ರಿಯಾಲಿಟ್ ಚೆಕ್ ಅಭಿಯಾನ//

Contributed by: ahobalapathy.narayanappa@timesofindia.com|Vijaya Karnataka•
excellence practices in social welfare hostels
ಕಿಕ್ಕರ್ : ಸಮಾಜ ಕಲ್ಯಾಣ ಹಾಸ್ಟೆಲ್ * ಮೂಲ ಸೌಕರ ್ಯದ್ದೇ ಚಿಂತೆ

ಊಟ, ತಿಂಡಿ ಪ್ರಾಬ್ಲಂ ಇಲ್ಲ
ರೀಡಿಂಗ್ ರೂಮ್ ಕೇಳಬೇಡ

ಎಂ.ಎನ್ .ಅಹೋಬಳಪತಿ ಚಿತ್ರದುರ್ಗ

ಘ್ಕಿಅhಟಚಿa್ಝapaಠಿhy.Na್ಟaya್ಞappaಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಊಟ, ತಿಂಡಿ ಪ್ರಾಬ್ಲಂ ಇಲ್ಲ. ಆದರೆ, ಓದಲಿಕ್ಕೆ ಸ್ಟಡಿ ಟೇಬಲ್ ಗಳೇ ಇಲ್ಲ. ಮಂಚದ ಮೇಲೆ ಕುಳಿತು ಓದಬೇಕು. ಇಲ್ಲಿಬೇರೆ ಬೇರೆ ಕೋರ್ಸ್ ವಿದ್ಯಾರ್ಥಿಗಳು ಇರೋದ್ರಿಂದ ಒಬ್ಬರಿಗೆ ಪರೀಕ್ಷೆ ಇದ್ದಾಗ ಉಳಿದವರಿಗೆ ಇರಲ್ಲ. ಅವರೆಲ್ಲಹರಟೆ ಹೊಡೆಯುವಾಗ ನಾವು ಓದೋದು ಹೇಗೆ? ರೀಡಿಂಗ್ ರೂಂ ಅಂತ ಒಂದು ಇದ್ದರೆ, ಪರೀಕ್ಷೆ ಇರೋ ವಿದ್ಯಾರ್ಥಿಗಳು ಅಲ್ಲಿಓದಬಹುದು...,

ನಮ್ಮ ಬಿಲ್ಡಿಂಗ್ ನಲ್ಲಿ200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದೇವೆ. 30 ಬಾತ್ ರೂಂಗಳೂ ಇವೆ. ಬೆಳಗ್ಗೆ ಒಮ್ಮೆ ಸ್ವಚ್ಛಗೊಳಿಸಿ ಹೋಗುತ್ತಾರೆ. ಆದರೆ, ಇನ್ನೂರು ಜನ ವಿದ್ಯಾರ್ಥಿಗಳು ಒಮ್ಮೆ ಹೋಗಿ ಬಂದರೆ, ಮತ್ತೆ ಅಲ್ಲಿಹೋಗಲಾರದಷ್ಟು ವಾಸನೆ ಇರುತ್ತೆ. ಕನಿಷ್ಠ ದಿನಕ್ಕೆ ಮೂರು ಬಾರಿಯಾದರೂ ಸ್ವಚ್ಛಗೊಳಿಸಬೇಕು.

ಸೋಲಾರ್ ವಾಟರ್ ಹೀಟರ್ ಏನೋ ಇದೆ. ಆದರೆ, ಎಲ್ಲರಿಗೂ ಸಾಕಾಗುವಷ್ಟು ನೀರು ಬರಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೋಲಾರ್ ಹೀಟರ್ ಗಳ ಸಂಖ್ಯೆ ಹೆಚ್ಚಿಸಬೇಕು...,

