ಕ್ರೀಡೆಯಿಂದ ಮಾನಸಿಕ, ದೈಹಿಕ ಸದೃಢತೆ

Contributed by: rathodjayakumar92@gmail.com|Vijaya Karnataka•
gaining mental and physical fitness through sports
ಕ್ರೀಡೆಯಿಂದ ಮಾನಸಿಕ, ದೈಹಿಕ ಸದೃಢತೆ

ಜಿಲ್ಲಾಗೃಹರಕ್ಷಕ ದಳದ ಸಮಾದೇಷ್ಟ ಬಸವರಾಜ್ ಅಗಸರ್ ಅಭಿಮತ |
ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)

‘‘ಕ್ರೀಡೆಯು ಮನುಷ್ಯನಲ್ಲಿಮಾನಸಿಕ ಹಾಗೂ ದೈಹಿಕ ಸದೃಢತೆ ತರುತ್ತದೆ. ಕ್ರೀಡಾಪಟುಗಳು ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವದಿಂದ ಭಾಗವಹಿಸಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ,’’ ಎಂದು ಜಿಲ್ಲಾಗೃಹರಕ್ಷಕ ದಳದ ಸಮಾದೇಷ್ಟ ಬಸವರಾಜ್ ಅಗಸರ್ ಹೇಳಿದರು.

ನಗರದ ಡಾ.ಪುನೀತ್ ರಾಜಕುಮಾರ್ ಮೈದಾನದಲ್ಲಿವಿಜಯನಗರ ಜಿಲ್ಲಾಗೃಹರಕ್ಷಕ ದಳದಿಂದ ಶನಿವಾರ ಮುಕ್ತಾಯಗೊಂಡ ಎರಡು ದಿನಗಳ ವಾರ್ಷಿಕ ವೃತ್ತಿಪರ ಕ್ರೀಡಾಕೂಟದಲ್ಲಿಮಾತನಾಡಿದರು.

‘‘ಕರ್ತವ್ಯದ ಒತ್ತಡದಲ್ಲಿರುವ ಗೃಹರಕ್ಷಕರಿಗೆ ಕ್ರೀಡೆಗಳು ಮನೋರಂಜನೆ ನೀಡುವುದರ ಜತೆಗೆ ದೈಹಿಕ ಸಾಮರ್ಥ್ಯ, ಶಿಸ್ತು, ಸಮಯಪ್ರಜ್ಞೆ ಮತ್ತು ತಂಡವಾಗಿ ಕೆಲಸ ಮಾಡುವ ಸಹಕಾರ ಮನೋಭಾವ ಬೆಳೆಸುತ್ತವೆ,’’ ಎಂದರು.

ಕ್ರೀಡಾಕೂಟದಲ್ಲಿಜಿಲ್ಲೆಯ ನಾನಾ ಘಟಕಗಳಿಂದ ಆಗಮಿಸಿದ್ದ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಕಬಡ್ಡಿ, ವಾಲಿಬಾಲ್ , ಓಟದ ಸ್ಪರ್ಧೆ, ರೈಫಲ್ ಸ್ಕಾ್ವಡ್ ಡ್ರಿಲ್ , ಹಗ್ಗ-ಜಗ್ಗಾಟ, ಗುಂಡು ಎಸೆತ, ಉದ್ದಜಿಗಿತ, ಎತ್ತರಜಿಗಿತ, ಪ್ರಥಮ ಚಿಕಿತ್ಸೆಯ ಅಣಕು ಪ್ರದರ್ಶನ ಹಾಗೂ ಮ್ಯೂಸಿಕಲ್ ಚೇರ್ ಸೇರಿ ನಾನಾ ಕ್ರೀಡೆಗಳು ನಡೆದವು.

ಜಿಲ್ಲಾಬೋಧಕ ಪ್ರಶಾಂತ್ ಪಾಟೀಲ್ , ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಂತೋಷ್ , ಹೊಸಪೇಟೆ ಘಟಕಾಧಿಕಾರಿ ಎಸ್ .ಎಂ.ಗಿರೀಶ್ , ಪ್ಲಟೂನ್ ಕಮಾಂಡರ್ ಎಲ್ .ವಾಲ್ಯಾನಾಯ್ಕ, ಕಮಲಾಪುರ ಘಟಕಾಧಿಕಾರಿ ವಿ.ಪರಶುರಾಮ್ , ಹಗರಿಬೊಮ್ಮನಹಳ್ಳಿ ಘಟಕಾಧಿಕಾರಿ ಅನ್ವರ್ ಬಾಷಾ, ಹೂವಿನಹಡಗಲಿ ಘಟಕಾಧಿಕಾರಿ ಸುಬಾನ್ ಸಾಬ್ , ಕೂಡ್ಲಿಗಿ ಘಟಕಾಧಿಕಾರಿ ಕರಿಯಪ್ಪ ಸೇರಿ ಇತರರಿದ್ದರು.

ಫೋಟೋ ಕ್ಯಾಪ್ಷನ್ : 10ಜಯಪ್ಪ4

ಹೊಸಪೇಟೆಯಲ್ಲಿಜಿಲ್ಲಾಗೃಹರಕ್ಷಕ ದಳದಿಂದ ಎರಡು ದಿನಗಳ ಕಾಲ ನಡೆದ ವಾರ್ಷಿಕ ವೃತ್ತಿಪರ ಕ್ರೀಡಾಕೂಟದಲ್ಲಿಪಾಲ್ಗೊಂಡಿದ್ದ ಕ್ರೀಡಾಪಟುಗಳು

ಓದಲೇ ಬೇಕಾದ ಸುದ್ದಿ