ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಐಎನ್ ಡಿಐಎ ಮೈತ್ರಿಕೂಟದ ಪ್ರತಿಭಟನೆಯಲ್ಲಿಪಾಲ್ಗೊಳ್ಳಲು ಸಿಎಂ ಡಿ.ಕೆ.ಶಿವಕಮಾರ್ ದಿಲ್ಲಿಗೆ ತೆರಳಲಿದ್ದಾರೆ.
ಮೈಸೂರು ದಸರಾ ಉದ್ಘಾಟನೆ ಬಳಿಕ ಭಾನುವಾರ ರಾತ್ರಿ ಚೆನ್ನೈಗೆ ಪ್ರಯಾಣ ಬೆಳೆಸಿರುವ ಸಿಎಂ ಅವರು, ಸೋಮವಾರ ಬೆಳಗ್ಗೆ ಅಲ್ಲಿನಡೆಯುವ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ. ಬಳಿಕ ದಿಲ್ಲಿಗೆ ಹೊರಡಲಿದ್ದಾರೆ.ಹಲವರು ದಿಲ್ಲಿಗೆ
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿಸಚಿವರು ಸೇರಿದಂತೆ ಕಾಂಗ್ರೆಸ್ ನ ಹಲವು ಶಾಸಕರು, ಮುಖಂಡರು ದಿಲ್ಲಿಯತ್ತ ಹೊರಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಪ್ರಮುಖ ಮುಖಂಡರು ದಿಲ್ಲಿಯ ಪ್ರತಿಭಟನೆಯಲ್ಲಿಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ದಿಲ್ಲಿಗೆ ತೆರಳುವ ಸಾಧ್ಯತೆಯಿದೆ.