ಮನೆ,ಮನಗಳಲ್ಲಿಕಳೆಗಟ್ಟಿ ದಸರಾ ಸಂಭ್ರಮ

Contributed by: praveendalabhanjan91@gmail.com|Vijaya Karnataka•
grand celebration of dussehra festival in homes
ಮನೆ,ಮನಗಳಲ್ಲಿಕಳೆಗಟ್ಟಿ ದಸರಾ ಸಂಭ್ರಮ

ವಿಕ ಸುದ್ದಿಲೋಕ ಶ್ರೀರಾಮನಗರ
ಗ್ರಾಮ ಹಾಗೂ ಸಿದ್ದಾಪುರದಲ್ಲಿದೇವಿ ದೇವಸ್ಥಾನಗಳಲ್ಲಿಭಾನುವಾರ ದಸರಾ ಹಬ್ಬ ಕಳೆಗಟ್ಟಿತ್ತು.

ಗ್ರಾಮದ ಕನಕದುರ್ಗಮ್ಮ ದೇವಸ್ಥಾನದಲ್ಲಿವಿಶೇಷ ಪೂಜಾ ಕಂಕರ್ಯಗಳು ನಡೆದವು. ಕುಂಕುಮಾರ್ಚನೆ, ಅಭಿಷೇಕ ಜರುಗಿದವು. ದೇವಿಗೆ ಬಾಲತ್ರಿಪುರ ಸುಂದರಿಯನ್ನಾಗಿ ಮಾಡಿ ಪೂಜಿಸಲಾಯಿತು.

ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನ ಕಮಿಟಿ ಅಧ್ಯಕ್ಷ ಕರಟೂರಿ ವೆಂಕಟೇಶ್ , ಕಮಿಟಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಸಿದ್ದಾಪುರ: ಗ್ರಾಮ ದೇವತೆ ದುಗಲಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸಲ್ಲಿಸಲಾಯಿತು. ಜನರು ಕುಟುಂಬ ಸಮೇತ ಬಂದು ದೇವಿಯ ದರ್ಶನ ಮಾಡಿಕೊಂಡರು.

ಮುತ್ತೈದೆಯರು ಕುಂಕಮಾರ್ಚನೆ ಮಾಡಿ ಒಳಿತಿಗಾಗಿ ಪ್ರಾರ್ಥನೆ ಮಾಡಿದರು.

11 ಶ್ರೀರಾಮಮಗರ 01

ಶ್ರೀರಾಮನಗರದಲ್ಲಿಕನಕದುರ್ಗಮ್ಮ ದೇವಿಗೆ ಬಾಲತ್ರಿಪುರ ಸುಂದರಿ ಅಲಂಕಾರದೊಂದಿಗೆ ಪೂಜಿಸಿರುವುದು.

11 ಶ್ರೀರಾಮಮಗರ 02

ಸಿದ್ದಾಪುರದ ಗ್ರಾಮ ದೇವತೆ ದುಗಲಮ್ಮ ದೇವಿಗೆ ಭಾನುವಾರ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

ಓದಲೇ ಬೇಕಾದ ಸುದ್ದಿ