ಭೌತಿಕ ಬದುಕಿಗೆ ಅಧ್ಯಾತ್ಮದ ಜ್ಞಾನ ಅಗತ್ಯ

Contributed by: ravideshpande77@gmail.com|Vijaya Karnataka•
the importance of spiritual knowledge in physical life
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ | ರಂಭಾಪುರಿ ಜಗದ್ಗುರುಗಳ ಅಭಿಮತ

ಭೌತಿಕ ಬದುಕಿಗೆ ಅಧ್ಯಾತ್ಮದ ಜ್ಞಾನ ಅಗತ್ಯ
ವಿಕ ಸುದ್ದಿಲೋಕ ಬಾಗಲಕೋಟೆ

‘‘ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಧರ್ಮದಿಂದ ವಿಮುಖರಾದರೆ ಶಾಂತಿ ನೆಮ್ಮದಿ ದೊರಕದು. ಭೌತಿಕ ಬದುಕಿನಲ್ಲಿಆಧ್ಯಾತ್ಮಿಕ ಅರಿವು ಅನುಸಂಧಾನ ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ,’’ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಜಮಖಂಡಿಯಲ್ಲಿಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 8ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ‘‘ಸಮಾಜದ ಓರೆಕೋರೆಗಳನ್ನು ತಿದ್ದಿತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯವಾಗಿದೆ. ಹೊಸತನದ ಜತೆಗೆ ಹಿರಿತನದ ಕಳೆ ಮೇಳೈಸಿದಾಗ ಬದುಕಿಗೆ ಬೆಲೆ ಮತ್ತು ಬಲ ಬರುತ್ತದೆ. ಕೆಡಕುಗಳನ್ನು ಮೆಟ್ಟಿನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ನಮ್ಮ ಗುರಿಯಾಗಬೇಕು,’’ ಎಂದರು.

‘‘ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲುಸುಂದರ ಮೂರ್ತಿ ಆಗುತ್ತದೆ. ಕಷÜ್ಟಗಳಿಂದ ಜೀವನದ ಮೌಲ್ಯಗಳು ಸಂವರ್ಧಿಸುತ್ತವೆ. ಬಾಲ್ಯದಲ್ಲಿಜ್ಞಾನ, ಯೌವನದಲ್ಲಿಸಂಪತ್ತು ಮತ್ತು ವೃದ್ಧಾಪ್ಯದಲ್ಲಿಪುಣ್ಯ ಸಂಪಾದಿಸಿಕೊಂಡು ಬಾಳಬೇಕು,’’ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿಬೋಧಿಸಿದ್ದಾರೆ. ಬೆಳಗುವ ದೀಪಕ್ಕೆ ಎಣ್ಣೆ ಮುಖ್ಯ ಇದ್ದಂತೆ ಸರ್ವ ಚಟುವಟಿಕೆಗೆ ಆತ್ಮವಿಶ್ವಾಸವೇ ಮೂಲ,’’ ಎಂದರು.

ಸಂಸದ ಜಗದೀಶ ಶೆಟ್ಟರ್ , ‘‘ಭಾರತೀಯ ಆಧ್ಯಾತ್ಮಿಕ ಸಂಪತ್ತು ಬಹಳ ದೊಡ್ಡದು. ಪೂರ್ವದ ಆಚಾರ್ಯರು ಋುಷಿಮುನಿಗಳು ಸತ್ಪುರುಷÜ ಸಜ್ಜನರು ಉತ್ಕೃಷÜ್ಟ ಸಂಸ್ಕೃತಿಯ ಪುನರುತ್ಥಾನಕ್ಕೆ ಕಾರಣರಾಗಿದ್ದಾರೆ. ಜೀವನದ ಶ್ರೇಷÜ್ಠ ಮತ್ತು ಉನ್ನತಿಗೆ ಆದರ್ಶ ಚಿಂತನೆಗಳು ಮತ್ತು ಅವುಗಳ ಆಚರಣೆ ಮುಖ್ಯವಾಗಿದೆ. ವೀರಶೈವ ಧರ್ಮದಲ್ಲಿಅರುವಿನ ಅಧ್ಯಾತ್ಮ ಚಿಂತನೆ ನಮ್ಮೆಲ್ಲರನ್ನು ಸನ್ಮಾರ್ಗಕ್ಕೆ ಕರೆತಂದಿರುವುದನ್ನು ಕಾಣುತ್ತೇವೆ,’’ ಎಂದು ಹೇಳಿದರು.

