ಬೀದರ್ ನ ರಂಗಮಂದಿರದಲ್ಲಿಭಾನುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿಬೀದರ್ ವಿವಿಯಿಂದ ಗೌಡಾಗೆ ಭಾಜನರಾದ ಹಿರಿಯ ಸಾಹಿತಿ ಡಾ. ಎಸ್ .ಎಂ. ಜನವಾಡಕರ್ ಅವರನ್ನು ಸನ್ಮಾನಿಸಲಾಯಿತು.****
ಬೀದರ್ ವಿವಿಯಿಂದ ಯೋಗ್ಯ ವಕ್ತಿಗೆ ಗೌರವ ಡಾಕ್ಟರೇಡ್ ಪದವಿ ಪ್ರದಾನ; ಡಾ.ಬಸವಲಿಂಗ ಪಟ್ಟದ್ದೇವರ ಅಭಿಮತ
ಬಾಲ್ಯದಿಂದಲೇ ಜನವಾಡಕರ್ ಗೆ ಸಾಹಿತ್ಯದ ಒಲವು
ವಿಕ ಸುದ್ದಿಲೋಕ ಬೀದರ್
ಬಾಲ್ಯದಿಂದಲೇ ಸಾಹಿತ್ಯ ರಚನೆಯಲ್ಲಿಆಸಕ್ತಿ ಬೆಳೆಸಿಕೊಂಡಿದ್ದ ಹಿರಿಯ ಸಾಹಿತಿ ಡಾ.ಎಸ್ .ಎಂ. ಜನವಾಡಕರ್ ಅವರು, ಚಿಕ್ಕ ವಯಸ್ಸಿನಲ್ಲಿಯೇ ಸೋಲ್ಲಾಪುರದ ಸಿದ್ಧರಾಮೇಶ್ವರರ ಕುರಿತು ಕವನ ರಚಿಸಿದ್ದರು. ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿತಮ್ಮದೇಯಾದ ಕೊಡುಗೆ ನೀಡಿರುವ ಅವರು ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್ . ಬಿರಾದಾರ ಹೇಳಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾರಂಗಮಂದಿರದಲ್ಲಿಭಾನುವಾರ ಜನಪರ ಸಾಂಸ್ಕೃತಿಕ ಪ್ರತಿಷ್ಠಾನ, ಆನಂದ ಪ್ರಕಾಶನ, ಭಾರತೀಯ ಬೌದ್ಧ ಧಮ್ಮ ಚಾರಿಟೇಬಲ್ ಟ್ರಸ್ಟ್ , ಡಾ.ಎಸ್ .ಎಂ. ಜನವಾಡಕರ್ ಹಿತೈಷಿಗಳು ಮತ್ತು ಬಂಧು ಬಳಗದ ಸಂಯುಕ್ತಾಶ್ರಯದಲ್ಲಿನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜನವಾಡಕರ್ ಅವರು ತಮ್ಮ ಬರವಣಿಗೆ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿರುವುದು ಅವರ ಸಾಧನೆಗೆ ಸಂದ ಮನ್ನಣೆಯಾಗಿದೆ ಎಂದರು. ಕೌಠಾ(ಬಿ)ಬಸವ ಯೋಗಾಶ್ರಮದ ಡಾ.ಸಿದ್ದರಾಮ ಶರಣರು ಬೆಲ್ದಾಳ ಸಾನ್ನಿಧ್ಯ ವಹಿಸಿದ್ದರು. ಆಣದೂರಿನ ವೈಶಾಲಿನಗರದ ಧಮ್ಮದರ್ಶನ ಭೂಮಿಯ ಪೂಜ್ಯ ಭಂತೆ ವರಜ್ಯೋತಿ ಥೇರೋ ನೇತೃತ್ವ ವಹಿಸಿದ್ದರು. ಹಾಲಹಳ್ಳಿಯ(ಕೆ)ದೇವನಾಂಪ್ರಿಯ ಪ್ರಿಯದರ್ಶಿ ಬುದ್ಧವಿಹಾರ ಶಾಂತಿಧಾಮದ ಪೂಜ್ಯ ಭಂತೆ ಧಮ್ಮದೀಪ ಸಮ್ಮುಖ ವಹಿಸಿದ್ದರು.
