ಕುಂದಾಪುರ: ಎಸ್ ಐಆರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸಿ ಬಂಧಿಸಿ ಶಿಕ್ಷಿಸಬೇಕು ಎಂದು ಹೋರಾಟ ನಡೆಸುತ್ತಿರುವವರನ್ನು ಬಂಧಿಸಿರುವ ಕ್ರಮ ಖಂಡಿಸಿ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ ಐ) ನೇತೃತ್ವದಲ್ಲಿಇಲ್ಲಿನ ಶಾಸ್ತ್ರೀವೃತ್ತದಲ್ಲಿಪ್ರತಿಭಟನೆ ನಡೆಯಿತು.
ಡಿವೈಎಫ್ ಐ ಮುಖಂಡ ರವಿ ವಿ.ಎಂ. ಮಾತನಾಡಿ, ಕೇಂದ್ರ ಸರಕಾರ ಅಧಿಕಾರದ ಹಿತಾಸಕ್ತಿಗಾಗಿ ಎಸ್ ಐಆರ್ ಪ್ರಕ್ರಿಯೆಯ ಮೂಲಕ ಸಾಂವಿಧಾನಿಕ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಸ್ ಐಆರ್ ರದ್ದುಗೊಳಿಸದಿದ್ದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅಪಾಯ ಎದುರಾಗಲಿದೆ ಎಂದರು.ಡಿವೈಎಫ್ ಐ ಅಧ್ಯಕ್ಷ ವಿಶ್ವನಾಥ್ , ರಾಜ ಬಿ.ಟಿ.ಆರ್ . ಉದಯ ಟೈಲರ್ , ಗಣೇಶ್ ಕಲ್ಲಾಗರ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಮತ್ತು ಬಲ್ಕೀಸ್ , ದಲಿತ ಹಕ್ಕುಗಳ ಸಮಿತಿಯ ನಾಗರತ್ನ ಆರ್ ., ಪ್ರಕಾಶ್ ಕೋಣಿ ಮೊದಲಾದವರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು. ಡಿವೈಎಫ್ ಐ ಕಾರ್ಯದರ್ಶಿ ಗಣೇಶ್ ಬಿಟಿಆರ್ ಸ್ವಾಗತಿಸಿದರು. ಡಿವೈಎಫ್ ಐ ಉಪಾಧ್ಯಕ್ಷ ಮಂಜುನಾಥ್ ಶೋಗನ್ ವಂದಿಸಿದರು.