ಸಂಕೇಶ್ವರ ವೈರಾಗಿ ಅಡ್ಡೆಯಲ್ಲಿನವರಾತ್ರಿ ಸಂಭ್ರಮ

Contributed by: shashankm102@gmail.com|Vijaya Karnataka•
cultural glory of sankeshwar vaigagi addeyallina navaratri
- ಭಕ್ತರ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

ವಿಕ ಸುದ್ದಿಲೋಕ ಸಂಕೇಶ್ವರ
ಪಟ್ಟಣದ ವೈರಾಗಿ ಅಡ್ಡೆಯಲ್ಲಿನವರಾತ್ರಿ ಉತ್ಸವದ ಅಂಗವಾಗಿ ಜೈ ಸಂತೋಷಿಮಾತಾ ಯುವಕ ಮಂಡಳದ ವತಿಯಿಂದ ದುರ್ಗಾಮಾತೆಯ ಸನ್ನಿಧಿಯಲ್ಲಿಹಮ್ಮಿಕೊಳ್ಳಲಾಗಿದ್ದ ಬಾಲದುರ್ಗಾ ವೇಷಧಾರಿ ಸ್ಪರ್ಧೆ ಹಾಗೂ ಭರತನಾಟ್ಯ ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು. 6ರಿಂದ 12 ವರ್ಷದ ಮಕ್ಕಳು ಶೈಲಪುತ್ರಿ, ಸಿದ್ಧಿಧಾತ್ರಿ, ಸ್ಕಂದಮಾತೆ, ಕಾಲರಾತ್ರಿ ಹಾಗೂ ಮಹಾಕಾಳಿ ಸೇರಿದಂತೆ ದೇವಿಯ ನಾನಾ ರೂಪಗಳಲ್ಲಿಕಂಗೊಳಿಸಿದರು. ದೇವಿಯ ವೇಷಭೂಷಣ ತೊಟ್ಟ ಪುಟಾಣಿಗಳು ತಮ್ಮ ಸಂಭಾಷಣೆ ಮತ್ತು ಭಾವಾಭಿವ್ಯಕ್ತಿಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಇದೇ ವೇಳೆ ಮಕ್ಕಳ ಮುಗ್ಧತೆ, ಸಹಜ ತುಂಟಾಟ ಹಾಗೂ ಕೀಟಲೆಗಳು ನೆರೆದಿದ್ದ ಪ್ರೇಕ್ಷಕರ ಮುಖದಲ್ಲಿಮಂದಹಾಸ ಮೂಡಿಸಿದವು.

ವಿದ್ಯಾರ್ಥಿನಿ ಐಶ್ವರ್ಯಾ ರಿಜಕನವರ ಭರತನಾಟ್ಯ ಪ್ರದರ್ಶನ ನೀಡಿದರು. ಹಿರಿಯ ದಂಪತಿ ಚಂದ್ರಕಾಂತ ವೈರಾಗಿ ಹಾಗೂ ಸುಮನ್ ವೈರಾಗಿ ಅವರು ಕಲಾವಿದರನ್ನು ಮತ್ತು ಅತಿಥಿಗಳನ್ನು ಗೌರವಿಸಿ ಸತ್ಕರಿಸಿದರು. ಸ್ಪರ್ಧೆಯಲ್ಲಿವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಉಡುಗೊರೆಗಳನ್ನು ವಿತರಿಸಲಾಯಿತು. ಸಿ.ಐ. ಸಂಸುದ್ದಿ, ರೋಹಿಣಿ ನಾರ್ವೇಕರ್ , ಸುರೇಶ ವೈರಾಗಿ, ಪ್ರಕಾಶ ವೈರಾಗಿ, ಕಿರಣ ವೈರಾಗಿ, ಅಭಿ ಸುತಾರ, ಉಮೇಶ ಭಂಡಾರಿ, ಸುನೀಲ ಕಾಂಬಳೆ, ಗಜಾನನ ಲಟ್ಟಿ, ಗಣೇಶ ಮಲಾಬಾದಿ ಸೇರಿದಂತೆ ಅನೇಕ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

- 18ಎಸ್ ಎನ್ ಕೆ1

ಸಂಕೇಶ್ವರದ ವೈರಾಗಿ ಅಡ್ಡೆಯಲ್ಲಿನವರಾತ್ರಿ ಉತ್ಸವ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿಬಾಲದುರ್ಗೆಯರಾಗಿ ಕಂಗೊಳಿಸಿದ ಪುಟಾಣಿಗಳು.

ಓದಲೇ ಬೇಕಾದ ಸುದ್ದಿ