ಕೂಸಿನಮನೆ ಕೇಂದ್ರಕ್ಕೆ ಎ.ಸಿ. ವಿಜಯಕುಮಾರ್ ಭೇಟಿ

Contributed by: pressbasu78@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಹುಕ್ಕೇರಿ

ತಾಲೂಕಿನ ಹುಲ್ಲೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಸಿನ ಮನೆ ಕೇಂದ್ರಕ್ಕೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎಎನ್ ಎಸ್ ಎಸ್ ಐಆರ್ ಡಿ) ತರಬೇತಿ ಕೇಂದ್ರದ ಹಿರಿಯ ಬೋಧಕ ಅರಕಲಗೂಡು ಸಿ. ವಿಜಯಕುಮಾರ್ ಶನಿವಾರ ಭೇಟಿ ನೀಡಿ ಸೌಕರ್ಯಗಳನ್ನು ಪರಿಶೀಲಿಸಿದರು.
ಕುಡಿಯುವ ನೀರು, ಶೌಚಾಲಯ, ಕೊಠಡಿಗಳ ಸ್ವಚ್ಛತೆ, ಗಾಳಿ- ಬೆಳಕಿನ ವ್ಯವಸ್ಥೆ, ಮಕ್ಕಳಿಗೆ ಆಟದ ಮತ್ತು ಕಲಿಕಾ ಸಾಮಗ್ರಿಗಳ ಲಭ್ಯತೆ, ರಜಿಸ್ಟರ್ , ಹಾಜರಾತಿ ಮತ್ತು ಮಕ್ಕಳ ಆರೋಗ್ಯ ದಾಖಲೆಗಳನ್ನು ಪರಿಶೀಲಿಸಿ ಸಂಬಂಧಿಸಿದವರಿಂದ ಮಾಹಿತಿ ಪಡೆದರು.

ಮಕ್ಕಳ ಪಾಲಕರು ಮತ್ತು ಗ್ರಾಪಂ ಅಧಿಕಾರಿಗಳ ಜತೆ ಸಮಾಲೋಚಿಸಿದ ಬಳಿಕ ಗ್ರಾಮದ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿದರು. ತಾಪಂ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ, ಪಿಡಿಒ, ಜಿಲ್ಲಾಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ಸಿಬ್ಬಂದಿ, ಆರೈಕೆದಾರರು ಇದ್ದರು.

- 21ಹುಕ್ಕೇರಿ 01

ಮೈಸೂರಿನ ಎಎನ್ ಎಸ್ ಎಸ್ ಐಆರ್ ಡಿ ತರಬೇತಿ ಕೇಂದ್ರದ ಹಿರಿಯ ಬೋಧಕ ಅರಕಲಗೂಡು ಸಿ. ವಿಜಯಕುಮಾರ್ ಅವರು ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದ ಕೂಸಿನ ಮನೆ ಪರಿಶೀಲಿಸಿ, ಮಾಹಿತಿ ಪಡೆದರು.