ನಾಯಿ ದಾಳಿ, ಬಾಲಕನಿಗೆ ಗಾಯ

Contributed by: meghashree0610@gmail.com|Vijaya Karnataka•
boy seriously injured by dog attack local anger
ನಾಯಿ ದಾಳಿ , ಬಾಲಕನಿಗೆ ಗಾಯ

ದಾಬಸಪೇಟೆ: ಸೋಂಪುರ ಹೋಬಳಿಯ ನಿಡವಂದ ಗ್ರಾಮದಲ್ಲಿನಾಯಿ ಕಡಿತದಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಕ್ಷಯ್ (14) ಗಾಯಗೊಂಡ ಬಾಲಕ. ಮೂಲತಃ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಅಮರೇಶ ಹಡಪದ ಎಂಬುವರ ಪುತ್ರ.

ಅಮರೇಶ ಅವರು ಜೀವನೋಪಾಯಕ್ಕಾಗಿ ನಿಡವಂದ ಗ್ರಾಮಕ್ಕೆ ಬಂದಿದ್ದಾರೆ. ಸ್ಥಳೀಯ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿಕೆಲಸ ಮಾಡುತ್ತಿದ್ದಾರೆ. ನಿಡವಂದ ಗ್ರಾಮದಲ್ಲಿಬಾಡಿಗೆ ಮನೆಯಲ್ಲಿಕುಟುಂಬ ಸಮೇತ ವಾಸವಾಗಿದ್ದಾರೆ. ಇವರಿಗೆ ಅಕ್ಷಯ್ ಸೇರಿ ಇಬ್ಬರು ಮಕ್ಕಳಿದ್ದಾರೆ. ಕೆಲಸಕ್ಕೆ ಹೋಗಿದ್ದಾಗ ಮಕ್ಕಳು ಮನೆಯ ಹೊರಗೆ ಆಟವಾಡುತ್ತಿದ್ದ ಸಂದರ್ಭದಲ್ಲಿಸಾಕು ನಾಯಿ ದಾಳಿ ಮಾಡಿದೆ. ಇದರಿಂದ ಅಕ್ಷಯ್ ನ ಎಡೆಗೈ, ತೋಳು, ಎದೆ ಬಾಗ, ತೊಡೆ ಭಾಗಕ್ಕೆ ಗಾಯವಾಗಿದ್ದು, ತುಮಕೂರಿನ ಸರಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ.

ಇದೇ ನಾಯಿ ಈ ಹಿಂದೆ ಮೂರ್ನಾಲ್ಕು ಜನರಿಗೆ ಕಚ್ಚಿದೆ. ಬಿಹಾರ ಮೂಲದ ಗಜೇಂದ್ರ ಎಂಬುವರು ಈ ನಾಯಿ ಸಾಕಣೆ ಮಾಡಿದ್ದಾರೆ. ಮತ್ತೊಮ್ಮೆ ಇಂತಹ ಘಟನೆ ಮರುಕಳಿಸದಂತೆ ಸಂಬಂಧಪಟ್ಟವರು ಕ್ರಮ ವಹಿಸಬೇಕೆಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

11 ಪೊಟೋ 1.2: ನಾಯಿಯ ದಾಳಿಯಿಂದ ಗಾಯಗೊಂಡಿರುವ ಅಕ್ಷಯ್ .

ಓದಲೇ ಬೇಕಾದ ಸುದ್ದಿ