ಎರಡು ಕೆರೆಗಳಿಗೆ ನೀರು ತುಂಬಿಸಲು ಸಚಿವರಿಗೆ ಮನವಿ

Contributed by: blokesh71@yahoo.com|Vijaya Karnataka•
discussion with the minister by farmers on water distribution to lakes in chalakkere
ಎರಡು ಕೆರೆಗಳಿಗೆ ನೀರು ತುಂಬಿಸಲು ಸಚಿವರಿಗೆ ಮನವಿ

ವಿಕ ಸುದ್ದಿಲೋಕ ಚಳ್ಳಕೆರೆ
ತಾಲೂಕಿನ ಪರಶುರಾಂಪುರ ಹೋಬಳಿಯ ಗೋಸಿಕೆರೆ, ಚೌಳೂರು ಮತ್ತು ಪರಶುರಾಂಪುರದ ಎರಡು ಕೆರೆಗಳಿಗೆ ನೀರು ತುಂಬಿಸುವಂತೆ ಅಖಂಡ ರೈತ ಸಂಘದ ಕಾರ್ಯಕರ್ತರು ನಗರದಲ್ಲಿಭಾನುವಾರ ಜಿಲ್ಲಾಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಸಿಡ್ಲಯ್ಯನಕೋಟೆ ಬ್ಯಾರೇಜ್ ನಿಂದ ಚಾನಲ್ ಮೂಲಕ ಹರಿದು ಬರುವ ನೀರನ್ನು ಟಿ.ಎನ್ .ಕೋಟೆ ಗ್ರಾಮಸ್ಥರು ಅಡ್ಡ ಹಾಕಿ ತಮ್ಮೂರು ಕೆರೆಗೆ ನೀರು ಬಿಟ್ಟುಕೊಳ್ಳುವುದರಿಂದ ಮುಂದಿನ ನಾಲ್ಕು ಕೆರೆಗಳಿಗೆ ನೀರು ಬರದಂತೆ ಅಡ್ಡಿಪಡಿಸುವುದು ನಿಲ್ಲಿಸಬೇಕು. ಪ್ರಸ್ತುತ ಪರಶುರಾಂಪುರ ಕೆರೆಗೂ ನೀರು ಬಂದಿದ್ದು, ನಿರಂತರವಾಗಿ ಹಿರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಖಂಡ ರೈತ ಸಂಘದ ಅಧ್ಯಕ್ಷ ಕೆ.ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮನವಿ ಮಾಡಿದರು.

ಸಚಿವ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ ಕಾಲುವೆ ಒಡೆದು ನೀರು ಬಿಟ್ಟುಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದ್ದು, ಸಮಸ್ಯೆ ಬಗೆಹರಿಸಿ ಪರಶುರಾಂಪುರ ಕೆರೆಗೂ ನೀರು ಹರಿಯುವಂತೆ ಮಾಡಲಾಗಿದೆ. ಅಕ್ಕಪಕ್ಕದ ಗ್ರಾಮದ ರೈತರು ಯಾವುದೇ ಗಲಾಟೆಗಳು ಮಾಡಿಕೊಳ್ಳದೆ ಸೌಹಾರ್ದಯುತವಾಗಿ ಇರಬೇಕು ಎಂದು ಸಲಹೆ ನೀಡಿದರು.

ವಿವಿ ಸಾಗರದಿಂದ ಚಳ್ಳಕೆರೆಗೆ ಹರಿಸುವ 0.25 ಟಿಎಂಸಿ ನೀರಿನಲ್ಲೇ ಸ್ವಲ್ಪ ಭಾಗ ರಾಣಿಕೆರೆಗೂ ಮತ್ತು ಪರಶುರಾಂಪುರ ಭಾಗದ ಕೆರೆಗಳಿಗೂ ಹರಿಸುವಂತೆ ಮಾಡಲಾಗಿತ್ತು. ಹೀಗಾಗಿ ರೈತರು ಹೊಂದಾಣಿಕೆಯಿಂದ ಹೋಗುವ ಮೂಲಕ ಎಲ್ಲಕೆರೆಗಳಿಗೆ ನೀರು ಹರಿಯಲು ಅವಕಾಶ ಕೊಡಬೇಕು. ಇನ್ನೂ ಭದ್ರಾ ಡ್ಯಾಮ್ ನಿಂದ 3 ಟಿಎಂಸಿ ನೀರು ಬಿಡಿಸಿ ಪ್ರಾಯೋಗಿಕವಾಗಿ ಕೆರೆಗಳಿಗೆ ಹರಿಸುವ ಕೆಲಸ ಮಾಡಲಾಗಿದ್ದು, ತುಂಗಾ ಡ್ಯಾಮ್ ನಿಂದ ನೀರು ಲಿಫ್ಟ್ ಮಾಡಿದಲ್ಲಿಮತ್ತೆ ನೀರು ಹರಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

--

ಫೋಟೊ:11ಸಿಎಲ್ ಕೆ 1. ಚಳ್ಳಕೆರೆಯಲ್ಲಿಭಾನುವಾರ ರೈತರ ಜತೆ ಜಿಲ್ಲಾಉಸ್ತುವಾರಿ ಸಚಿವ ಟಿ.ರಘುಮೂರ್ತಿ ಚರ್ಚೆ ನಡೆಸುತ್ತಿರುವುದು.

ಓದಲೇ ಬೇಕಾದ ಸುದ್ದಿ