್ರಮವಿದ್ದರೆ ನಮ್ಮ ಗುರಿ ಮತ್ತು ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಜೀವನದಲ್ಲಿಹೊಸತನದ ಹುಡುಕಾಟವಿರಬೇಕು ಆಗ ಮಾತ್ರ ದೇಶಕ್ಕೆ ನಾವು ಕೊಡುಗೆ ನೀಡಬಹುದು ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಎಸ್ .ಶಿವರಾಜಪ್ಪ ಮಾತನಾಡಿ, ಮಾನಸ ಶಿಕ್ಷಣ ಸಂಸ್ಥೆಯ 30 ವರ್ಷಗಳ ಯಶಸ್ವಿಗೆ ಶಿಕ್ಷಕವೃಂದ ಹಾಗೂ ಪಾಲಕರ ಸಹಕಾರ ಬಹುಮುಖ್ಯವಾಗಿದೆ. ಸರ್ವ ಧರ್ಮಸಮನ್ವಯದ ಉತ್ಸವ ಮಾನಸೋತ್ಸವ ಎಂದು ಬಣ್ಣಿಸಿದರು.

ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪರಿಮಳ ನಾಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಳ್ಳೇಗಾಲದಲ್ಲಿನಡೆಯುವ ಮಾನಸ ಉತ್ಸವ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಶಿಕ್ಷಣ ಸಂಸ್ಥೆಯಲ್ಲಿರುವ ಶಿಸ್ತಿನಂತೆಯೇ ವಿದ್ಯಾರ್ಥಿಗಳಲ್ಲಿಯೂ ಶಿಸ್ತು ಇದೆ. ಈ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿಕಾರ್ಯದರ್ಶಿ ಡಾ.ಎಸ್ .ದತ್ತೇಶ್ ಕುಮಾರ್ ಮತ್ತು ಅಧ್ಯಕ್ಷ ಎಸ್ .ನಾಗರಾಜು ಅವರ ಪರಿಶ್ರಮ ಅಗಾಧವಾಗಿದೆ ಎಂದು ಹೇಳಿದರು.

ಆದಿ ಹೊನ್ನಾಯಕನಹಳ್ಳಿ, ಕಪ್ಪಡಿ ಕ್ಷೇತ್ರದ ಶ್ರೀಮಂಟೇಸ್ವಾಮಿ ಮಠದ ಪೀಠಾಧಿಪತಿ ಎಂ.ಎಲ್ . ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಆಶೀರ್ವಚನ ನೀಡಿ, ಜೀವನದಲ್ಲಿಸಮಾಜಮುಖಿ ಕೆಲಸ ಮಾಡಲು ಆಗಾಗ ಅವಕಾಶ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪುರಸ್ಕಾರದಲ್ಲಿಮಿಂದೆದ್ದ ವಿದ್ಯಾರ್ಥಿಗಳು!

ಇದೇ ವೇಳೆ ವೇದಿಕೆಯಲ್ಲಿ2025-27ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿಅತ್ಯುತ್ತಮ ದರ್ಜೆಯಲ್ಲಿತೇರ್ಗಡೆ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ಮೊದಲ ಹಂತದಲ್ಲಿಶೇ.85 ರಿಂದ ಶೇ.90 ರಷ್ಟು ಅಂಕಗಳಿಸಿದ ಕಲಾ ವಿಭಾಗದ 12, ವಾಣಿಜ್ಯ ವಿಭಾಗದ 25, ವಿಜ್ಞಾನ ವಿಭಾಗದ 40 ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕ ವೃಂದವನ್ನು ಸನ್ಮಾನಿಸಲಾಯಿತು.

ಮೈಸೂರಿನ ಅಖಿಲ ಭಾರತ ಮಿಲಿ ಕೌನ್ಸಿಲ್ ಅಧ್ಯಕ್ಷ ಹಜರತ್ ಮೌಲಾನ ಮಹಮ್ಮದ್ ಜಕಾವುಲ್ಲಾಆಶೀರ್ವಚನ ನೀಡಿದರು. ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ಕೆ.ರಾಮನ್ , ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್ .ದತ್ತೇಶ್ ಕುಮಾರ್ . ಅಧ್ಯಕ್ಷ ಎಸ್ .ನಾಗರಾಜು ಹಾಗೂ ಇತರರು ಇದ್ದರು.

21ಕೆಜಿಎಲ್ -2

ಕೊಳ್ಳೇಗಾಲ ಪಟ್ಟಣದ ಮಾನಸ ವಿದ್ಯಾಸಂಸ್ಥೆ ಆವರಣದಲ್ಲಿಮಾನಸೋತ್ಸವ ಅಂಗವಾಗಿ 2ನೇ ದಿನವಾದ ಶನಿವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿಆದಿ ಹೊನ್ನಾಯಕನಹಳ್ಳಿ, ಕಪ್ಪಡಿ ಕ್ಷೇತ್ರದ ಪೀಠಾಧಿಪತಿ ಎಂ.ಎಲ್ .ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇಅರಸ್ ಆಶೀರ್ವಚನ ನೀಡಿದರು.