ಬೀದರ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪರಮೇಶ್ವರ ನಾಯಕ್ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ಡಾ.ರಾಮಚಂದ್ರ ಗಣಾಪುರ ಅಭಿನಂದನಾ ನುಡಿ ಸಲ್ಲಿಸಿ, ಜನವಾಡಕರ್ ಅವರು ಸಾಹಿತ್ಯ ಕ್ಷೇತ್ರಕ್ಕೆ ಹಲವು ಮಹತ್ವದ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮಾಸಿದ ಹಾಸಿಗೆ, ಕರುಳಿನ ಕತ್ತರಿ, ಬಾಳಿನ ಬಲೆಚೂರು, ಬೌದ್ಧಶ್ರೀ, ಬೆಡಗಿನ ಬೀದರ್ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯದಲ್ಲಿಜೀವನಾನುಭವ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಳಕಳಿ ಕಾಣಸಿಗುತ್ತವೆ ಎಂದರು.
ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ.ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವಾಡಕರ್ ವರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ, ಗೌರವಿಸಿರುವುದು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ ಎಂದರು. ಸಾಹಿತಿ ಡಾ.ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರಾದ ಶಿವರಾಜ ಹಾಸನಕರ್ , ಅಮೃತರಾವ ಚಿಮಕೋಡೆ, ಸುರೇಶ ಚನ್ನಶೆಟ್ಟಿ, ಡಾ.ಜಗನ್ನಾಥ ಹೆಬ್ಬಾಳೆ, ಮಾರುತಿ ಬೌದ್ದೆ, ವಿಜಯಕುಮಾರ ಸೋನಾರೆ, ವಿಠಲದಾಸ ಪ್ಯಾಗೆ, ಕಾಶಿನಾಥರಾವ ಫುಲೆ, ಭಾರತಿ ವಸ್ತ್ರದ್ , ಶಿವರಾಜ ಕುದುರೆ, ಕಾಶಿನಾಥ್ ಚಲುವಾ, ಡಿ.ನಿಜಾಮುದ್ದೀನ್ , ಟಿ.ಎಂ. ಮಚ್ಚೆ, ರವಿ ಗಂಗಶೆಟ್ಟಿ, ಲೀಲಾವತಿ ಚಾಕೋತೆ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಭಾನುಪ್ರಿಯಾ ಅರಳಿ ತಂಡದವರು ನಾಡಗೀತೆ ಹಾಡಿದರು. ಶಿವಕುಮಾರ ಪಾಂಚಾಳ ತಂಡದವರ ಗಾಯನ ಪ್ರಸ್ತುತಪಡಿಸಿದರು. ರಾಣಿ ಸತ್ಯಮೂರ್ತಿಯವರ ನಾಟ್ಯಶ್ರೀ ನೃತ್ಯಾಲಯದ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಈಲೇಶಕುಮಾರ ಸ್ವಾಗತಿಸಿದರು. ದಿಲೀಪಕುಮಾರ ಮೋಘ ನಿರೂಪಿಸಿದರು. ಅಶೋಕಕುಮಾರ ವಂದಿಸಿದರು. ಸಾಹಿತಿಗಳು, ಪ್ರಗತಿಪರ ಚಿಂತಕರು, ಮಹಿಳೆಯರು, ಮಕ್ಕಳು ಹಾಗೂ ಜನವಾಡಕರ್ ಅಭಿಮಾನಿಗಳು ಮತ್ತು ಹಿತೈಷಿಗಳು ಭಾಗವಹಿಸಿದ್ದರು.
***ಕೋಟ್ ...
ಜನವಾಡಕರ್ ಅವರು ಯಾವುದೇ ಪ್ರಚಾರದ ಹಂಗಿಲ್ಲದೆ ಮೌನವಾಗಿ ಸಾಹಿತ್ಯ ಕ್ಷೇತ್ರದಲ್ಲಿಸದ್ದಿಲ್ಲದೆ ಕ್ರಾಂತಿ ಮಾಡಿದ್ದಾರೆ. ಇಂತಹ ಯೋಗ್ಯ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ಬೀದರ್ ವಿಶ್ವವಿದ್ಯಾಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಅವರ ಸಾಹಿತ್ಯ ಸೇವೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ.
- ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ, ಬಸವಕಲ್ಯಾಣ