ಮಸ್ಕಿ: ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಪ್ರಕಟಿಸಿರುವ ಮೀಸಲು ಕ್ಷೇತ್ರವಾರು ಕರಡು ಪಟ್ಟಿಯಲ್ಲಿಹಿಂದುಳಿದ ವರ್ಗ ಗಳಿಗೆ ಮೀಸಲು ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಕರಿಯಪ್ಪ ಹಾಲಾಪುರ ದೂರಿದರು. ಇಲ್ಲಿಯ ಪತ್ರಿಕಾ ಭವನದಲ್ಲಿಸುದ್ದಿಗಾರರ ಜತೆ ಭಾನುವಾರ ಮಾತನಾಡಿ, ‘‘ಮಸ್ಕಿ ತಾಲೂಕಿನ ಒಟ್ಟು 16 ತಾಪಂ ಕ್ಷೇತ್ರಗಳಲ್ಲಿಹಿಂದುಳಿದ ವರ್ಗದವರಿಗೆ ಒಂದೂ ಸ್ಥಾನ ಮೀಸಲು ನೀಡದೆ ಅನ್ಯಾಯ ಮಾಡಲಾಗಿದೆ. ಜಿಲ್ಲಾಪಂಚಾಯಿತಿ ಚುನಾವಣೆ ಮೀಸಲಿನಲ್ಲಿಕೂಡ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಹಿಂದುಳಿದ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯ ನೀಡಲು ಮುಂದಾಗಬೇಕು,’’ ಎಂದು ಆಗ್ರಹಿಸಿದರು.ನಾಗಭೂಷಣ ಬಾರಕೇರ, ಆನಂದ್ ವೀರಾಪುರ, ರವಿ ಮಡಿವಾಳ, ಬಸವರಾಜ ಚಿಕ್ಕಕಡಬೂರು, ಕಾಳಪ್ಪ ಕಣ್ಣೂರು ಇದ್ದರು.