ಸೃಜನ್ ಸಂಘಟನ್ ಅಭಿಯಾನ-2 ಸಭೆ

Contributed by: vijay.hugar@timesgroup.com|Vijaya Karnataka•
effectiveness of the srujan sanghatan abhiyana 2 meeting and subsequent processes
ಸೃಜನ್ ಸಂಘಟನ್ ಅಭಿಯಾನ-2 ಸಭೆ

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ನೇಮಕ ಪ್ರಕ್ರಿಯೆಯ ಅಂಗವಾಗಿ ಸೃಜನ್ ಸಂಘಟನ್ ಅಭಿಯಾನ-2ರ ಜಿಲ್ಲಾವೀಕ್ಷಕರ ಸಭೆ ಭಾನುವಾರ ನಡೆಯಿತು.
ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ವೀಕ್ಷಕ ಸಾಯಿನಾಥ ಗಾಂವಕರ ಇವರ ನೇತೃತ್ವದ ತಂಡ ಗ್ರಾಮೀಣ ಭಾಗದ ಬ್ಲಾಕ್ ಅಧ್ಯಕ್ಷರು ನೇಮಕಾತಿ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಲು ಹಲವು ಆಕಾಂಕ್ಷಿಗಳು ವೀಕ್ಷಕರಿಗೆ ಅರ್ಜಿ ಸಲ್ಲಿಸಿದರು.

ಸಭೆಯಲ್ಲಿಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಶಾಸಕ ಎನ್ .ಎಚ್ .ಕೋನರೆಡ್ಡಿ, ಪಶ್ಚಿಮ ಪದವಿಧರರ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ, ಮಾಜಿ ಅಧ್ಯಕ್ಷ ಅನಿಲ್ ಕುಮಾರ ಪಾಟೀಲ…, ಬ್ಲಾಕ್ ಅಧ್ಯಕ್ಷರಾದ ಸುರೇಶ್ ಕರಿಗೌಡರ, ಮಂಜುನಾಥ ಮುರಳ್ಳಿ, ವರ್ಧಮಾನ ಹಿರೇಗೌಡರ, ಮಂಜುನಾಥ ಮಾಯಣ್ಣವರ, ಸಲೀಂ ಕ್ಯಾಲ್ಕೊಂಡ, ಜಗದೀಶ್ ಉಪ್ಪಿನ, ಮಂಜುನಾಥ ಮಲ್ಲಪ್ಪನವರ, ಸ್ವಾತಿ ಮಳಗಿ, ರೇಣುಕಾ ಕಳ್ಳಿಮನಿ, ಶಿವಾನಂದ ಬೆಂತೂರು, ಅರವಿಂದ ಕಟಗಿ, ಮುಂತಾದವರು ಇದ್ದರು.

ಫೋಟೋ: 12 ಸಂತೋಷ ಕಾಂಗ್ರೆಸ್

ಹುಬ್ಬಳ್ಳಿಯಲ್ಲಿಭಾನುವಾರ ನಡೆದ ಸೃಜನ್ ಸಂಘಟನ್ ಅಭಿಯಾನ-2ರ ಜಿಲ್ಲಾವೀಕ್ಷಕರ ಸಭೆಯಲ್ಲಿಚಂದ್ರಶೇಖರ ಜುಟ್ಟಲ ಮಾತನಾಡಿದರು. ಸಾಯಿನಾಥ ಗಾಂವಕರ, ಎನ್ .ಎಚ್ .ಕೋನರಡ್ಡಿ ಮತ್ತಿತರರು ಇದ್ದರು.

ಓದಲೇ ಬೇಕಾದ ಸುದ್ದಿ