ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢರಾಗುವ ಮೂಲಕ ಕುಟುಂಬದ ಅಭಿವೃದ್ಧಿಯೊಂದಿಗೆ ಸಮಾಜದ ಪ್ರಗತಿಗೂ ಕೊಡುಗೆ ನೀಡಬೇಕು. ಮಹಿಳೆಯರ ಕೌಶಲ ಮತ್ತು ಸೃಜನಶೀಲತೆಗೆ ವೇದಿಕೆ ದೊರೆತರೆ ಅವರು ಯಶಸ್ವಿ ಉದ್ಯಮಿಗಳಾಗಿ ಬೆಳೆಯಲು ಸಾಧ್ಯ ಎಂದು ಉದ್ಯೋಗಿನಿ ಎಕ್ಸ್ ಪೋ ಆಯೋಜಕಿ ಭಾರತಿ ಪಾರಶೆಟ್ಟಿ ಹೇಳಿದರು.ನಗರದಲ್ಲಿಅ.16ರಿಂದ 18ರವರೆಗೆ ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ - ‘ಉದ್ಯೋಗಿನಿ ಎಕ್ಸ್ ಪೋ’ದಲ್ಲಿಅವರು ಮಾತನಾಡಿದರು. ‘‘ಮಹಿಳೆಯರು ಶಿಕ್ಷಣ, ಉದ್ಯೋಗ ಹಾಗೂ ಉದ್ಯಮ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡುತ್ತಿದ್ದಾರೆ. ಉದ್ಯೋಗಕ್ಕಾಗಿ ಕಾಯುವ ಬದಲು ಸ್ವಂತ ಉದ್ಯಮ ಆರಂಭಿಸಿ, ತಮ್ಮ ಕೌಶಲವನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಮನೆಯಲ್ಲಿಯೇ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದರ ಜತೆಗೆ ಇತರ ಮಹಿಳೆಯರಿಗೂ ಉದ್ಯೋಗಾವಕಾಶ ಕಲ್ಪಿಸಬಹುದು’’, ಎಂದರು.
‘‘ಮಹಿಳೆಯರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದರೂ, ಅವುಗಳನ್ನು ಗ್ರಾಹಕರಿಗೆ ಪರಿಚಯಿಸಲು ಸೂಕ್ತ ಮಾರುಕಟ್ಟೆ ಮತ್ತು ವೇದಿಕೆಯ ಕೊರತೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ
ಉದ್ಯೋಗಿನಿ ಎಕ್ಸ್ ಪೋದಂಥ ವೇದಿಕೆಗಳು ಅವಕಾಶ ಒದಗಿಸಬಲ್ಲವು’’, ಎಂದು ಹೇಳಿದರು.
ಮೂರು ದಿನ ನಡೆದ ಎಕ್ಸ್ ಪೋಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮಹಿಳಾ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಮೂಲಕ ಗ್ರಾಹಕರನ್ನು ತಲುಪಲು ಅನುಕೂಲವಾಯಿತು. ಕಾರ್ಯಕ್ರಮದಲ್ಲಿದಿವ್ಯಾ ಮೆಹತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.