17ರಂದು ಮಿಂಚಿಪದವು ದೇಗುಲದಲ್ಲಿಕಾವೇರಿ ತೀರ್ಥೋದ್ಭವ

Contributed by: prakashamailankote@gmail.com|Vijaya Karnataka•
kaveri theerthodbhava on the 17th with grand worship preparations
ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಿಯಮ್ಮ ಮಹಾಲಿಂಗೇಶ್ವರ ದೇಗುಲದ ಕಾವೇರಿ ಪುಷ್ಕರಣಿಯಲ್ಲಿ ತೀರ್ಥೋದ್ಭವ ಅ. 17ರಂದು ನಡೆಯಲಿದೆ.

ಅ.17ರಂದು ಬೆಳಗ್ಗೆ 7.51ಕ್ಕೆ ತೀರ್ಥೋದ್ಭವ , ಕಾವೇರಿಯಮ್ಮನಿಗೆ ಮಹಾಪೂಜೆ, 8.30ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ತೀರ್ಥಾಭಿಷೇಕ ನಡೆಯಲಿದೆ.
ಅ.18ರಂದು ಬೆಳಗ್ಗೆ 8ರಿಂದ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ನವಕ ಕಲಶಾಭಿಷೇಕ, ಶ್ರೀ ಕಾವೇರಿ ಸನ್ನಿಧಿಯಲ್ಲಿಕುಂಕುಮಾರ್ಚನೆ, ನಾಗನಿಗೆ ಕ್ಷೀರಾಭಿಷೇಕ, ಗುಳಿಗನಿಗೆ ಸೀಯಾಳ ಸಮರ್ಪಣೆ, ಬೆಳಗ್ಗೆ 9.30ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ, ಬೆಳಗ್ಗೆ 10ಕೆ ಸಭಾ ಕಾರ್ಯಕ್ರಮ, ಎಡನೀರು ಸ್ವಾಮೀಜಿಯವರಿಂದ ದೀಪಜ್ವಲನೆ, ಆಶೀರ್ವಚನ, ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರಿಂದ ಧಾರ್ಮಿಕ ಭಾಷಣ, ದಾಮೋದರ ಮಂಗಳೂರು ಅಧ್ಯಕ್ಷತೆ ವಹಿಸುವರು. ಉದ್ಯಮಿ ವಸಂತ ಪೈ ಬದಿಯಡ್ಕ, ಉದ್ಯಮಿ ಮಧುಸೂದನ ಆಯರ್ , ಅರಣ್ಯಾಧಿಕಾರಿ ಸತೀಶ್ ರೈ, ಎನ್ . ಎ. ಚಂದ್ರಶೇಖರ್ , ದಾಮೋದರ ಮಾವಂಜಿ, ಮಧುಸೂಧನ ಕೆದಿಲ್ಲಾಯ, ರತನ್ ಕುಮಾರ್ ರೈ , ವಾಮನ ಕುಮಾರ್ ಬೆಂಗಳೂರು, ಚಿದಾನಂದ ಕೆದಿಲ್ಲಾಯ, ಬಾಲಕೃಷ್ಣ ಪೂಜಾರಿ ಕಡಮಗದ್ದೆ ಭಾಗವಹಿಸುವರು. ಮಧ್ಯಾಹ್ನ 12.30ಕೆ ಮಹಾಪೂಜೆ ನಡೆಯಲಿದೆ.

ಓದಲೇ ಬೇಕಾದ ಸುದ್ದಿ