ನಾನು, ಎಲ್ಲವೂ ನನ್ನಿಂದಲೇ ಎಂಬ ಅಹಂಭಾವ ತೊರೆದು ಮನುಷ್ಯನು ಒಳ್ಳೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ತನ್ನ ಬದುಕು ಪಾವನಗೊಳಿಸಿಕೊಳ್ಳಬೇಕು. ಜೀವನದಲ್ಲಿತಾಯಿ ಮತ್ತು ಗುರುವಿನ ಮಾರ್ಗದರ್ಶನ ಅತ್ಯಂತ ಶ್ರೇಷ್ಠವಾದದ್ದು ಎಂದು ಜಕನಾಯ್ಕನಕೊಪ್ಪದ ಚನ್ನವೃಷಬೇಂದ್ರಮಠದ ಪೀಠಾಧ್ಯಕ್ಷೆ ಮಾತೋಶ್ರೀ ಶಿವಯೋಗಿನಿ ದೇವಿ ನುಡಿದರು.ಗ್ರಾಮದಲ್ಲಿನವರಾತ್ರಿ ಹಾಗೂ ಮಹಾನವಮಿ ನಿಮಿತ್ತ ಜರುಗುತ್ತಿರುವ ಜಗನ್ಮಾತೆ ಶ್ರೀ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿಭಾಗವಹಿಸಿ ಅವರು ಮಾತನಾಡುತ್ತಿದ್ದರು. ‘‘ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆಯೇ ದೇವಿಯ ಪುರಾಣದ ಮೂಲ ಸಾರಾಂಶವಾಗಿದೆ. ದೇವರ ಧ್ಯಾನ ಮತ್ತು ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ,’’ ಎಂದು ಹೇಳಿದರು.
ಜಗದೀಶ ಪಾಟೀಲ, ಅಶೋಕ ಅಲ್ಲಪ್ಪನವರ, ಸಿದ್ದು ಬೋಳಣ್ಣವರ, ಶಿದರಾಯಗೌಡ ಪಾಟೀಲ, ಯಲ್ಲಪ್ಪ ಬಳಗಣ್ಣವರ, ಗುರುಪುತ್ರ ಮಲ್ಲನಾಯ್ಕರ, ಸಿದ್ದು ವಾರಿ, ಶಿವಪ್ಪ ಭಾಂವಿ, ಚಿದಾನಂದ ವಾರಿ, ಶಿವಬಸಪ್ಪ ಅಲ್ಲಪ್ಪನವರ, ಶಿವಾನಂದ ಹಿರೇಮಠ, ಚಿಕ್ಕಯ್ಯ ಹಿರೇಮಠ, ಶಿದ್ರಾಮ ಬಡಿಗೇರ, ಚಿದಾನಂದ ಬಡಿಗೇರ, ಬಸಪ್ಪ ಬಡಿಗೇರ, ತವನಪ್ಪ ಗೋವಿ, ಶಂಕರ ಮಜತಿ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಇದ್ದರು.
-17ಹಣ್ಣಿಕೇರಿ1
ಹಣ್ಣಿಕೇರಿಯಲ್ಲಿನವರಾತ್ರಿ ಪ್ರಯುಕ್ತ ಜರುಗುತ್ತಿರುವ ಜಗನ್ಮಾತೆ ಶ್ರೀ ದೇವಿಯ ಪುರಾಣ ಪ್ರವಚ ಕಾರ್ಯಕ್ರಮದಲ್ಲಿಮಾತೋಶ್ರೀ ಶಿವಯೋಗಿನಿ ದೇವಿ ಮಾತನಾಡಿದರು.