ಎಲ್ಲೂರಿನಲ್ಲಿಪ್ರಜಾಸೇವೆ ಆಂದೋಲನ ಸಭೆ

Contributed by: hkhejmadybs@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಪಡುಬಿದ್ರಿ

ನಂದಿಕೂರು ಕೈಗಾರಿಕಾ ವ್ಯಾಪ್ತಿಯಲ್ಲಿಕಾರ್ಯಾಚರಿಸುತ್ತಿರುವ ಎಮ್ 11 ಕಂಪೆನಿ ಹಾಗೂ ಎಲ್ಲೂರು ಗ್ರಾಮದಲ್ಲಿಸ್ಥಾಪನೆಯಾಗಿರುವ ಮೀನು ಸಂಸ್ಕರಣಾ ಘಟಕದಿಂದ ದುರ್ವಾಸನೆಗೆ ಉಂಟಾಗುತಿದ್ದು, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಎಲ್ಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿಶನಿವಾರ ನಡೆದ ಕಾಪು ತಾಲೂಕು ಪ್ರಜಾಸೇವೆ ಆಂದೋಲನಾ ಸಭೆಯಲ್ಲಿಆಗ್ರಹಿಸಿದ ಘಟನೆ ನಡೆಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಪರಿಸರ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಈ ಭಾಗದಲ್ಲಿಕೈಗಾರಿಕಾ ಅಭಿವೃದ್ಧಿಗಾಗಿ ಸರಕಾರ ಬೇಕಾಬಿಟ್ಟಿ ಅನುಮೋದನೆ ನೀಡಿದ್ದು, ಪರಿಸರ ಹಾನಿ ಬಗ್ಗೆ ಗಮನ ನೀಡದ ಕಾರಣ ಸ್ಥಳೀಯರು ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದರೂ ಜಿಲ್ಲಾಡಳಿತ ಗಾಢ ಮೌನ ವಹಿಸಿರಿಸುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಬಡಾ ಗ್ರಾಮ ಪಂಚಾಯಿತಿ ಪಿಡಿಓ ಸತೀಶ್ ಅವರು, ನಗರ ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಲ್ಲಿಯೋಜನಾ ಪ್ರಾಧಿಕಾರದಿಂದ ಹೊರಗಿರುವ ಗ್ರಾಮಗಳಲ್ಲಿ1000 ಚದರ ಮೀಟರ್ ಜಮೀನಿನ ಸಿಂಗಲ್ ಲೇಔಟ್ ಅನುಮೋದನೆ ಪಿಡಿಒ ನೀಡಲು ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಇನ್ನೂ ಕಾರ್ಯರೂಪಕ್ಕೆ ಬಾರದಿದ್ದು, ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಸೇರಿದ ಗ್ರಾಮ ಪಂಚಾಯಿತಿಯಲ್ಲಿಸಿಂಗಲ್ ಲೇಔಟ್ ಅನುಮೋದನೆಯನ್ನು ಪ್ರಾಧಿಕಾರವೇ ನೀಡಬೇಕಾಗಿದ್ದರೂ, ಅಧಿಕಾರಿಗಳು ಅರ್ಜಿದಾರರನ್ನು ವಾಪಸ್ ಕಳುಹಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಡಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಅವರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಸರ್ಕಾರದ ಆದೇಶ ಜಾರಿಯಾಗುವವರೆಗೆ ಸಿಂಗಲ್ ಲೇಔಟ್ ಅರ್ಜಿಗಳನ್ನು ವಿಲೇ ಮಾಡುವಂತೆ ಯೋಜನಾ ಪ್ರಾಧಿಕಾರದ ಅಧಿಕಾರಿಗೆ ತಾಕೀತು ಮಾಡಿದರು.

ಎನ್ ಟಿಪಿಸಿ ಯೋಜನೆಗಾಗಿ 30 ವರ್ಷಗಳ ಹಿಂದೆ ಕೆಐಎಡಿಬಿ ಸ್ವಾದೀನಪಡಿಸಿಕೊಂಡಿರುವ ಜಮೀನನ್ನು ಡಿನೋಟಿಪಿಕೇಶನ್ ಮಾಡಿ ಅಲ್ಲಿನ ನಿವಾಸಿಗಳಿಗೆ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಸಲ್ಲಿಸಿದ ಅರ್ಜಿಗೆ ಸ್ಪಂಧಿಸಿದ ಶಾಸಕರು, ಈ ವಿಚಾರ ಸರ್ಕಾರದ ಮಟ್ಟದಲ್ಲಿಯೇ ತೀರ್ಮಾನ ವಾಗಬೇಕಿದ್ದು, ಮುಂದಿನ ಅಧಿವೇಶನದಲ್ಲಿಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ತೀರಾ ಹದಗೆಟ್ಟಿರುವ ನಂದಿಕೂರು ಕೊಳಚೂರು ಗರಡಿ ಸಂಪರ್ಕ ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ನೀಡಿದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ರಾಘವೇಂದ್ರ ರಾವ್ ಸಲ್ಲಿಸಿದ ಅಹವಾಲಿಗೆ ಸ್ಪಂಧಿಸಿದ ಶಾಸಕರು ಗ್ರಾಮೀಣಾಭಿವೃದ್ಧಿ ಇಲಾಖೆ ಎಂಜಿನಿಯರ್ ಅವರಿಗೆ ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ, ಎಲ್ಲೂರು ಗ್ರಾಮದಲ್ಲಿಚಿರತೆ ಹಾವಳಿ ಹತೋಟಿಗೆ ತರುವಂತೆ ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು. ಮೆಸ್ಕಾಂ, ಕಂದಾಯ ಇಲಾಖೆಗೆ ಸಂಬಂಧಿಸಿ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ , ಎಲ್ಲೂರು ಗ್ರಾಪಂ ಆಡಳಿತಾಧಿಕಾರಿ ಸುನೀಲ್ ವೈ.ಎಚ್ . ಉಪಸ್ಥಿತರಿದ್ದರು. ತಹಸೀಲ್ದಾರ್ ಅನಂತಶಂಕರ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಲ್ಲೂರು ಗ್ರಾಪಂ ಪಿಡಿಒ ಪ್ರದೀಪ್ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿಗಳಾದ ಶ್ರೀನಿವಾಸ್ ಹಾಗೂ ಲೋಕಾನಾಥ ಲಮಾಣಿ ನಿರೂಪಿಸಿದರು.

ಫೋಟೋ:21ಎಚ್ ಕೆ2

ಕ್ಯಾ: ಎಲ್ಲೂರುನಲ್ಲಿನಡೆದ ಪ್ರಜಾ ಸೇವಾ ಆಂದೋಲನಾ ಸಭೆಯಲ್ಲಿಗುರ್ಮೆ ಸುರೇಶ್ ಶೆಟ್ಟಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.