ಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿ2026-27ನೇ ಸಾಲಿನ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.ಶಾಲೆಯ ನಾಲ್ಕು ನಿಲಯಗಳ ನಡುವೆ ನಡೆದ ಈ ಸ್ಪರ್ಧೆಯಲ್ಲಿವಿದ್ಯಾರ್ಥಿಗಳು ದೃಢ ಸಂಕಲ್ಪ, ಶಿಸ್ತು, ತಂಡದ ಒಗ್ಗಟ್ಟು ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ವಿವಿಧ ಕ್ರೀಡಾಕೂಟಗಳಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ,‘‘ಕಠಿಣ ಗುರಿಗಳನ್ನು ದೃಢತೆ ಹಾಗೂ ಪರಿಶ್ರಮದಿಂದ ಮಾತ್ರ ಸಾಧಿಸಲು ಸಾಧ್ಯ. ಸೈನಿಕ ಶಾಲೆಯಲ್ಲಿಲಭ್ಯವಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ, ಸ್ಪರ್ಧೆಯಲ್ಲಿಪಾಲ್ಗೊಂಡಿರುವುದೇ ಅತ್ಯಂತ ಶ್ಲಾಘನೀಯ,’’ಎಂದು ಹೇಳಿದರು.
ವಿವಿಧ ವಿಭಾಗಗಳಲ್ಲಿಅತ್ಯುತ್ತಮ ಕ್ರೀಡಾಪಟುಗಳಾಗಿ ಆಯ್ಕೆಯಾದವರು:ಹಿರಿಯ ಬಾಲಕಿಯರ ವಿಭಾಗ: ಸಿಡಿಟಿ ದೀಪ್ತಿ ದೇವಿ - ಸುಬ್ರೊತೊ ಹಿರಿಯ ನಿಲಯ,ಕಿರಿಯ ಬಾಲಕಿಯರ ವಿಭಾಗ: ಸಿಡಿಟಿ ಆನ್ವಿ - ಕಟಾರಿ ಕಿರಿಯ ನಿಲಯ, ಹಿರಿಯ ಬಾಲಕರ ವಿಭಾಗ: ಸಿಡಿಟಿ ಪ್ರಜ್ವಲ್ - ಕಟಾರಿ ಹಿರಿಯ ನಿಲಯ, ಕಿರಿಯ ಬಾಲಕರ ವಿಭಾಗ: ಸಿಡಿಟಿ ಸುಧಾಂಶು - ಸುಬ್ರೊತೊ ಕಿರಿಯ ನಿಲಯ, ಒಟ್ಟಾರೆಯಾಗಿ ಸುಬ್ರೊತೊ ನಿಲಯವು ಈ ಬಾರಿಯ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ 2026 27ರ ಸಮಗ್ರ ಚಾಂಪಿಯನ್ ನಿಲಯವಾಗಿ ಹೊರಹೊಮ್ಮಿತು.
ಸಮಾರಂಭದಲ್ಲಿಸೈನಿಕ ಶಾಲೆ ಕೊಡಗಿನ ಆಡಳಿತಾಧಿ ಕಾರಿ ಸ್ಕಾ್ವಡ್ರನ್ ಲೀಡರ್ ದೀಪಕ್ ನಾಯಕ್ , ಶೈಕ್ಷಣಿಕ ಹಾಗೂ ಆಡಳಿತ ಸಿಬ್ಬಂದಿ, ಎನ್ ಸಿಸಿ ಪಿಐ ಸಿಬ್ಬಂದಿ, ದೈಹಿಕ ಶಿಕ್ಷಕ ಸಿಬ್ಬಂದಿ, ಕ್ರೀಡಾಕೂಟದ ಉಸ್ತುವಾರಿ ಶಿಕ್ಷಕ ಅಶೋಕ್ ಕೆಂಗಾರೆ ಹಾಜರಿದ್ದರು.
09 ಕೆಯುಎಸ್ 02 ಚಿತ್ರದಲ್ಲಿಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿನಡೆದ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದಲ್ಲಿವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.