ಗಾಂಡೀವ ಅರ್ಜುನನ ದಿವ್ಯ ಧನುಸ್ಸು. ಇದರಿಂದಾಗಿಯೇ ಮಧ್ಯಮ ಪಾಂಡವನಿಗೆ ಗಾಂಡೀವಿ ಅನ್ನುವ ಹೆಸರು. ಮಹಾಭಾರತದಲ್ಲಿಈತನು ಆಕರ್ಷಕ ಹಾಗೂ ಪ್ರಧಾನ ಪಾತ್ರ. ಇಡೀ ಮಹಾಭಾರತವನ್ನು ಆವರಿಸಿರುವ ಅರ್ಜುನನ ಬಗ್ಗೆ ಬಗೆದಷ್ಟು, ಮೊಗೆದಷ್ಟು ಕಥೆಗಳು ಸಿಗುತ್ತವೆ. ಎರಡೂ ಕಡೆಯಲ್ಲಿಬತ್ತಳಿಕೆಯನ್ನು ಇಟ್ಟುಕೊಂಡು ರಣರಂಗದಲ್ಲಿಹೋರಾಡುತ್ತಿದ್ದ ಈ ಸವ್ಯಸಾಚಿಯ ಬಗ್ಗೆಯೇ ‘ಗಾಂಡೀವಿ’ ಶೀರ್ಷಿಕೆಯಲ್ಲಿಕಾದಂಬರಿಯನ್ನು ಬರೆದಿದ್ದಾರೆ ಹಿರಿಯ ಲೇಖಕ ಡಿ.ಎಸ್ . ಶ್ರೀಧರ.ಗಾಂಡೀವ ಗ್ರಹಣದಿಂದ ಗಾಂಡೀವ ವಿಸರ್ಜನೆವರೆಗೆ ಈ ಕಾದಂಬರಿಯಲ್ಲಿಒಟ್ಟು 25 ಅಧ್ಯಾಯಗಳಿವೆ. ವ್ಯಾಸರು ಚಿತ್ರಿಸಿದ ಅಶ್ವಮೇಧಿಕ ಪರ್ವದ ಕತೆಗಿಂತ ಜೈಮಿನಿ ಭಾರತದಲ್ಲಿಲಕ್ಷ್ಮೇಶ ಕವಿಯ ಪಾರ್ಥನೇ ಬೇರೆಯಾಗಿರುವುದರಿಂದ ಈ ಕಾದಂಬರಿಯಲ್ಲಿಲೇಖಕರು ವ್ಯಾಸರ ನಡೆಯನ್ನೇ ಅನುಸರಿಸಿದ್ದಾರೆ.