ಸಂಡೂರಿನಲ್ಲಿಪ್ರಜಾ ಸೇವಾ ಕಾರ್ಯಕ್ರಮ: 9 ಅರ್ಜಿ ಸಲ್ಲಿಕೆ

Contributed by: verendragoud@gmail.com|Vijaya Karnataka•
9
* ಸಂಡೂರಿನಲ್ಲಿಪ್ರಜಾ ಸೇವಾ ಕಾರ್ಯಕ್ರಮದಲ್ಲಿ9 ಅರ್ಜಿ ಸಲ್ಲಿಕೆ

ಜನರ ಮನೆ ಬಾಗಿಲಿಗೆ ಆಡಳಿತ
ವಿಕ ಸುದ್ದಿಲೋಕ ಸಂಡೂರು

‘‘ಜನರ ಮನೆ ಬಾಗಿಲಿಗೆ ಆಡಳಿತ, ಸ್ಥಳದಲ್ಲೇ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಪರಿಹಾರ ನೀಡುವ ಸಲುವಾಗಿ ಸರಕಾರ ಪ್ರಜಾ ಸೇವಾ ಕಾರ್ಯಕ್ರಮವನ್ನು ಆಂದೋಲನದ ರೂಪದಲ್ಲಿಹಮ್ಮಿಕೊಂಡಿದ್ದು, ಜನರು ಈ ಯೋಜನೆಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು,’’ ಎಂದು ಶಾಸಕಿ ಅನ್ನಪೂರ್ಣ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿಹಮ್ಮಿಕೊಂಡಿದ್ದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿಮಾತನಾಡಿದರು.

‘‘ಈ ಕಾರ್ಯಕ್ರಮದಲ್ಲಿಸಲ್ಲಿಕೆಯಾದ ಅರ್ಜಿಗಳಿಗೆ ಸ್ಥಳೀಯವಾಗಿ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು,’’ ಎಂದರು.

ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ‘‘ಬಡವರು, ಹಿಂದುಳಿದವರು ಸೇರಿದಂತೆ ಎಲ್ಲನಾಗರಿಕರ ಅನುಕೂಲಕ್ಕಾಗಿ ಆರಂಭಿಸಲಾದ ಪ್ರಜಾ ಸೇವಾ ಕಾರ್ಯಕ್ರಮ ಆಂದೋಲನದ ರೂಪದಲ್ಲಿನಡೆಯುತ್ತಿದೆ. ಸರಕಾರದ ನಾನಾ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಸದಾ ಸಿದ್ಧವಿದ್ದಾರೆ,’’ ಎಂದರು.

ಈ ಸಂದರ್ಭದಲ್ಲಿಎಸಿಎಫ್ ಬಸಮ್ಮ ಸಜ್ಜನ್ , ತಾಪಂ ಪ್ರಭಾರ ಇಒ ರೇಣುಕಾಚಾರ್ಯ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್ ಗೌಡ, ಜಿಲ್ಲಾಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಆಶಾಲತಾ, ಪಿಆರ್ ಇಡಿ ಎಇಇ ಪ್ರಕಾಶನಾಯ್ಕ, ಬಿಇಒ ಡಾ.ಐ.ಆರ್ .ಅಕ್ಕಿ, ಸಿಡಿಪಿಒ ಪಿ.ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್ .ಕೆ.ವೆಂಕಟೇಶ, ಆರ್ ಎಫ್ ಒಗಳಾದ ಬಿ.ಎಸ್ .ಮಂಜುನಾಥ, ದಾದಾಖಲಂದರ್ , ಮಾಬಾಷಾ, ಎಸ್ಟಿ ಕಲ್ಯಾಣಾಧಿಕಾರಿ ರಂಗನಾಥ ದೇಸಾಯಿ, ತೋಟಗಾರಿಕೆ ಇಲಾಖೆ ಎಡಿ ಹನುಮಪ್ಪ ನಾಯಕ, ಪಶುಸಂಗೋಪನೆ ಇಲಾಖೆ ಎಡಿ ಡಾ.ವಲಿಬಾಷಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಒಟ್ಟಾರೆ 9 ಅರ್ಜಿಗಳು ಸಲ್ಲಿಕೆಯಾದವು.

.............

ಬಿಎಲ್ ವೈ 21 ಎಸ್ಡಿಆರ್ 2:

ಸಂಡೂರಿನ ತಹಸಿಲ್ ಕಚೇರಿಯಲ್ಲಿಹಮ್ಮಿಕೊಂಡಿದ್ದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿಮಹಿಳೆಯೊಬ್ಬರ ಸಮಸ್ಯೆಯನ್ನು ಶಾಸಕಿ ಅನ್ನಪೂರ್ಣ ಆಲಿಸಿದರು.