ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಾರ್ಗದರ್ಶನದಲ್ಲಿಗ್ರಾಮಾಭ್ಯುದಯ ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿನ. 22ರಂದು ನಗರದ ಶ್ರೀ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿಸರ್ವ ದಂಪತಿ ಶಿಬಿರ ಆಯೋಜಿಸಲಾಗಿದೆ.ಬೆಳಗ್ಗೆ 10ಕ್ಕೆ ಗ್ರಾಮಾಭ್ಯುದಯದ ಅಧ್ಯಕ್ಷ ಕಂಚ್ನಳ್ಳಿಯ ರಾಮಚಂದ್ರ ಹೆಗಡೆ ಉದ್ಘಾಟಿಸಲಿದ್ದಾರೆ. ಶ್ರೀ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವಿ ಬೆಳ್ಳಿಮನೆ, ಉಪಾಧ್ಯಕ್ಷ ಅಶೋಕ ಪವಾರ, ಧರ್ಮದರ್ಶಿಗಳಾದ ಕೇಶವ ಜಿ. ಹೆಗಡೆ, ವಿನಾಯಕ ಎಸ್ . ಶೇಟ್ ಹಾಗೂ ಅರ್ಚನಾ ಆರ್ . ಹೊನ್ನಾವರ ಉಪಸ್ಥಿತರಿರುವರು.
ಬೆಳಗ್ಗೆ 10.30ರಿಂದ 11.15ರವರೆಗೆ ನಡೆಯುವ ಪ್ರಥಮ ಮಾರ್ಗದರ್ಶನ ಗೋಷ್ಠಿಯಲ್ಲಿಗರ್ಭಧಾರಣೆಗೆ ಯೌಗಿಕ ಜೀವನಶೈಲಿ ವಿಷಯದ ಕುರಿತು ಡಾ. ವಸಂತ ಶಾಸ್ತಿ್ರ, ಬಳಿಕ 11.15ರಿಂದ ಮಧ್ಯಾಹ್ನ 12ರವರೆಗೆ ಸತ್ ಸಂತಾನಕ್ಕೆ ಆಯುರ್ವೇದದ ಸೂತ್ರಗಳು ವಿಷಯದ ಕುರಿತು ಡಾ. ವಿನಾಯಕ ಹೆಬ್ಬಾರ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 12ರಿಂದ 1ಗಂಟೆಯವರೆಗೆ ಸತ್ ಸಂತಾನಕ್ಕೆ ಸಂಬಂಧಿಸಿದ ಶಾಸ್ತ್ರಸೂತ್ರಗಳ ಕುರಿತು ವಿದ್ವಾನ್ ಸೀತಾರಾಮ ಭಟ್ಟ ಮಾರ್ಗದರ್ಶನ ನೀಡಲಿದ್ದಾರೆ. ಮಧ್ಯಾಹ್ನ 2.30ರಿಂದ ನಡೆಯುವ ಗೋಷ್ಠಿಯಲ್ಲಿಭಾರತೀಯ ಸಂಸ್ಕೃತಿಯಲ್ಲಿದಾಂಪತ್ಯ ಮತ್ತು ಕುಟುಂಬ ಜೀವನದ ಮಹತ್ವ ವಿಷಯದ ಕುರಿತು ಕೃಷ್ಣ ಶ್ರೀನಿವಾಸ ದೇಶಪಾಂಡೆ ಮಾತನಾಡಲಿದ್ದಾರೆ.
ಸಂಜೆ 3.30ರಿಂದ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ದಾಂಪತ್ಯ ಜೀವನದ ಮೌಲ್ಯಗಳು, ಕುಟುಂಬ ವ್ಯವಸ್ಥೆಯ ಮಹತ್ವ, ಯೋಗಿಕ ಜೀವನಶೈಲಿ ಹಾಗೂ ಸಂಸ್ಕಾರಯುತ ಸಂತಾನ ನಿರ್ಮಾಣದ ಕುರಿತು ಅರಿವು ಮೂಡಿಸುವುದು ಶಿಬಿರದ ಉದ್ದೇಶವಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ.