ಕೈಕುಂಜೆ ಅಲೆತ್ತೂರು ಸಂಪರ್ಕ ರಸ್ತೆ, ಕಿರು ಸೇತುವೆ ಉದ್ಘಾಟನೆ

Contributed by: mambadynews@gmail.com|Vijaya Karnataka•
inauguration of kaikunze aletta connection road and minor bridge high priority for rural infrastructure
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ರಾಜೇಶ್ ನಾಯ್ ್ಕ

ವಿಕ ಸುದ್ದಿಲೋಕ ಬಂಟ್ವಾಳ
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಸ್ತೆ ಸಂಪರ್ಕ ಪ್ರಮುಖವಾಗಿದ್ದು, ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ ್ಕ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಬಂಟ್ವಾಳದ ಬಿ.ಸಿ.ರೋಡ್ ನಿಂದ ಕೈಕುಂಜೆ ಅಲೆತ್ತೂರು ಮೂಲಕ ಗ್ರಾಮದೈವ ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ 20 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ 30 ಲಕ್ಷ ರೂ. ವೆಚ್ಚದಲ್ಲಿನಿರ್ಮಾಣಗೊಂಡ ಕಿರು ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ದೈನಂದಿನ ಸಂಚಾರ ಸುಗಮವಾಗುವುದರ ಜತೆಗೆ ಸ್ಥಳೀಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ, ಸೇತುವೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಿ ಕೈಗೆತ್ತಿಕೊಳ್ಳುವ ಇಂತಹ ಕಾಮಗಾರಿಗಳು ಗ್ರಾಮೀಣ ಭಾಗದ ಜನರಿಗೆ ದೀರ್ಘಕಾಲದ ಪ್ರಯೋಜನ ಒದಗಿಸಲಿವೆ ಎಂದು ಅವರು ಹೇಳಿದರು.

ಬಿ.ಸಿ.ರೋಡ್ ನಿಂದ ಕೈಕುಂಜೆ ಅಲೆತ್ತೂರು ಮೂಲಕ ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ. ಕಿರು ಸೇತುವೆಯೂ ನಿರ್ಮಾಣಗೊಂಡಿರುವುದರಿಂದ ಈ ಭಾಗದ ಜನರ ಸಂಚಾರ ಮತ್ತಷ್ಟು ಸುಗಮವಾಗಲಿದೆ ಎಂದು ತಿಳಿಸಿದರು.

ಪುರಸಭೆ ಮಾಜಿ ಸದಸ್ಯ ಗೋವಿಂದ ಪ್ರಭು, ಬೂತ್ ಅಧ್ಯಕ್ಷರಾದ ಶಿವರಾಜ್ ಕೈಕುಂಜೆ, ನಿತಿನ್ ಅಲೆತ್ತೂರು, ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುರೇಶ್ ಟೈಲರ್ ಕೈಕಂಬ, ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಶೆಟ್ಟಿ ಕೈಕಂಬ, ಮಂಗಳ ಫ್ರೆಂಡ್ಸ್ ಅಲೆತ್ತೂರು ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಅಶ್ವಥ್ ಶೆಟ್ಟಿ ಅಲೆತ್ತೂರು, ವಿಜಯ್ ಅಲೆತ್ತೂರು, ಪ್ರಣಾಮ್ ರಾಜ್ ಅಜ್ಜಿಬೆಟ್ಟು ಹಾಗೂ ಮಹೇಶ್ ಜುಮಾದಿಗುಡ್ಡೆ, ಸ್ಥಳೀಯರಾದ ವಾಸು ಮಾಸ್ಟರ್ , ಪ್ರಶಾಂತ್ , ಶಶಿಧರ ಕೈಕುಂಜೆ ಉಪಸ್ಥಿತರಿದ್ದರು.

ಚಿತ್ರ: 11ಬಿಎಚ್ ಕೈಕುಂಜೆ

ಕೈಕುಂಜೆ ಅಲೆತ್ತೂರು ಸಂಪರ್ಕ ರಸ್ತೆ ಅಭಿವೃದ್ಧಿ ಕಾರ್ಯವನ್ನು ಶಾಸಕ ರಾಜೇಶ್ ನಾಯ್ ್ಕ ಉದ್ಘಾಟಿಸಿದರು.

ಓದಲೇ ಬೇಕಾದ ಸುದ್ದಿ