ಸಮೀಪದ ನಸಲಾಪುರದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿಪೋಷಣ ಅಭಿಯಾನ ವಿಶೇಷ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜಶ್ರೀ ಬಡಾಳೆ, ವಲಯ ಮೇಲ್ವಿಚಾರಕಿ ಎನ್ .ಕೆ. ತಪ್ಸಿ ಹಾಗೂ ಎಸ್ .ಸಿ. ಕಾಂಬಳೆ ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು.
ಪಿಎಚ್ ಸಿ ವತಿಯಿಂದ ಹನುಮಂತ ಕಾಟೆ ಮತ್ತು ಮಿನಾಜ್ ಮುಲ್ಲಾ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶಂಕರ ಕುಮಾರ್ ಭಾಗವಹಿಸಿ ಆರೋಗ್ಯ ಹಾಗೂ ಪೌಷ್ಟಿಕತೆಯ ಕುರಿತು ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರಾದ ಅರ್ಪಣಾ ಪಾಟೀಲ, ನಜೀರ್ ತಾಂಬಟ್ , ಸಹಾಯಕಿಯರಾದ ಮೌಸಿನ್ ಶೇಖ್ , ರತ್ನ ಬೇಡಿಕಿಹಾಳಿ, ಒಕ್ಕೂಟದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
- 10 ಬಿಎಸ್ ಡಿಟಿ 01
ನಸಲಾಪುರ ದಲ್ಲಿ ಪೋಷಣ ಅಭಿಯಾನ ವಿಶೇಷ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.