ಪಪೂ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎ.ಎಚ್ . ಮಹೇಂದ್ರ ಹೇಳಿಕೆ (ಕಿಕ್ಕರ್ )
ಪ.ಪೂ.ಕಾಲೇಜುಗಳಲ್ಲೇ ಸಿಇಟಿ ತರಬೇತಿ ಅನುಷ್ಠಾನವಿಕ ಸುದ್ದಿಲೋಕ ಹೂವಿನಹಡಗಲಿ
‘‘ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಸಿದ್ಧತೆ ಹಾಗೂ 200 ಸರಕಾರಿ ಕಾಲೇಜುಗಳಲ್ಲಿ ಮಹತ್ವಾಕಾಂಕ್ಷಿ ಸಿಇಟಿ ತರಬೇತಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು,’’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ (ಆಡಳಿತ ) ಹಾಗೂ ಪಿಯು ಫಲಿತಾಂಶ ಸುಧಾರಣೆಯ ಜಿಲ್ಲಾ ಉಸ್ತುವಾರಿ ಅಧಿಕಾರಿ ಎ.ಎಚ್ . ಮಹೇಂದ್ರ ಹೇಳಿದರು.
ತಾಲೂಕಿನ ನಾನಾ ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಮತ್ತು ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪರಿಶೀಲಿಸಿ ಮಾತನಾಡಿದರು.
‘‘ಇಲ್ಲಿನ ಜಿಪಿಜಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಸೊಪ್ಪಿನ ಕಾಳಮ್ಮ ಬಾಲಕಿಯರ ಸರಕಾರಿ ಪ.ಪೂ.ಕಾಲೇಜುಗಳಲ್ಲಿಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಶೈಕ್ಷಣಿಕ ಕಾರ್ಯತಂತ್ರಗಳು ಹಾಗೂ ಅವುಗಳ ಅನುಷ್ಠಾನದ ಬಗ್ಗೆ ,’’ಮಾಹಿತಿ ಪಡೆದರು.
ಈ ವೇಳೆ ಕಾಲೇಜಿನಲ್ಲಿವಿದ್ಯಾರ್ಥಿಗಳ ನಿಯಮಿತ ಹಾಜರಾತಿ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯ ಭಾಗ ವಹಿಸುವಿಕೆ ಖಚಿತಪಡಿಸಿಕೊಳ್ಳುವ ಹಿನ್ನೆಲೆಯಲ್ಲಿಕೆಎಎಎಂಎಸ್ ಹಾಗೂ ನಿರಂತರ ಹಾಜರಾತಿ ವ್ಯವಸ್ಥೆ ಪ್ರಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿತಾಲೂಕು ನೋಡಲ್ ಅಧಿಕಾರಿ ಕೋರಿ ಹಾಲೇಶ, ಎಸ್ ಕೆಜಿಜೆ ಕಾಲೇಜಿನ ಪ್ರಾಂಶುಪಾಲ ಅಯ್ಯನಗೌಡರ ಕೊಟ್ರಗೌಡ ಇದ್ದರು.
ಚಿತ್ರ:ವಿಎನ್ ಆರ್ 20ಎಚ್ ಡಿಎಲ್ ಪಿ1-ಹೂವಿನಹಡಗಲಿಯ ಪದವಿ ಪೂರ್ವ ಕಾಲೇಜುಗಳಿಗೆ ಪ.ಪೂ.ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎ.ಎಚ್ . ಮಹೇಂದ್ರ ಭೇಟಿ ನೀಡಿ ಪರಿಶೀಲಿಸಿದರು.