ಆಟದ ಮೂಲಕ ಡಿಜಿಟಲ್ ಕಲಿಕೆ: ಮೊಗ್ರಾಲ್ ಶಾಲೆಯಲ್ಲಿಯೋಜನೆಗೆ ಚಾಲನೆ

Contributed by: shreemolu.93@gmail.com|Vijaya Karnataka•
digital square project a revolution in childrens education
ವಿಕ ಸುದ್ದಿಲೋಕ ಕುಂಬಳೆ

ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕಂಪ್ಯೂಟರ್ ಆಧಾರಿತ ಕಲಿಕೆಯನ್ನು ಪರಿಚಯಿಸಿ, ಅವರನ್ನು ಡಿಜಿಟಲ್ ಸಾಕ್ಷರರನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರಕಾರ ಆರಂಭಿಸಿರುವ ‘ಡಿಜಿಟಲ್ ಸ್ ಕ್ವೇರ್ ’ ಯೋಜನೆಗೆ ಮೊಗ್ರಾಲ್ ನ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿಚಾಲನೆ ನೀಡಲಾಯಿತು.
ರಾಜ್ಯ ಸರಕಾರದ ನೂರು ದಿನಗಳ ಕಾರ್ಯಯೋಜನೆಯ ಭಾಗವಾಗಿ ಆರಂಭಿಸಲಾದ ಈ ಯೋಜನೆಯಡಿ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಕಂಪ್ಯೂಟರ್ ಆಟಗಳು ಹಾಗೂ ಮನರಂಜನಾತ್ಮಕ ಚಟುವಟಿಕೆಗಳ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಏಳನೇ ತರಗತಿ ಪೂರ್ಣಗೊಳ್ಳುವ ವೇಳೆಗೆ ವಿದ್ಯಾರ್ಥಿಗಳನ್ನು ಸಂಪೂರ್ಣ ಡಿಜಿಟಲ್ ಸಾಕ್ಷರರನ್ನಾಗಿ ರೂಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿಕಾರ್ಯನಿರ್ವಹಿಸುವ ಕೈಟ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ 5,100 ಶಾಲೆಗಳು ಈಗಾಗಲೇ ಈ ಯೋಜನೆಯ ವ್ಯಾಪ್ತಿಗೆ ಬಂದಿದ್ದು, ಪ್ರತಿ ಶಾಲೆಗೆ ಕನಿಷ್ಠ ಎರಡು ಕಂಪ್ಯೂಟರ್ ಗಳನ್ನು ಒದಗಿಸುವುದರ ಜತೆಗೆ ಮುಕ್ತ ಕಲಿಕಾ ಪ್ರಯೋಗಾಲಯವನ್ನೂ ಸಿದ್ಧಪಡಿಸಲಾಗುತ್ತದೆ. ಶಾಲೆಗಳ ಮುಖ್ಯಶಿಕ್ಷಕರು ಹಾಗೂ ನೋಡಲ್ ಶಿಕ್ಷಕರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ.

ಶಾಲೆಯಲ್ಲಿನಡೆದ ಕಾರ್ಯಕ್ರಮದಲ್ಲಿಶಾಲಾ ನಿರ್ವಹಣಾ ಸಮಿತಿ (ಎಸ್ ಎಂಸಿ) ಅಧ್ಯಕ್ಷ ರಿಯಾಜ್ ಕರೀಂ ಯೋಜನೆಯನ್ನು ಉದ್ಘಾಟಿಸಿದರು. ಹಿರಿಯ ಸಹಾಯಕ ಶಿಕ್ಷಕಿ ಜಾನ್ಸಿ ಚೆಲ್ಲಪ್ಪನ್ ಅಧ್ಯಕ್ಷತೆ ವಹಿಸಿದರು. ಪಿಟಿಎ ಉಪಾಧ್ಯಕ್ಷ ಎಚ್ .ಎಂ. ಅಬ್ದುಲ್ ಕರೀಂ, ಸಿಬ್ಬಂದಿ ಕಾರ್ಯದರ್ಶಿ ಎಫ್ .ಎಂ. ತಸ್ನೀಂ ಹಾಗೂ ಎಸ್ ಆರ್ ಜಿ ಸಂಚಾಲಕಿ ಜೈನಬಾ ಶುಭ ಹಾರೈಸಿದರು. ಸುಲ್ಫಿಕರ್ ಅಲಿ ಸ್ವಾಗತಿಸಿದರು. ಫಾಯಿಸ್ ವಂದಿಸಿದರು.

09 ಕೆ.ಯು.: ಮೊಗ್ರಾಲ್ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿಆರಂಭಿಸಲಾದ ಡಿಜಿಟಲ್ ಸ್ ಕ್ವೇರ್ ಯೋಜನೆಯನ್ನು ಎಸ್ ಎಂಸಿ ಅಧ್ಯಕ್ಷ ರಿಯಾಜ್ ಕರೀಂ ಉದ್ಘಾಟಿಸಿದರು.

ಓದಲೇ ಬೇಕಾದ ಸುದ್ದಿ