ದಸರಾ ಅಂಗವಾಗಿ ಮೊದಲ ಬಾರಿಗೆ ದುರ್ಗಾದೌಡ ಸಮಿತಿಯಿಂದ ಪಟ್ಟಣದಲ್ಲಿದುರ್ಗಾದೌಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ ್ಯಕ್ರಮಕ್ಕೆ ಭಾನುವಾರ ಬನ್ನಿಕಟ್ಟಿ ದೇವಸ್ಥಾನದ ಹಿಂಭಾಗದಲ್ಲಿರುವ ಆದಿ ಮಹಾಗಣಪತಿ ದೇವಸ್ಥಾನದಲ್ಲಿವಿಶೇಷ ಪೂಜೆ ಸಲ್ಲಿಸಿ ಶ್ರೀ ರುದ್ರಮನಿ ಸ್ವಾಮಿಗಳು ಚಾಲನೆ ನೀಡಿದರು. ದುರ್ಗಾ ದೌಡ ಸಾಗುವ ಮಾರ್ಗದಲ್ಲಿರಸ್ತೆಗಳನ್ನು ತೊಳೆದು ತಳಿರು ತೋರಣಗಳಿಂದ ಹಾಗೂ ರಂಗೋಲಿ ಹಾಕಿ ಶೃಂಗರಿಸಲಾಗಿತ್ತು. ಮಹಿಳೆಯರು, ಯುವತಿಯರು ದೇವಿಯ ಧ್ವಜಕ್ಕೆ ಆರತಿ ಮಾಡಿ ಶ್ರದ್ಧಾಭಕ್ತಿಯಿಂದ ಸ್ವಾಗತಿಸಿದರು.
ಮೊದಲ ದಿನದ ಧಾರ್ಮಿಕ ನಡಿಗೆಯು ಆದಿ ಮಹಾಗಣಪತಿ ದೇವಸ್ಥಾನಿದಂದ ಪ್ರಾರಂಭವಾಗಿ ಅಂಬೇಡ್ಕರ್ ಓಣಿ, ಶಿವಾಜಿ ಸರ್ಕಲ್ , ಲಮಾಣಿ ತಾಂಡಾ , ಮಾರ್ಕೆಟಿಂಗ್ ಸೊಸೈಟಿ ಮಾರ್ಗವಾಗಿ ಸಾಗಿ ಸಾಯಿ ಮಂದಿರದಲ್ಲಿಮುಕ್ತಾಯಗೊಂಡಿತು.