ದಿಲ್ಲಿಪೊಲೀಸರ ದಬ್ಬಾಳಿಕೆ ಖಂಡನೆ

Contributed by: bhrahmanand.arali@timesgroup.com|Vijaya Karnataka•
delhi police brutality protests and unified struggle
ಚಿತ್ರ: 11ಜಿಎಲ್ ಬಿ41

ದಿಲ್ಲಿಯಲ್ಲಿಹೋರಾಟಗಾರರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿರುವುದನ್ನು ಖಂಡಿಸಿ ನಗರದಲ್ಲಿಎಐಡಿವೈಒ - ಎಐಡಿಎಸ್ ಒ ಪ್ರತಿಭಟನೆ ನಡೆಸಲಾಯಿತು.
**

* ಎಐಡಿವೈಒ - ಎಐಡಿಎಸ್ ಒನಿಂದ ಜಗತ್ ವೃತ್ತದಲ್ಲಿಪ್ರತಿಭಟನೆ

ದಿಲ್ಲಿಪೊಲೀಸರ ದಬ್ಬಾಳಿಕೆ ಖಂಡನೆ

ವಿಕ ಸುದ್ದಿಲೋಕ ಕಲಬುರಗಿ

ದಿಲ್ಲಿಯ ಜಂತರ್ ಮಂತರ್ ನಲ್ಲಿನಡೆದ ಪೊಲೀಸ್ ದಬ್ಬಾಳಿಕೆ ಹಾಗೂ ಮುಖಂಡರ ಬಂಧನವನ್ನು ಖಂಡಿಸಿ, ಅಖಿಲ ಭಾರತ ಪ್ರತಿಭಟನಾ ದಿನದ ಪ್ರಯುಕ್ತ ನಗರದಲ್ಲಿಎಐಡಿವೈಒ - ಎಐಡಿಎಸ್ ಒ ವತಿಯಿಂದ ನಗರದ ಜಗತ್ ವೃತ್ತದಲ್ಲಿಭಾನುವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್ .ಎಚ್ . ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿನಡೆದಿರುವ ಎಸ್ ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿತ್ತು. ಆದರೆ, ದಿಲ್ಲಿಗೆ ಬರುವ ಹೋರಾಟಗಾರರನ್ನು ತಡೆಯಲು ರೈಲು ಸಂಚಾರ ಸ್ಥಗಿತಗೊಳಿಸಿ, ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಹಲವಾರು ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿಹೋರಾಟವನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆ ಖಂಡನೀಯ ಎಂದರು.

ತುಳಜರಾಮ ಮಾತನಾಡಿ, ಜನವಿರೋಧಿ ನೀತಿಗಳ ವಿರುದ್ಧ ಧನಿ ಎತ್ತಿದ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳ ಮೇಲೆ ಸರಕಾರ ಪೊಲೀಸ್ ಬಲಪ್ರಯೋಗ ಮಾಡುತ್ತಿದೆ. ತಕ್ಷಣವೇ ಬಂಧಿತರೆಲ್ಲರನ್ನೂ ಬೇಷರತ್ತಾಗಿ ಬಿಡುಗಡೆ ಮಾಡಬೇಕು, ಎಸ್ ಐಆರ್ ಸಂಪೂರ್ಣ ರದ್ದುಗೊಳಿಸಬೇಕು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಸದಸ್ಯ ಶಿಲ್ಪಾ ಬಿ.ಕೆ., ಎಐಡಿವೈಒ ಜಿಲ್ಲಾ ಸಮಿತಿ ಸದಸ್ಯ ರಮೇಶ್ ದೇವಕರ, ಉಪಾಧ್ಯಕ್ಷ ಪ್ರೀತಿ ದೊಡ್ಡಮನಿ, ಗೋವಿಂದ ಯಳವಾರ, ನಾಗರಾಜ…, ಜಿಲ್ಲಾ ಸಮಿತಿ ಸದಸ್ಯರಾದ ಸ್ಫೂರ್ತಿ, ಬಾಬು, ಯುವರಾಜ…, ರಾಹುಲ್ ಸೇರಿ ಇತರರಿದ್ದರು.

ಓದಲೇ ಬೇಕಾದ ಸುದ್ದಿ