ತಾಲೂಕಿನ ಸುಕ್ಷೇತ್ರ ಹಾರಕೂಡ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ ಪರಿಸರದಲ್ಲಿಲಿಂಗೈಕ್ಯ ಗುರುಲಿಂಗ ಶಿವಾಚಾರ್ಯರ 57ನೇ ಪುಣ್ಯಸ್ಮರಣೆ,40ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಗ್ರಂಥ ಬಿಡುಗಡೆ ಹಾಗೂ ‘ಶ್ರೀ ಚೆನ್ನ ರೇಣುಕ ಬಸವ’ ಪ್ರಶಸ್ತಿ ಪ್ರದಾನ ಸಮಾರಂಭ ಅ.19ರಂದು ಹಮ್ಮಿಕೊಳ್ಳಲಾಗಿದೆ.
ಈ ವರ್ಷ ರಾಷ್ಟ್ರಮಟ್ಟದ ‘ಶ್ರೀ ಚೆನ್ನ ರೇಣುಕ ಬಸವ’ ಪ್ರಶಸ್ತಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಪದ್ಮಶ್ರೀ ಪುರಸ್ಕೃತ ಡಾ.ಪಂ.ಎಂ.ವೆಂಕಟೇಶಕುಮಾರ ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ಲಕ್ಷ ರೂ. ನಗದು ಮತ್ತು ಎರಡು ತೊಲ ಚಿನ್ನದ ಪದಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಅ.19ರಂದು ಬೆಳಗ್ಗೆ 11ಕ್ಕೆ ಸಿಯುಕೆ ಪ್ರಾಧ್ಯಾಪಕ ಡಾ.ವಿಕ್ರಮ್ ವಿಸಾಜಿ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು. ಮಲ್ಲಿನಾಥ ಹಿರೇಮಠ ಸಂಪಾದಿಸಿದ ಸದ್ಗುರು ಹಾರಕೂಡ ಚನ್ನಬಸವ ಶಿವಾಯೋಗಿಗಳ ಕುರಿತು ‘ಭಕ್ತಿ ಗೀತೆಗಳ’ ಗ್ರಂಥ ಹಾಗೂ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಬರೆದ ‘ಬೇಂದ್ರೆ ಕಾವ್ಯ: ಮತ್ರ್ಯದಲ್ಲಿಅರಳಿದ ದೇವಲೋಕ’ ಗ್ರಂಥವನ್ನು ಉದ್ಯಮಿ ಸುಭಾಷ ಮುರುಡ ಬೆಳಮಗಿ ಬಿಡುಗಡೆ ಮಾಡುವರು.
-----
**ಬಾಕ್ಸ್ **
ಚಿತ್ರ:ವೆಂಕಟೇಶಕುಮಾರ
ಡಾ. ಎಂ. ವೆಂಕಟೇಶ್ ಗೆ ಶ್ರೀಚೆನ್ನರೇಣುಕ ಬಸವ ಪ್ರಶಸ್ತಿ
ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಪಂಡಿತ ವೆಂಕಟೇಶಕುಮಾರ ಅವರು ಗದುಗಿನ ಡಾ.ಪುಟ್ಟರಾಜ ಗವಾಯಿಗಳ ಸಾನ್ನಿಧ್ಯದಲ್ಲಿಸಂಗೀತ ಅಭ್ಯಾಸ ಮಾಡಿದ್ದು, ದೇಶ-ವಿದೇಶಗಳ ಖ್ಯಾತ ಸಂಗೀತ ಮಹೋತ್ಸವ, ಸಮ್ಮೇಳನಗಳಲ್ಲಿಸಂಗೀತ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ಸಂಗೀತ ಸೇವೆ ಪರಿಗಣಿಸಿ ಇವರನ್ನು ನಾನಾ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಹಂಪಿ ಕನ್ನಡ ವಿವಿ ನಾಡೋಜ ಪ್ರಶಸ್ತಿ, ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ, ಧಾರವಾಡ ಕರ್ನಾಟಕ ವಿವಿ ಕಾಳಿದಾಸ ಸಮ್ಮಾನ ಪ್ರಶಸ್ತಿ, ಗೌರವ ಡಾಕ್ಟರೇಟ್ , ವತ್ಸಲಾ ಭೀಮಸೇನ ಜೋಶಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಪಡೆದಿದ್ದಾರೆ ಎಂದು ವಿವರಿಸಿದರು.