ರಾಯಚೂರು- ಕುಕನೂರಲ್ಲಿಗರುಡಗಂಬ ಸ್ಥಾಪನೆ

Contributed by: manjunathsalic@gmail.com|Vijaya Karnataka•
Vijay Karnataka
ಕುಕನೂರಲ್ಲಿಗರುಡಗಂಬ ಸ್ಥಾಪನೆ

ವಿಕ ಸುದ್ದಿಲೋಕ ರಾಯಚೂರು
ತಾಲೂಕಿನ ಕುಕನೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ, ಗರುಡಗಂಬ ಸ್ಥಾಪನೆ, ಸಿದ್ಧಿವಿನಾಯಕ, ನವಗ್ರಹ ಮೂರ್ತಿ ಹಾಗೂ ಬುಡ್ಡೆಕಲ್ಲುಪ್ರತಿಸ್ಥಾಪನೆ ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಕಳೆದ ಮೂರು ದಿನಗಳಿಂದ ನಾನಾ ಧಾರ್ಮಿಕ ವಿಧಿ ವಿಧಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಮೊದಲ ದಿನ ಮೆರವಣಿಗೆ ಮೂಲಕ ಮೂರ್ತಿಗಳನ್ನು ಗ್ರಾಮಕ್ಕೆ ತರಲಾಯಿತು. ಅದೇ ದಿನ ಜಲಾಧಿವಾಸ ನೆರವೇರಿಸಲಾಯಿತು. ಎರಡನೇ ದಿನ ನಾನಾ ದೇವರನ್ನು ಪ್ರತಿಷ್ಠಾಪಿಸಲಾಯಿತು. ಧಾನ್ಯಧಿವಾಸ, ಪುಷ್ಪಾಧಿವಾಸ, ವಸ್ತಾ್ರಧಿವಾಸ, ಶಯನಾಧಿವಾಸ ನೆರವೇರಿಸಲಾಯಿತು. ಮೂರನೇ ದಿನವಾದ ಶನಿವಾರ ಬೆಳಗ್ಗೆ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಕಿಲ್ಲೇ ಬೃಹನ್ಮಠದ ಶಾಂತಮಲ್ಲಶಿವಾಚಾರ್ಯರಿಂದ ಮೂರ್ತಿಗಳಿಗೆ ಪ್ರಾಣಪ್ರತಿಷ್ಠಾಪನೆ ಬಳಿಕ ನೂತನ ಗೋಪುರಗಳ ಶಿಖರಗಳಿಗೆ ಕಳಸಾರೋಹಣ ಮಾಡಲಾಯಿತು. ಕೊನೆಗೆ ಹೋಮ ಪೂರ್ಣಾಹುತಿ ಮಾಡುವ ಮೂಲಕ ಧಾರ್ಮಿಕ ವಿಧಿವಿಧಾನ ಸಂಪನ್ನಗೊಳಿಸಲಾಯಿತು.

ಬಳಿಕ ನಡೆದ ಧರ್ಮ ಸಭೆಯಲ್ಲಿಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘‘ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ 8 ಲಕ್ಷ ರೂ. ಅನುದಾನ ನೀಡಲಾಗಿತ್ತು. ಇಂದು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ನಮ್ಮ ಕಾರ್ಯ ಸಾರ್ಥಕ ಎನಿಸುತ್ತದೆ,’’ ಎಂದರು.

ಸೋಮವಾರ ಪೇಟೆ ಹಿರೇಮಠದ ರಾಚೋಟಿವೀರ ಶಿವಾಚಾರ್ಯರು, ಸುಲ್ತಾನಪುರ ಬೃಹನ್ಮಠದ ಶಂಭು ಸೋಮನಾಥ ಶಿವಾಚಾರ್ಯರು, ದೇವರ ಗುಂಡಗುರ್ತಿಯ ನಿಜಲಿಂಗ ಹೊನ್ನಯ್ಯ ತಾತ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ನ ಮುಖಂಡರು, ಗ್ರಾಮದ ಹಿರಿಯರು ಇದ್ದರು.

---

ಆರ್ ಸಿಎಚ್ 21ಎಂಎಸ್ 05

ರಾಯಚೂರು ತಾಲೂಕಿನ ಕುಕನೂರು ಗ್ರಾಮದಲ್ಲಿಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಹೋಮದ ಪೂರ್ಣಾಹುತಿ ಕಾರ್ಯಕ್ರಮ ಶನಿವಾರ ನಡೆಸಲಾಯಿತು.