ವ್ಯಾವಹಾರಿಕ ಸತ್ಯದ ನಡುವೆ ಮಾತು, ಕೃತಿಯಲ್ಲಿನೈಜ ಸತ್ಯ ಹೇಳುವವರ ಸಂಖ್ಯೆ ಹೆಚ್ಚಬೇಕು ಎಂದು ಹಿರಿಯ ಪತ್ರಕರ್ತ ಡಾ. ರಾಘವ ನಂಬಿಯಾರ್ ಹೇಳಿದ್ದಾರೆ.ಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದಲ್ಲಿಗಣೇಶ್ ಅಮೀನ್ ಗಢ ರಚಿತ ‘ಪತ್ರಕರ್ತನ ಅನುಭವಗಳು’ ಕೃತಿಯನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಯಾವುದೇ ಬರವಣಿಗೆಯಲ್ಲಿಬಳಸುವ ಭಾಷೆ, ಕೌತುಕವಿದ್ದರೆ ಓದುಗರನ್ನು ಸೆಳೆಯಲು, ಮನಮುಟ್ಟಲು ಸಾಧ್ಯ. ನಾನಾ ವಿಷಯಗಳ ವಿಸ್ತಾರದ ಅವಲೋಕನ ಮಾಡಬೇಕು. ಪತ್ರಿಕಾ ಧರ್ಮ ದುಡ್ಡು ಹಾಕಿ ದುಡ್ಡು ತೆಗೆಯುವ ಬಂಡವಾಳದ ದಂಧೆಯಾಗುತ್ತಿದೆ. ಜನಸಾಮಾನ್ಯರ ಧೋರಣೆ ಕೂಡ ಬದಲಾಗುತ್ತಿದೆ. ನಾವು ಗಳಿಸಿದ ಜ್ಞಾನ ವ್ಯಕ್ತಿ, ಸಮಾಜದ ಒಳಿತಿಗೆ ವಿನಿಯೋಗವಾಗಬೇಕು. ಪತ್ರಿಕಾ ರಂಗದಲ್ಲಿಸಮಾನತೆ, ಸಂಸ್ಕೃತಿಯ ಉನ್ನತಿ, ವಿಸ್ತರಣೆಗೆ ಕೊಡುಗೆ ನೀಡಬೇಕು. ಉತ್ಪಾದನೆಯ ಪಾಲು-ಲಾಭ ದುಡಿಯುವ ವರ್ಗಕ್ಕೂ ಸಿಗಬೇಕು ಎಂದರು.
ಗಣೇಶ್ ಅಮೀನ್ ಗಢ ಕೃತಿ ಕುರಿತು ಮಾತನಾಡಿದರು. ಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್ , ರಾಜ್ಯ ಸಮಿತಿ ಸದಸ್ಯ ಆಸ್ಟೊ್ರೕ ಮೋಹನ್ , ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಫೋಟೊ: 21ಯು ಬುಕ್
ಗಣೇಶ್ ಅಮೀನ್ ಗಢ ರಚಿತ ಪತ್ರಕರ್ತನ ಅನುಭವಗಳು ಕೃತಿಯನ್ನು ಡಾ.ರಾಘವ ನಂಬಿಯಾರ್ ಶನಿವಾರ ಬಿಡುಗಡೆಗೊಳಿಸಿದರು.