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ ಗಳ ಸ್ಥಿತಿ-ಗತಿ ಪರಿಶೀಲಿಸಿಲು ವಿಕ ರಿಯಾಲಿಟಿ ಚೆಕ್ ನಡೆಸಿದ ವೇಳೆ ವಿದ್ಯಾರ್ಥಿಗಳಿಂದ ಕೇಳಿ ಬಂದ ಅಭಿಪ್ರಾಯಗಳಿವು. ಬಹುತೇಕ ಸ್ವಂತ ಕಟ್ಟಡದಲ್ಲೇ ಹಾಸ್ಟಲ್ ಗಳು ನಿರ್ವಹಣೆಯಾಗುತ್ತಿವೆ. ಇಲ್ಲಿ ಚಿತ್ರದುರ್ಗ ಮಾತ್ರವಲ್ಲದೇ ಆಸುಪಾಸಿನ ಜಿಲ್ಲೆಗಳ ವಿದ್ಯಾರ್ಥಿಗಳೂ ಸಾವಿರ ಸಂಖ್ಯೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಸ್ಟಲ್ ಸೀಟು ಕೊಡಬೇಕು ಎನ್ನುವ ಕಾರಣಕ್ಕೆ ಕೊಠಡಿಗಳಲ್ಲಿಅಗತ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ.ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡಗಳು ಪೂರ್ಣಗೊಂಡಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ.

ಶುಚಿ ಸಂಭ್ರಮದ ಕಿಟ್ ನಿಯಮಿತವಾಗಿ ಕೊಡುತ್ತಾರೆ. ಬೆಡ್ ಗಳನ್ನು ಪೂರೈಕೆ ಮಾಡಿ ಏಳೆಂಟು ವರ್ಷಗಳು ಕಳೆದಿವೆ. ಕೇವಲ ಬೆಡ್ ಕವರ್ , ಬೆಡ್ ಶೀಟ್ ಕೊಟ್ಟಿದ್ದಾರೆ. ಹೊಸ ಬೆಡ್ ಗಳನ್ನು ಪೂರೈಸಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು. ಇಡೀ ಹಾಸ್ಟಲ್ ಗೆ ಮೂರ್ನಾಲ್ಕು ಸ್ಟಡಿ ಟೇಬಲ… ಇವೆ. ಆದಷ್ಟು ಬೇಗ ಎಲ್ಲಕೊಠಡಿಗಳಿಗೂ ಸ್ಟಡಿ ಟೇಬಲ್ ಒದಗಿಸಬೇಕು ಎನ್ನುತ್ತಾರೆ ಬಿಎಸ್ಸಿ ನರ್ಸಿಂಗ್ ನಾಲ್ಕನೇ ಸೆಮಿಸ್ಟರ್ ಓದುತ್ತಿರುವ ಅಭಿಷೇಕ್ . ರೂಂಗೆ ಕೊಡದಿದ್ದರೂ ಕನಿಷ್ಟ ವರಂಡಾದಲ್ಲಿ ಇಟ್ಟರೂ ಓದಲು ಅನುಕೂಲ ಆಗುತ್ತದೆ ಎನ್ನುತ್ತಾರೆ.

ಮುಟ್ಟಿನ ಸ್ವಚ್ಛತೆಗೆ ಬಿಸಿ ನೀರಿಲ್ಲ:

ಸರಕಾರಿ ಪಾಲಿಟೆಕ್ನಿಕ್ ಗೆ ಹೊಂದಿಕೊಂಡಿರುವ ಮಹಿಳಾ ಹಾಸ್ಟಲ್ ಸಂಕೀರ್ಣದಲ್ಲಿ ಒಟ್ಟು ಮುರು ಹಾಸ್ಟಲ್ ಗಳಿವೆ. ಇಲ್ಲಿಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಒಂದು ಕಟ್ಟಡದಲ್ಲಿಸೋಲಾರ್ ವ್ಯವಸ್ಥೆ ಹಾಳಾಗಿ ಎರಡು ವರ್ಷ ಕಳೆದಿದ್ದರೂ ದುರಸ್ತಿಯಾಗಿಲ್ಲ. ಇನ್ನೆಡು ಕಟ್ಟಡದಲ್ಲಿಸೋಲಾರ್ ವ್ಯವಸ್ಥೆ ಇದ್ದರೂ ಅಲ್ಪ ಸ್ವಲ್ಪ ಬಿಸಿ ನೀರು ಬಂದರೆ ಹೆಚ್ಚು.

