ಗಂಗಾವತಿ : ಫಲಕ ಅಳವಡಿಕೆ ವಿಚಾರ ಎರಡು ಗುಂಪುಗಳ ಮಧ್ಯೆ ನಗರದ ಕೋಟೆ ಪ್ರದೇಶದಲ್ಲಿಮಾತಿನ ಚಕಮಕಿ ಭಾನುವಾರ ನಡೆದಿದೆ. ಸುರಯ್ಯ ತ್ಯಾಜ್ಜಿ ಎಂಬ ನಾಮಫಲಕ ಹಾಕಲು ಒಂದು ಗುಂಪು ಮುಂದಾಗಿದೆ.ಇದಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತಕ್ಕೆ ಬಂದಾಗ ಪೊಲೀಸರು ವಾತಾವರಣವನ್ನು ಹತೋಟೆಗೆ ತಂದಿದ್ದಾರೆ. ಸ್ಥಳದಲ್ಲಿನೂರಾರು ಜನರು ಸೇರಿದ್ದರು. ನಗರಸಭೆ ಪೌರಾಯುಕ್ತ ರಾಮರೆಡ್ಡಿ ಪಾಟೀಲ್ ಪ್ರತಿಕ್ರಿಯಿಸಿ, ನಾಮಫಲಕ ಹಾಕಲು ನಗರಸಭೆಯಿಂದ ಅನುಮತಿಪಡೆಯಬೇಕು. ಆದರೆ ಅನಧಿಕೃತ ನಾಮಫಲಕ ಹಾಕುವಂತಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ನಗಸರಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಮಾಹಿತಿ ನೀಡಿದರು.