- ಸಿಬ್ಬಂದಿಗೆ ಶೇ. 10 ಬೋನಸ್ ವಿತರಣೆ - ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆಮಾಹಿತಿ
ವಿಕ ಸುದ್ದಿಲೋಕ ನಿಪ್ಪಾಣಿ (ಬೆಳಗಾವಿ)ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿವಿಸ್ತರಿಸಿಕೊಂಡಿರುವ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ, ಪ್ರಸಕ್ತ ಸಾಲಿನಲ್ಲಿಸದಸ್ಯರಿಗೆ ಶೇ. 12ರಷ್ಟು ಶೇರು ಲಾಭಾಂಶ ಹಾಗೂ ಸಿಬ್ಬಂದಿಗೆ ಶೇ.10ರಷ್ಟು ಬೋನಸ್ ನೀಡಲಿದೆ ಎಂದು ಸೊಸೈಟಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆಹೇಳಿದರು.
ಯಕ್ಸಂಬಾದ ಸೊಸೈಟಿ ಸಭಾಭವನದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘1991ರಲ್ಲಿಪ್ರಾರಂಭವಾದ ಈ ಸಂಸ್ಥೆ ಕರ್ನಾಟಕದಲ್ಲಿ180, ಮಹಾರಾಷ್ಟ್ರದಲ್ಲಿ50 ಹಾಗೂ ಗೋವಾದಲ್ಲಿ5 ಸೇರಿ ಒಟ್ಟು 235 ಶಾಖೆಗಳ ಮೂಲಕ ಸುಮಾರು 4.60 ಲಕ್ಷಕ್ಕೂ ಅಧಿಕ ಸದಸ್ಯರಿಗೆ ಸೇವೆ ಒದಗಿಸುತ್ತಿದೆ. 5754.96 ಕೋಟಿ ರೂ. ಒಟ್ಟು ಠೇವಣಿಯೊಂದಿಗೆ 4121.05 ಕೋಟಿ ರೂ. ಸಾಲ ವಿತರಿಸಿ, ಕಳೆದ ಆರ್ಥಿಕ ವರ್ಷ 51.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ’’, ಎಂದು ಮಾಹಿತಿ ನೀಡಿದರು.
‘‘ಸಂಸ್ಥೆಯ ಸಂಸ್ಥಾಪಕರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆಅವರ ನೇತೃತ್ವದಲ್ಲಿ, ಸಹ ಸಂಸ್ಥಾಪಕರಾದ ಶಾಸಕಿ ಶಶಿಕಲಾ ಜೊಲ್ಲೆಅವರ ಮಾರ್ಗದರ್ಶನದಲ್ಲಿಸಂಸ್ಥೆಯು ಯಶಸ್ಸಿನ ಹಾದಿಯಲ್ಲಿಮುನ್ನಡೆಯುತ್ತಿದೆ’’, ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಜ್ಯೋತಿಪ್ರಸಾದ ಜೊಲ್ಲೆ, ಸೊಸೈಟಿ ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಯಾಸಿನ್ ತಾಂಬೂಲೆ, ಚೇತನ್ ದೇಶಪಾಂಡೆ, ಪ್ರಧಾನ ವ್ಯವಸ್ಥಾಪಕ ಬಹದ್ದೂರ ಗುರವ, ಉಪಪ್ರಧಾನ ವ್ಯವಸ್ಥಾಪಕ ಮಹಾದೇವ ಮಂಗಾವತೆ, ರಮೇಶ ಕುಂಬಾರ, ಸಹಾಯಕ ಪ್ರಧಾನ ವ್ಯವಸ್ಥಾಪಕ ಶೇಖರ ಪಾಟೀಲ ಉಪಸ್ಥಿತರಿದ್ದರು.