ಭಾರತ ವಿರುದ್ಧದ ಏಕದಿನ ಸರಣಿಗೆ ವಿಶೇಷ ಜರ್ಸಿ ಧರಿಸಲಿರುವ ಕಿವೀಸ್

Contributed by: manjunath.gowda@timesgroup.com|Vijaya Karnataka•
new zealand wearing special jersey against india in odi
ವೆಲ್ಲಿಂಗ್ಟನ್ : ಭಾರತ ವಿರುದ್ಧದ ಮುಂದಿನ ತಿಂಗಳ ಏಕದಿನ ಸರಣಿಯಲ್ಲಿನ್ಯೂಜಿಲೆಂಡ್ ತಂಡವು ಕಮಲದ ಹೂವು ಹಾಗೂ ಮಂಡಲ ಕಲೆಯನ್ನು ಒಳಗೊಂಡ ವಿಶೇಷ ಸೀಮಿತ ಆವೃತ್ತಿಯ ಜರ್ಸಿಯನ್ನು ಧರಿಸಲಿದೆ. ಉಭಯ ದೇಶಗಳ ನಡುವಿನ ಕ್ರೀಡಾ ಬಾಂಧವ್ಯಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿಈ ವಿಶೇಷ ಜರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ.

‘ಕೊತಾಹಿತಾಂಗ’ ಏಕದಿನ ಜರ್ಸಿಯು ಕ್ರಿಕೆಟ್ ಮೇಲಿನ ಪ್ರೀತಿಯಿಂದ ಬೆಸೆದುಕೊಂಡಿರುವ ಎರಡು ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ. ನ್ಯೂಜಿಲೆಂಡ್ ಮತ್ತು ಭಾರತದ ನಡುವಿನ ಹಂಚಿಕೊಂಡ ಇತಿಹಾಸ ಹಾಗೂ ಪರಸ್ಪರ ಗೌರವವನ್ನು ಪ್ರತಿಬಿಂಬಿಸುವ ರೀತಿಯಲ್ಲಿಜರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಿಳಿಸಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿಭಾರತವು ಮೊದಲು ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿ ಅಕ್ಟೋಬರ್ 22ರಂದು ಆರಂಭವಾಗಲಿದೆ. ಬಳಿಕ ನವೆಂಬರ್ 4ರಿಂದ ಐದು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಓದಲೇ ಬೇಕಾದ ಸುದ್ದಿ