*ದಸರಾ ಕ್ರೀಡಾಕೂಟಕ್ಕೆ ಚಾಲನೆ

Contributed by: chandrubennur@gmail.com|Vijaya Karnataka•
inauguration of dasara sports festival
ದಸರಾ ಕ್ರೀಡಾಕೂಟಕ್ಕೆ ಚಾಲನೆ

ಸಿಂಧನೂರು : ತಾಲೂಕಿನ ಅಂಬಾಮಠದಲ್ಲಿದಸರಾ ಹಬ್ಬದ ನಿಮಿತ್ತ ಜಗದಂಬಾ ಯುವಕ ಮಂಡಳಿ, ಸಿದ್ಧಪರ್ವತ ಯುವಕ ಮಂಡಳಿ ಸಹಯೋಗದಲ್ಲಿ28ನೇ ವರ್ಷದ ಗ್ರಾಮೀಣ ಮಟ್ಟದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಭಾನುವಾರ ಚಾಲನೆ ನೀಡಲಾಯಿತು.
15ನೇ ವರ್ಷದ ಕಬಡ್ಡಿ , ವಾಲಿಬಾಲ್ ದಸರಾ ಕ್ರೀಡಾಕೂಟಗಳು ನಡೆಯುತ್ತಿದ್ದು, ಮೊದಲ ದಿನದಂದು ಎಫ್ ಸಿಸಿ ರೌಡಕುಂದಾ ಮತ್ತು ಬಿಸಿಸಿ ಸಾಲಗುಂದಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಲಾಯಿತು. ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ರಂಗನಗೌಡ ಗೊರೇಬಾಳ, ಸದಸ್ಯರಾದ ಶಿವಪ್ಪ, ರಾಘವೇಂದ್ರರೆಡ್ಡಿ, ನಾಗರಾಜ ಜಿನ್ನದ, ಗಾರಪಾಟಿ ವೀರರಾಜು, ಖಾಸಿಂ ಅಲಿ, ನಾಗಪ್ಪ ಮುರಳಿ, ಜೆಐವಿಸಿಸಿ ಸೋಮಲಾಪುರ ಸಂಘದ ಸದಸ್ಯರಾದ ಸುರೇಶ ಗೆಜ್ಜೆಳ್ಳಿ, ರಮೇಶ ಕೆ., ಪ್ರಕಾಶ ವಿ., ರಡ್ಡೆಪ್ಪ ಎಚ್ ., ಶರಣಪ್ಪ ಕೆ., ಮಹಾಂತೇಶ, ಶ್ರೀಶೈಲ, ಚಂದ್ರು ಜಾಗೀರದಾರ, ನವೀನ್ , ಪ್ರಜ್ವಲ್ , ರಾಮಣ್ಣ ಪೂಜಾರಿ ಇದ್ದರು.

---

ಆರ್ ಸಿಎಚ್ 12ಎಸ್ ಎನ್ ಡಿ2: ಸಿಂಧನೂರು ತಾಲೂಕಿನ ಅಂಬಾಮಠದಲ್ಲಿಅಂಬಾದೇವಿ ದಸರಾ ಮಹೋತ್ಸವದ ನಿಮಿತ್ತ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಓದಲೇ ಬೇಕಾದ ಸುದ್ದಿ