ದುರಸ್ತಿಯೂ ಇಲ್ಲ, ಹೊಸ ನಿರ್ಮಾಣವೂ ಇಲ್ಲ

Contributed by: srameshshashitnp@gmail.com|Vijaya Karnataka•
students are struggling due to lack of hostel maintenance
ದುರಸ್ತಿಯೂ ಇಲ್ಲ, ಹೊಸ ನಿರ್ಮಾಣವೂ ಇಲ್ಲ

- ತಿ.ನರಸೀಪುರ ವಿದ್ಯಾರ್ಥಿಗಳ ಅಳಲು| ಹಾಸ್ಟೆಲ್ ಆವರಣದಲ್ಲಿಯೇ ತ್ಯಾಜ್ಯ, ಯುಜಿಡಿ ನೀರು| ಶಿಥಿಲಾವಸ್ಥೆಯ ಕಟ್ಟಡ, ಶೌಚಾಲಯ ಅವ್ಯವಸ್ಥೆ
ರಮೇಶ್ ತಿ. ನರಸೀಪುರ

ಮೇಲ್ ...........

ಹಳೆ ಕಟ್ಟಡದ ದುರಸ್ತಿಯನ್ನೂ ಮಾಡಿಲ್ಲ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯೂ ಮುಂದುವರೆಯುತ್ತಿಲ್ಲ. ಪರಿಣಾಮ ಮೂಲ ಸೌಕರ್ಯದ ಕೊರತೆಯಿಂದ ಹಳೆಯ ಕಟ್ಟಡದಲ್ಲಿವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಳೆಯ ಕಟ್ಟಡದಲ್ಲಿಇರಲೂ ಸಾಧ್ಯವಾಗದೆ, ಕಾಮಗಾರಿ ಸ್ಥಗಿತಗೊಂಡಿರುವ ಹೊಸ ಕಟ್ಟಡಕ್ಕೂ ಹೋಗಲು ಆಗದೆ ಅತಂತ್ರ ಸ್ಥಿತಿ ಮಕ್ಕಳದ್ದಾಗಿದೆ.

ಇದು ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್ .ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಪಾಡು. ಹಾಸ್ಟೆಲ್ ಆವರಣ ಪ್ರವೇಶಿದರೆ ಸಾಕು ಎಲ್ಲೆಂದರಲ್ಲಿಕಸದ ರಾಶಿ, ಒಳಚರಂಡಿ ನೀರಿನಿಂದ ದುರ್ನಾತ ರಾಚುತ್ತದೆ. ಈ ಎಲ್ಲಅವ್ಯವಸ್ಥೆ ನಡುವೆ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿವ್ಯಾಸಂಗ ಮಾಡುತ್ತಿದ್ದಾರೆ. ವಿಕ ನಡೆಸಿದ ರಿಯಾಲಿಟಿ ಚೆಕ್ ನಲ್ಲಿಈ ಅಂಶಗಳು ಬೆಳಕಿಗೆ ಬಂದಿವೆ.

ಹಾಸ್ಟೆಲ್ ಒಳಭಾಗದಲ್ಲಿತ್ಯಾಜ್ಯ ನೀರು ಸಮರ್ಪಕವಾಗಿ ಹರಿದುಹೋಗದೆ ನಿಂತಲ್ಲೇ ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿವೆ. ಕೈ ತೊಳೆಯುವ ಸ್ಥಳದಲ್ಲಿತ್ಯಾಜ್ಯ ನೀರು ಹರಿಯುವ ಪೈಪ್ ಕಿತ್ತು ಹೋಗಿದೆ. ತಕ್ಷಣ ದುರಸ್ತಿ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಕಿಟಕಿಗಳ ಗಾಜುಗಳು ಒಡೆದಿದ್ದು, ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಅಳವಡಿಸಿರುವ ಪರದೆಗಳು ಹರಿದು ಹೋಗಿವೆ. ವಿದ್ಯಾರ್ಥಿಗಳು ಮಲಗುವ ಕೊಠಡಿಗಳ ಗೋಡೆಗಳ ಮೇಲೆ ಅನವಶ್ಯಕವಾಗಿ ಏನೇನೋ ಬರೆಯಲಾಗಿದ್ದು, ಹಾಸ್ಟೆಲ್ ನ ಕೆಲವು ಭಾಗಗಳು ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಕಟ್ಟಡಕ್ಕೆ ಬಣ್ಣ ಬಳಿಯುವ ಅಗತ್ಯವೂ ಇದೆ.