ಬಿಸಿ ನೀರು ಇಲ್ಲದೇ ನಾವು ಡೇಟ್ ಆದ ಸಮಯದಲ್ಲಿತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಕಾಲೇಜುಗಳಿಗೆ ಕಿಲೋ ಮೀಟರ್ ಗಟ್ಟಲೇ ನಡೆದು ಹೋಗಬೇಕು. ನಮ್ಮ ಸ್ಥಿತಿ ಹೇಗಿರಬೇಡ? ನೈರ್ಮಲ್ಯ ಕಿಟ್ ಗಳನ್ನು ಕೆಲವೊಂದು ತಿಂಗಳು ಹೊರತುಪಡಿಸಿ ನಿಯಮಿತವಾಗಿ ಪೂರೈಸುತ್ತಾರೆ. ಬಟ್ಟೆ ಒಣಗಿಸಿಕೊಳ್ಳಲು ಡ್ರೈಯರ್ ಸ್ಟಾಂಡ್ ಗಳು ಇಲ್ಲ. ಹೆಣ್ಣು ಮಕ್ಕಳಿಗೆ ಹೊಟ್ಟೆ ನೋವು ಸಾಮಾನ್ಯ. ಮಧ್ಯರಾತ್ರಿಯಲ್ಲಿಆಟೋಗಳನ್ನು ಹಿಡಿದು ಡ್ಯೂಟಿಯಲ್ಲಿರುವ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯತ್ತಾರೆ. ಆದರೆ, ಖಾಯಂ ಆಗಿ ಒಬ್ಬರು ನರ್ಸ್ ನ್ನು ಇಲ್ಲಿನೇಮಿಸಬೇಕು ಎಂದು ವಿದ್ಯಾರ್ಥಿನಿಯರಾದ ಸಂಗೀತ, ಸುಜಾತ, ಅಮೃತ ಮನವಿ ಮಾಡಿದರು.

=====

ನಿಲಯ ಪಾಲಕರಿಗೆ ನಿರ್ವಹಣೆಯ ಹೊರೆ

ವಿಕ ಭೇಟಿ ಮಾಡಿದ ಬಹುತೇಕ ಹಾಸ್ಟಲ್ ಗಳಲ್ಲಿಸಾಮಾನ್ಯವಾಗಿ ಕೇಳಿ ಬಂದ ಆಕ್ಷೇಪ ಎಂದರೆ, ಹಾಸ್ಟಲ್ ಗಳ ನಿರ್ವಹಣೆಗೆ ನಿಯಮಿತವಾಗಿ ಹಣ ಬರುತ್ತಿಲ್ಲ. ಸಣ್ಣಪುಟ್ಟ ದುರಸ್ತಿ, ನಿರ್ವಹಣೆಗೆ ನಿಲಯ ಪಾಲಕರೇ ತಮ್ಮ ಜೇಬಿನಿಂದ ಹಣ ಹಾಕಬೇಕು. ದೊಡ್ಡ ಮೊತ್ತದ ದುರಸ್ತಿಗಳನ್ನು ಏಜೆನ್ಸಿದಾರರಿಗೆ ದುಂಬಾಲು ಬಿದ್ದು ಕೆಲಸ ಮಾಡಿಸಿದರೂ ಸಕಾಲಕ್ಕೆ ಹಣ ಪಾವತಿಸಲಾಗುತ್ತಿಲ್ಲ. ಕೆಲವರು ವೇತನವನ್ನೂ ಮನೆಗೆ ಕೊಂಡೊಯ್ಯದ ಪರಿಸ್ಥಿತಿ ಇದೆ. ಕಳೆದ ಎರಡು ವರ್ಷಗಳಿಂದ ನಾವು ಹೈರಾಣಾಗಿದ್ದೇವೆ ಎನ್ನುತ್ತಾರೆ ನಿಲಯ ಪಾಲಕರು. ಆಹಾರ ಸರಬರಾಜು ಬಿಲ್ ಆರೇಳು ತಿಂಗಳು ಕಳೆದರೂ ಪಾವತಿಯಾಗದಿರುವುದು ಕೂಡಾ ನಿಲಯ ಪಾಲಕರ ಒತ್ತಡ ಹೆಚ್ಚಿಸಿದೆ.