ಜಮಖಂಡಿ ನಗರದ ಯುವಧುರೀಣ ಸಿದ್ದಪ್ಪ ಕವಟಗಿ ಅವರಿಗೆ ರಂಭಾಪುರಿ ಯುವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೇತೃತ್ವ ವಹಿಸಿದ್ದ ಸುಳ್ಳ ಪಂಚಗ್ರಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು, ಕೊಣ್ಣೂರು ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಬಂಡಿವಾಡದ ಸಾಹಿತ್ಯ ಸಂಶೋಧಕ ಡಾ.ಎ.ಸಿ.ವಾಲಿ ಉಪನ್ಯಾಸ ನೀಡಿದರು.

ವಿಧಾನಪರಿಷÜತ್ ಸದಸ್ಯ ಪಿ.ಎಚ್ .ಪೂಜಾರ, ನವೀನ, ಶಾಸಕ ಜಗದೀಶ ಗುಡಗುಂಟಿ, ಪ್ರಕಾಶ ಮೀಶಿ, ದಿಲೀಪ ಜೋಗದಂಡೆ, ವಿವೇಕ ಪತಂಗೆ, ವಿನಾಶ ರಜಪೂತ, ನಿಲೇಶ ಹಜಾರೆ, ತೌಫೀಕ ಪಾರ್ಥನಳ್ಳಿ, ಗೀತಾ ಸೂರ್ಯವಂಶಿ, ಶಾಂತಾ ಆನಂದ, ಡಾ.ನಾಗಭೂಷಣ ಶಿವಾಚಾರ್ಯರು ಉಪಸ್ಥಿತರಿದ್ದರು.

----------

ಬಳ್ಳಾರಿ ಜಿಲ್ಲಾವೀರಶೈವ ಮುಖಂಡರ ಮನವಿ

2027ನೇ ಸಾಲಿನ ದಸರಾ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿಜರುಗಿಸಲು ವಿನಂತಿಸಿ ಬಳ್ಳಾರಿ ಜಿಲ್ಲಾವೀರಶೈವ ಮುಖಂಡರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಂಭಾಪುರಿ ಜಗದ್ಗುರುಗಳು, ‘‘ಹಲವಾರು ನಗರಗಳಲ್ಲಿ2027ನೇ ಸಾಲಿನ ಶರನ್ನವರಾತ್ರಿ ದಸರಾ ಮಹೋತ್ಸವ ಆಚರಿಸಲು ಬೇಡಿಕೆಗಳು ಬಂದಿವೆ. ಜಮಖಂಡಿ ಸಮಾರಂಭದ ಕೊನೆಗೆ ಮುಂದಿನ ವಷÜರ್ ದಸರಾ ಆಚರಿಸುವ ಸ್ಥಳದ ಅಂತಿಮ ಆಯ್ಕೆ ಪ್ರಕಟಿಸುವುದಾಗಿ,’’ ತಿಳಿಸಿದರು.

ಜಗದೀಶ-ಬಿಜಿಕೆ-18

ಜಮಖಂಡಿಯಲ್ಲಿಹಮ್ಮಿಕೊಂಡಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿಸಿದ್ದಪ್ಪ ಕವಟಗಿ ಅವರಿಗೆ ರಂಭಾಪುರಿ ಯುವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಓದಲೇ ಬೇಕಾದ ಸುದ್ದಿ