ಹರಿಹರ: ತಂಬಾಕು ಮನುಷ್ಯನ ದೇಹದಲ್ಲಿಪ್ರವೇಶಿಸಿದಂತೆಲ್ಲಾತನ್ನ ಅಟ್ಟಹಾಸ ಮೆರೆಯುತ್ತ, ಸೇವನೆಯ ಚಟಕ್ಕೆ ದಾಸರಾದವರನ್ನು ಚಟ್ಟಕ್ಕೆರಿಸುತ್ತದೆ ಎಂದು ಸಮಾಜ ಸೇವಕಿ ಶೈಲಾ ಶಾಮನೂರು ಹೇಳಿದರು.ನಗರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಕಾಲೇಜಿನಲ್ಲಿಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾಲೇಜು ಆಶ್ರಯದಲ್ಲಿರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ನಶಾಮುಕ್ತ ಭಾರತಕ್ಕಾಗಿ ಜಾಗೃತಿ ಕಾರ್ಯಕ್ರಮದಲ್ಲಿಮಾತನಾಡಿದರು.
ಹದಿಹರೆಯದ ಯುವ ಜನತೆ ಮದ್ಯ, ದುಶ್ಚಟದ ವ್ಯಸನಕ್ಕೆ ದಾಸರಾಗಿ ಮಹತ್ವದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಯುವ ಜನತೆ ತಂಬಾಕು ವ್ಯಸನದಿಂದಾಗುವ ದುಷ್ಟರಿಣಾಮ ಅರ್ಥೈಸಿಕೊಳ್ಳಬೇಕು ಎಂದರು.
ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ , ತಾಲೂಕು ಆರೋಗ್ಯ ಕೇಂದ್ರದ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ‘ತಂಬಾಕು ದ್ವೇಷಿಸಿ, ಮಾದಕ ವಸ್ತುಗಳಿಂದ ದೂರ ಉಳಿಯಿರಿ, ಉಳಿದವರಿಗೂ ಈ ಕುರಿತು ಜಾಗೃತಿ ಮೂಡಿಸಿ’ ಎಂದು ಪ್ರತಿಜ್ಞಾವಿಧಿ ಭೋಧಿಸಲಾಯಿತು.
ಈ ವೇಳೆ ಕಾಲೇಜು ಪ್ರಾಂಶುಪಾಲ ಡಾ.ಭರಮಪ್ಪ ಟಿ., ಐಕ್ಯೂಎಸಿ ಸಂಯೋಜಕ ಸಿದ್ದಯ್ಯ ಎಸ್ .ವಿ., ಸಾಂಸ್ಕೃತಿಕ ವೇದಿಕೆ ಸಂಯೋಜಕ ಡಾ.ಸಂತೋಷ್ ಎಸ್ .ಎಂ., ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
----
18 ಹೆಚ್ .ಆರ್ .ಆರ್ 1
ಹರಿಹರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಕಾಲೇಜಿನಲ್ಲಿಶನಿವಾರ ಏರ್ಪಡಿಸಿದ್ದ ನಶಾಮುಕ್ತ ಭಾರತಕ್ಕಾಗಿ ಜಾಗೃತಿ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.