ಶೌಚಾಲಯಗಳು ಅವ್ಯವಸ್ಥೆಯಿಂದ ಕೂಡಿದ್ದು, ಟೈಲ್ಸ್ ಗಳು ಕಿತ್ತುಬಂದಿವೆ. ಆವರಣದಲ್ಲಿತ್ಯಾಜ್ಯದ ರಾಶಿ ಬಿದ್ದಿದೆ. ಹಾಸ್ಟೆಲ್ ಗೇಟ್ ಮುಂಭಾಗದ ಚರಂಡಿಯ ಸ್ಪ್ಯಾಬ್ ಒಡೆದಿದ್ದು, ಸುತ್ತಲಿನ ಮಣ್ಣು ಕುಸಿಯುತ್ತಿದೆ. ಅಪಾಯ ತಪ್ಪಿಸಲು ಬ್ಯಾರಿಕೇಡ್ ಅಳವಡಿಸಲಾಗಿದ್ದರೂ, ಶಾಶ್ವತ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ.

ಹಾಸ್ಟೆಲ್ ನಲ್ಲಿ50 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಸಾಮರ್ಥ್ಯವಿದ್ದರೂ, ಪ್ರಸ್ತುತ 37 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಗಣಕಯಂತ್ರ ಕೊಠಡಿ ಹಾಗೂ ಗ್ರಂಥಾಲಯ ಮಾತ್ರ ತುಸು ಅಚ್ಚುಕಟ್ಟಾಗಿವೆ.

ಕಾಮಗಾರಿ ಸ್ಥಗಿತ: ಹಾಸ್ಟೆಲ್ ನ ಕಟ್ಟಡ ಹಳೆಯದಾಗಿದ್ದು, ಹೊಸದಾಗಿ ಕಟ್ಟಡ ನಿರ್ಮಾಣ ಆರಂಭಗೊಂಡಿದೆ. ಆದರೆ, ಕಳೆದ ಏಳು ತಿಂಗಳಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್ ಸೌಲಭ್ಯವು ಸದ್ಯಕ್ಕೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.

ಕೋಟ್

ಹಾಸ್ಟೆಲ್ ಗಳ ದುರಸ್ತಿಗೆ ಅಂದಾಜು ಪಟ್ಟಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ್ಥಗಿತಗೊಂಡಿರುವ ನೂತನ ಹಾಸ್ಟೆಲ್ ಕಟ್ಟಡದ ಕಾಮಗಾರಿಯನ್ನು ಅನುದಾನ ಬಂದ ಕೂಡಲೇ ಪುನರಾರಂಭಿಸಲಾಗುವುದು.

- ವಿನೂತನ್ , ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ

ವ್ಯವಸ್ಥೆಗಳು ಸರಿ ಇಲ್ಲದ ಕಾರಣ ಪೋಷಕರು ಹಾಸ್ಟೆಲ್ ಗಳಿಗೆ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಗ್ರಾಮೀಣ ಭಾಗದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಸಮರ್ಪಕವಾಗಿ ದೊರೆಯದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

- ಸೂಸಲೆ ಶಶಿಕಾಂತ್ , ಸ್ಥಳೀಯ ನಿವಾಸಿ.

ಓದಲೇ ಬೇಕಾದ ಸುದ್ದಿ