ಶಂಭೂರು: ಎನ್ನೆಸ್ಸೆಸ್ ಶಿಬಿರ ಸಮಾರೋಪ

Contributed by: mambadynews@gmail.com|Vijaya Karnataka•
shambhoor conclusion of student camp ceremony
ವಿಕ ಸುದ್ದಿಲೋಕ ಬಂಟ್ವಾಳ

ಶಂಭೂರಿನ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿದೇಶಕ್ಕಾಗಿ ಯುವಜನತೆ ಎಂಬ ಧ್ಯೇಯದೊಂದಿಗೆ ಏಳು ದಿನಗಳ ಕಾಲ ನಡೆದ ಬಿ.ಮೂಡ ಸ. ಪ. ಪೂ. ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ನೆರವೇರಿತು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರ್ಶರೀನಿವಾಸ ಪೂಜಾರಿ ಮೆಲ್ಕಾರ್ ಸಮಾರೋಪ ಭಾಷಣ ಮಾಡಿ, ಈ ಶಿಬಿರದ ಕಲಿಕಾಂಶಗಳು ಶಿಬಿರಾರ್ಥಿಗಳ ನಿತ್ಯಜೀವನದಲ್ಲಿಪ್ರತಿಫಲನವಾಗಬೇಕು. ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿಭಾಗವಹಿಸಿ ತಮ್ಮ ರಜಾ ಕಾಲವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ವಿನೋದ್ ಎ, ಸಜಿಪಮೂಡ ಪಿ.ಯು. ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ನಾಯ್ ್ಕ ಕೆ., ಶಂಭೂರು ಶಾಲಾ ಎಸ್ ಡಿಎಂಸಿ ಉಪಾಧ್ಯಕ್ಷೆ ವಿಮಲಾ, ಸದಸ್ಯದಯಾನಂದ ಅಡೆಪಿಲ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆನಂದ ಸಾಲಿಯಾನ್ , ಸ್ಥಳೀಯ ವ್ಯಾಯಾಮ ಶಾಲೆಯ ಅಧ್ಯಕ್ಷ ಆನಂದ ಎ. ಶಂಭೂರು, ಮುಖ್ಯಶಿಕ್ಷಕ ಜಯರಾಮ ಡಿ. ಪಡ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಹ ಶಿಬಿರಾಧಿಕಾರಿ ಇರ್ಷಾದ್ ಸ್ವಾಗತಿಸಿದರು. ಶಿಬಿರಾಧಿಕಾರಿ ದಾಮೋದರ ಇ. ನಿರೂಪಿಸಿದರು. ಉಪನ್ಯಾಸಕ ವಿನೋದ್ ಎ. ವಂದಿಸಿದರು. ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಚಿತ್ರ: 17ಬಿಎಚ್ ಬಿಮೂಡ

ಬಿಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಸಮಾರೋಪದಲ್ಲಿಶ್ರೀನಿವಾಸ ಪೂಜಾರಿ ಮಾತನಾಡಿದರು.

ಓದಲೇ ಬೇಕಾದ ಸುದ್ದಿ