ತುಮಕೂರು: ತಾಲೂಕಿನ ಊರ್ಡಿಗೆರೆ ಹೋಬಳಿ ಸೀತಕಲ್ಲುಗ್ರಾಮದ ಪ್ರಸಿದ್ಧ ಚಾಮುಂಡೇಶ್ವರಿ(ಪಟಾಲಮ್ಮ) ದೇವಾಲಯದಲ್ಲಿನವರಾತ್ರಿ ಅಂಗವಾಗಿ ಲೋಕಕಲ್ಯಾಣಾರ್ಥ ಅ.16ರಂದು 22ನೇ ವರ್ಷದ ಮಹಾ ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿದೆ ಎಂದು ಸೀತಕಲ್ಲುಹೊರನಿವಾಸಿಗಳ ಒಕ್ಕೂಟದ ಪ್ರಧಾನ ಕಾರ ್ಯದರ್ಶಿ ಎಸ್ .ಎನ್ . ಕೃಷ್ಣಯ್ಯ ತಿಳಿಸಿದ್ದಾರೆ.ಒಕ್ಕೂಟದಿಂದ ಆಯೋಜಿಸಿರುವ ಧಾರ್ಮಿಕ ಕಾರ ್ಯಕ್ರಮದ ಅಂಗವಾಗಿ ಅ.11ರಂದು ಬೆಳಗ್ಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಗುವುದು. ಅ.15ರಂದು ಸಂಜೆ ಸ್ವಸ್ತಿವಾಚನ, ದೇವನಾಂದಿ, ಮಾತೃಕಾ ಪೂಜೆ, ಪಂಚಗವ್ಯ, ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿ, ಅ.16ರಂದು ಬೆಳಗ್ಗೆ 6 ಗಂಟೆಗೆ ಸುಪ್ರಭಾತ, 6.30ಕ್ಕೆ ಯಾಗೇಶ್ವರಾರಾಧನೆ, 7 ಗಂಟೆಗೆ ಅಗ್ನಿಪ್ರತಿಷ್ಠೆ ಹಾಗೂ ವಿವಿಧ ಪೂಜಾ ಕೈಂಕರ ್ಯಗಳು ಜರುಗಲಿವೆ. ಮಧ್ಯಾಹ್ನ 12.05ಕ್ಕೆ ಮಹಾ ಚಂಡಿಕಾ ಹೋಮ ಮತ್ತು ಮಹಾಪೂರ್ಣಾಹುತಿ ನೆರವೇರಲಿದೆ. ಬಳಿಕ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಗುವುದು ಎಂದು ತಿಳಿಸಿದ್ದಾರೆ.