ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಸತೀಶ್ ನಡೆ ಶ್ಲಾಘನೀಯ

Contributed by: kotekarp@gmail.com|Vijaya Karnataka•
Vijay Karnataka
ಹತ್ತರಗಿಯ ಶ್ರೀ ಗುರುಸಿದ್ಧ ಸ್ವಾಮೀಜಿ ಅಭಿಮತ | 13ನೇ ‘ಸತೀಶ್ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮಕ್ಕೆ ಚಾಲನೆ

ವಿಕ ಸುದ್ದಿಲೋಕ ಯಮಕನಮರಡಿ
ಸತೀಶ್ ಪ್ರತಿಭಾ ಪುರಸ್ಕಾರ ವೇದಿಕೆ ಮೂಲಕ 13 ವರ್ಷಗಳಿಂದ ಸಾವಿರಾರು ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುತ್ತಿರುವ ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ ಎಂದು ಹತ್ತರಗಿ ಸುಕ್ಷೇತ್ರದ ಶ್ರೀ ಗುರುಸಿದ್ಧ ಸ್ವಾಮಿಗಳು ಹೇಳಿದರು.

ಇಲ್ಲಿನ ಎನ್ ಎಸ್ ಎಫ್ ಶಾಲೆಯ ಆವರಣದಲ್ಲಿಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ 13ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಶನಿವಾರ ಮಾತನಾಡಿದರು. ‘‘ಬುದ್ಧ- ಬಸವಣ್ಣ- ಡಾ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅನುಸರಿಸಿ ನಡೆಯುತ್ತಿರುವ ಸತೀಶ್ ಜಾರಕಿಹೊಳಿಯವರಂಥ ನಾಯಕರನ್ನು ಹೊಂದಿರುವುದು ಈ ಭಾಗದ ಜನತೆಯ ಅದೃಷ್ಟ,’’ ಎಂದು ಅವರು ಹೇಳಿದರು.

ಹತ್ತರಗಿ ಹರಿಮಂದಿರದ ಶ್ರೀ ಆನಂದ ಗೋಸಾವಿ ಮಹಾರಾಜರು ಮಾತನಾಡಿ, ‘‘ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿಗೆ ಸಚಿವ ಸತೀಶ ಜಾರಕಿಹೊಳಿ ಅವರು ಪರಿಚಯಿಸಿದ ಪರಿಕಲ್ಪನೆ ಮತ್ತು ಪ್ರಯತ್ನಗಳು ಅದ್ಭುತವಾಗಿವೆ. ಅವರ ದೂರದೃಷ್ಟಿತ್ವ ಮತ್ತು ಕಾರ್ಯತಂತ್ರಗಳಿಂದ ಯಮಕನಮರಡಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ,’’ ಎಂದು ಬಣ್ಣಿಸಿದರು.

ಯುವ ಮುಖಂಡ ಕಿರಣ ರಜಪೂತ, ಯುವ ನಾಯಕ ರವಿ ಜಿಂಡ್ರಾಳಿ, ವೀರಣ್ಣಾ ಬಿಸಿರೊಟ್ಟಿ, ರೇವತಿ ಮಠದ ರಿಯಾಜ್ ಚೌಗಲಾ, ಶಶಿ ಹಟ್ಟಿ ಮತ್ತಿತರರಿದ್ದರು. ಶಿಕ್ಷಕ ಎ.ಜಿ. ಕೋಳಿ ನಿರೂಪಿಸಿದರು.

*ಬಾಕ್ಸ್

ಬಹುಮಾನದ ಮೊತ್ತದಲ್ಲಿಶಿಕ್ಷಣ

ಕಳೆದ ಬಾರಿ ಭಾಷಣ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ಬಸ್ತವಾಡದ ಜೋಯಾ ಇಮಾದಾರ ಮಾತನಾಡಿ, ‘‘ಸಚಿವ ಸತೀಶ್ ಜಾರಕಿಹೊಳಿ ಅವರು ಗ್ರಾಮೀಣ ಪ್ರದೇಶದ ಹಲವಾರು ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಅವರು ನೀಡಿದ ಬಹುಮಾನದ ಮೊತ್ತದಿಂದ ನನ್ನ ಶಿಕ್ಷಣ ಮುಂದುವರಿದಿದೆ.‘ಮಿತ ಮಾತು- ಹೆಚ್ಚು ಕೆಲಸ’ ಎಂಬ ಅವರ ಧ್ಯೇಯ ನಮಗೆಲ್ಲಎಂದಿಗೂ ಆದರ್ಶದಾಯಕ,’’ ಎಂದರು.

-21ವೈಎಂಡಿ1

ಯಮಕನಮರಡಿಯಲ್ಲಿಶನಿವಾರ ಆರಂಭಗೊಂಡ 13ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಬಸ್ತವಾಡದ ಜೋಯಾ ಇಮಾದಾರ ಹಾಗೂ ಶ್ರೀಗಳು ಉದ್ಘಾಟಿಸಿದರು.

--

-21ವೈಎಂಡಿ2

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿಗಮನ ಸೆಳೆದ ವಿದ್ಯಾರ್ಥಿಗಳ ಗುಂಪು ನೃತ್ಯ ಪ್ರದರ್ಶನ.