ವಿಕ ಸುದ್ದಿಲೋಕ ಮಂಗಳೂರುವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿಏಕಾಗ್ರತೆ, ಸ್ಮರಣಶಕ್ತಿ ಹಾಗೂ ಆತ್ಮವಿಶ್ವಾಸ ವೃದ್ಧಿಸುವ ಉದ್ದೇಶದಿಂದ ದಕ್ಷಿಣ ಕನ್ನಡದ ಆರ್ಟ್ ಆಫ್ ಲಿವಿಂಗ್ ವತಿಯಿಂದ ಇಂಟ್ಯೂಷನ್ ಪ್ರೊಸೆಸ್ ಎಂಬ ವಿಶೇಷ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ದಕ್ಷಿಣ ಕನ್ನಡದ ಇಂಟ್ಯೂಷನ್ ಪ್ರೊಸೆಸ್ ಶಿಕ್ಷಕಿ ಶರಾವತೀ ರವಿನಾರಾಯಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಜ್ಞಾನದ ಉಡುಗೊರೆಯ ಮೂಲಕ ದೀಪಾವಳಿ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಆರ್ಟ್ ಆಫ್ ಲಿವಿಂಗ್ ಪರಿವಾರ ಈ ವಿಶೇಷ ಸೇವಾ ಕಾರ್ಯವನ್ನು ಹಮ್ಮಿಕೊಂಡಿತ್ತು. ಸೇವಾ ಭಾರತಿ ಮಂಗಳೂರು ನಿರ್ವಹಿಸುತ್ತಿರುವ ಚೇತನ ಚೈಲ್ಡ್ ಡೆವಲಪ್ ಮೆಂಟ್ ಸೆಂಟರ್ ಹಾಗೂ ರೋಮನ್ ಆ್ಯಂಡ್ ಕ್ಯಾಥರೀನ್ ಲೋಬೋ ಸ್ಕೂಲ್ ಫಾರ್ ದಿ ಬ್ಲೈಂಡ್ (ದೃಷ್ಟಿಹೀನರ ಶಾಲೆ) ಸಂಸ್ಥೆಗಳ ಸುಮಾರು 60 ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಈ ಕಾರ್ಯಕ್ರಮದ ಪ್ರಯೋಜನ ದೊರೆಯಿತು. ನ.17 ರಿಂದ 20 ರವರೆಗೆ ನಡೆದ ಕಾರ್ಯಕ್ರಮಕ್ಕೆ ಆರ್ಟ್ ಆಫ್ ಲಿವಿಂಗ್ ನ ಹಿರಿಯ ಅಂತಾರಾಷ್ಟ್ರೀಯ ಶಿಕ್ಷಕ ರಾಜೇಂದ್ರ ಸಿಂಗ್ ಮಾರ್ಗದರ್ಶನ ನೀಡಿದರು. ಹಲವು ಸಂಸ್ಥೆಗಳು, ದಾನಿಗಳು, ಸ್ವಯಂಸೇವಕರು ಹಾಗೂ ಹಿತೈಷಿಗಳು ಈ ಉಪಕ್ರಮ ಸಾಕಾರಗೊಳ್ಳಲು ಸಹಕರಿಸಿದ್ದಾರೆ ಎಂದರು.
ಆರ್ಟ್ ಆಫ್ ಲಿವಿಂಗ್ ನ ಜಿಲ್ಲಾಶಿಕ್ಷಕರ ಸಂಯೋಜಕಿ ರಜನಿ ರೈ, ದಕ್ಷಿಣ ಕನ್ನಡದ ಇಂಟ್ಯೂಷನ್ ಪ್ರೊಸೆಸ್ ಶಿಕ್ಷಕಿ ಅಮಿತಾ ಸುಧೀರ್ , ಶಿಕ್ಷಕ ಪ್ರಜ್ವಲ್ ಸುವರ್ಣ ಹಾಗೂ ಅಮರ್ ಮಲ್ಯ ಉಪಸ್ಥಿತರಿದ್ದರು.