ವಿಕ ಸುದ್ದಿಲೋಕ ಗೋಕರ್ಣ ಮಹಾಲಯ ಅಮಾವಾಸ್ಯೆ ದಿನವಾದ ಶನಿವಾರ ಅಧಿಕ ಸಂಖ್ಯೆಯಲ್ಲಿಶ್ರದ್ದಾಳುಗಳು ಸಿದ್ದಿ ಮತ್ತು ಮುಕ್ತಿ ಕ್ಷೇತ್ರಕ್ಕೆ ಆಗಮಿಸಿ ಪಿತೃಪಕ್ಷದ ಕಾರ್ಯಗಳನ್ನು ನೆರವೇರಿಸಿದರು.
ಇಲ್ಲಿನ ಕೋಟಿತೀರ್ಥಕಟ್ಟೆ, ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿಪಿತೃಸ್ಥಾಲೇಶ್ವರ ಮಂದಿರ ಆವಾರ ಹಾಗೂ ವಿವಿಧ ಮನೆಗಳಲ್ಲಿಮೀಸಲಿಟ್ಟಿರುವ ಸಭಾಂಗಣದಲ್ಲಿಕುಟುಂಬದಲ್ಲಿನಿಧನರಾದ ಹಿರಿಯರಿಗೆ ಪುರೋಹಿತರ ಮುಖೇನ ಪಿಂಡ ಪ್ರದಾನ, ತರ್ಪಣ, ಶ್ರಾದ್ದ ಕಾರ್ಯ ನೆರವೇರಿಸಿ ಮೃತರ ಆತ್ಮಕ್ಕೆ ಸದ್ಗತಿ ಕೋರಿದರು.
ಕೋಟಿತೀರ್ಥ ಸ್ನಾನ ಮಾಡಿ ವಿಧಿವಿಧಾನ ನೆರವೇರಿಸಿ ಸಮುದ್ರದಲ್ಲಿಪಿಂಡ ವಿರ್ಸಜಿಸುವ ಪದ್ದತಿಯಿರುವುದರಿಂದ ಈ ಭಾಗದ ಎಲ್ಲೆಡೆ ಜನಜಂಗುಳಿ ನೆರೆದಿತ್ತು. ಸಮುದ್ರಕ್ಕೆ ತೆರಳುವರರನ್ನು ಜೀವರಕ್ಷಕ ಸಿಬ್ಬಂದಿ ನಿಗಾವಹಿಸಿ, ಎಚ್ಚರಿಕೆ ನೀಡುತ್ತಿದ್ದರು.
ಕಳೆದ ಹದಿನೈದು ದಿನಗಳಿಂದ ರಾಜ್ಯದ ವಿವಿಧೆಡೆ ಹಾಗೂ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಮತ್ತಿತರ ಹೊರರಾಜ್ಯದಿಂದ ಜನರು ಆಗಮಿಸಿ ಪಿತೃಪಕ್ಷ ಕಾರ್ಯ ನೆರವೇರಿಸಿದರು.
ಭಕ್ತರ ದಂಡು:
ಮಹಾಗಣಪತಿ, ಮಹಾಬಲೇಶ್ವರ ಮಂದಿರದಲ್ಲಿಅಮಾವಾಸ್ಯೆ ನಿಮಿತ್ತ ಅಧಿಕ ಸಂಖ್ಯೆಯಲ್ಲಿಭಕ್ತರು ಆಗಮಿಸಿದ್ದು, ದೇವರ ದರ್ಶನಕ್ಕೆ ಸರದಿ ಸಾಲು ನೆರೆದಿತ್ತು. ಎಲ್ಲಾಪ್ರಮುಖ ಮಾರ್ಗಗಳಲ್ಲಿವಾಹನ ದಟ್ಟಣೆ ಉಂಟಾಗಿತ್ತು.
ಕಡಲತೀರಕ್ಕೆ ಸಾಗುವ ಮಾರ್ಗದ ಪಿತೃಸ್ಥಾಲೇಶ್ವರ ಮಂದಿರಕ್ಕೆ ಸ್ಥಳೀಯರು ಅಪಾರ ಸಂಖ್ಯೆಯಲ್ಲಿಆಗಮಿಸಿ ಹಣ್ಣು, ಕಾಯಿ ಸೇವೆ ಮಾಡಿ ದೀಪ ಬೆಳಗಿ ವಂದಿಸಿದರು. ಈ ದಿನದಂದು ಇಲ್ಲಿವಿಶೇಷ ಪೂಜೆ ನೆರವೇರಿತು.
ಬಾಡಿಗೆ ಪಾದರಕ್ಷೆ:
ಇಲ್ಲಿನ ಮುಖ್ಯ ಕಡಲತೀರಕ್ಕೆ ತೆರಳಿ ಪಿಂಡ ಬಿಡಲು ಮರಳು ಕಾವಿನಲ್ಲಿಬರಿಗಾಲಿನಲ್ಲಿತೆರಳಲು ಆಗದಿದ್ದವರಿಗೆ ಇಲ್ಲಿರುವ ಗೂಡಂಗಡಿಯ ಒಬ್ಬರು ಪ್ಲಾಸ್ಟಿಕ್ ಪಾದರಕ್ಷೆ ಬಾಡಿಗೆ ನೀಡಿ ಅನುಕೂಲ ಮಾಡಿಕೊಟ್ಟರು.