====

ನವೀಕರಣಕ್ಕೆ ಪ್ರಸ್ತಾವನೆ

ಹಾಸ್ಟೆಲ್ ಕಟ್ಟಡಗಳನ್ನು ಕಟ್ಟಿ 15-20 ವರ್ಷಗಳಾಗಿದ್ದು, ಕಿಟಕಿ, ಬಾಗಿಲು ಹಾಗೂ ಫ್ಲೋರಿಂಗ್ ಗಳು ಹಾಳಾಗಿವೆ. ಆರಂಭದಲ್ಲಿಕಟ್ಟಡ ಕಟ್ಟಿದ ನಂತರ ಸುಣ್ಣ-ಬಣ್ಣ ಅಥವಾ ಮೇಜರ್ ರಿಪೇರಿ ಕೆಲಸಗಳು ಆಗಿಲ್ಲ. ಜಿಪಂ ಸಿಇಒ ಅವರು ನೀಡಿದ ಸೂಚನೆಯಂತೆ ರಿಪೇರಿ ಕೊರತೆಗಳ ಬಗ್ಗೆ ವಿವರ ನೀಡಿದ್ದು, ಕಟ್ಟಡಗಳ ಆಧುನೀಕರಣಕ್ಕೆ ಕೆಎಂಇಆರ್ ಸಿ ಅನುದಾನದಲ್ಲಿಆಧುನೀಕರಣಕ್ಕಾಗಿ ರೂ ಪ್ರಸ್ತಾವನೆ ಸಲ್ಲಿಸಲಾಗಿದೆ.

**

ಕೋಟ್ /

ಇಲಾಖೆ ಬಹುತೇಕ ಸ್ವಂತ ಕಟ್ಟಡಗಳನ್ನು ಹೊಂದಿದೆ. 3 ಕಟ್ಟಡ ಮಾತ್ರ ಬಾಡಿಗೆಯಲ್ಲಿವೆ. ಕೆಎಂಇಆರ್ ಸಿಯಡಿ ಚಿತ್ರದುರ್ಗ ನಗರದಲ್ಲಿನಾಲ್ಕು, ಹೊಸದುರ್ಗದಲ್ಲಿಒಂದು ಕಟ್ಟಡ ನಿರ್ಮಾಣಕ್ಕೆ 43 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಮಂಜೂರಾತಿ ದೊರೆಯುವ ನಿರೀಕ್ಷೆ ಇದೆ.

- ಮಲ್ಲಿಕಾರ್ಜುನ್ , ಜಿಲ್ಲಾಸಮಾಜ ಕಲ್ಯಾಣ ಅಧಿಕಾರಿ

**

ಫೋಟೋ//03ಸಿಟಿಡಿ66

ದುರಸ್ತಿಗೆ ಬಂದಿರುವ ಹಾಸ್ಟೆಲ್ ಕಟ್ಟಡಗಳು.

ಫೋಟೋ//03ಸಿಟಿಡಿ66ಎ

ಊಟಕ್ಕೆ ಮೊದಲು ಬಯೋಮೆಟ್ರಿಕ್ ಹಾಜರಿ ನೀಡುತ್ತಿರುವ ವಿದ್ಯಾರ್ಥಿಗಳು.

ಓದಲೇ ಬೇಕಾದ ಸುದ್ದಿ