ರಾಣೇಬೆನ್ನೂರಲ್ಲಿತುಳಸಿ ಪೂಜೆ

Contributed by: santoshettyp@gmail.com|Vijaya Karnataka•
Vijay Karnataka
ರಾಣೇಬೆನ್ನೂರ: ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಶನಿವಾರ ತುಳಸಿ ಪೂಜೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು. ಪೂಜೆಯ ಅಂಗವಾಗಿ ಮಹಿಳೆಯರು ಮನೆಯ ಎದುರು ತುಳಸಿ ಗಿಡ ಪ್ರತಿಷ್ಠಾಪಿಸಿದರು. ನಂತರ ಅಡವಿ ನೆಲ್ಲಿಕಾಯಿ, ಹುಣಸೆ ಟೊಂಗೆ, ಮಾವಿನ ಎಲೆ, ಹೂಮಾಲೆಗಳಿಂದ ತುಳಸಿ ಗಿಡವನ್ನು ಅಲಂಕರಿಸಿದರು. ದೇವರಿಗೆ ಹೆಸರು ಬೇಳೆ ಪಾಯಸ, ಪುಳಿಯೋಗರೆ, ಬದನೆಕಾಯಿ ಪಲ್ಯ, ಸೆಂಡಿಗೆ, ಹಪ್ಪಳ, ಚಕ್ಕುಲಿ, ಬೇಸನ್ ಉಂಡಿ, ಖರ್ಚಿಕಾಯಿ ಮುಂತಾದ ಪಧಾರ್ಥಗಳನ್ನು ನೈವೇದ್ಯ ಮಾಡಿದರು. ಸಂಜೆ ನೆರೆಹೊರೆಯ ಸುಮಂಗಲಿಯರನ್ನು ಪೂಜೆಗೆ ಆಹ್ವಾನಿಸಿ ಅವರಿಗೆ ಬಾಳೆಹಣ್ಣು, ಎಲೆ, ಅಡಕೆ ನೀಡಿ ಉಡಿ ತುಂಬಿದರು.

ಫೋಟೋ 21-ಆರ್ ಎನ್ ಆರ್ -05
ರಾಣೇಬೆನ್ನೂರಿನ ನಗರದ ಮನೆಯೊಂದರಲ್ಲಿತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿರುವುದು.